"Karnataka Balam Ajeyam": Aim to bring the stories of the state's history to the people: C.P. Yogeshwar

ಕರ್ನಾಟ ಬಲಂ ಅಜೇಯಂ” ಚಿತ್ರಕ್ಕೆ ಬಾದಾಮಿಯಲ್ಲಿ ಹಾಡಿನ ಚಿತ್ರೀಕರಣ: ಜನರ ಪ್ರೀತಿ ಉಳಿಸಿಕೊಳ್ಳುವ ಪ್ರಯತ್ನ – ನಟ ಧ್ಯಾನ್ ಯೋಗೇಶ್ವರ - CineNewsKannada.com

ಕರ್ನಾಟ ಬಲಂ ಅಜೇಯಂ” ಚಿತ್ರಕ್ಕೆ ಬಾದಾಮಿಯಲ್ಲಿ ಹಾಡಿನ ಚಿತ್ರೀಕರಣ: ಜನರ ಪ್ರೀತಿ ಉಳಿಸಿಕೊಳ್ಳುವ ಪ್ರಯತ್ನ – ನಟ ಧ್ಯಾನ್ ಯೋಗೇಶ್ವರ

“ಕರ್ನಾಟ ಬಲಂ ಅಜೇಯಂ ” ಚಿತ್ರದ ಮೂಲಕ ಕನ್ನಡದ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವ ಹಿರಿಯ ನಟ ಮತ್ತು ರಾಜಕಾರಣಿ ಸಿ.ಪಿ ಯೋಗಶ್ಬರ್ ಅವರ ಪುತ್ರ ಧ್ಯಾನ್ ಯೋಗೇಶ್ವರ ನಟನೆಯ ಹಾಡಿನ ಚಿತ್ರೀಕರಣ ಬಾಗಲಕೋಟೆಯ ಬಾದಾಮಿಯ ಐತಿಹಾಸಿಕ ಬೆಟ್ಟದ ಮೇಲೆ ಕಳೆದ 6 ದಿನದಿಂದ ನಡೆದಿದೆ.

ಹಿರಿಯ ನಿರ್ದೇಶಕ ಎಸ್ ನಾಗಣ್ಣ ನಿರ್ದೇಶನದಲ್ಲಿ ನೃತ್ಯ ನಿರ್ದೇಶಕ ಭಜರಂಗಿ ಮೋಹನ್ ಮತ್ತವರ ತಂಡ ಹೇಳಿಕೊಟ್ಟ ನೃತ್ಯಕ್ಕೆ ನಟ ಧ್ಯಾನ್ ಯೋಗೇಶ್ವರ ನೂರಾರು ನೃತ್ಯಗಾರರೊಂದಿಗೆ ಹೆಜ್ಜೆ ಹಾಕುತ್ತಿದ್ದರು ಆ ಸನ್ನಿವೇಶವನ್ನು ಹಿರಿಯ ಛಾಯಾಗ್ರಾಹಕ ಶೇಖರ್ ಚಂದ್ರು ಚಿತ್ರಿಸಿಕೊಳ್ಳುತ್ತಿದ್ದರು. ಮೊದಲ ಚಿತ್ರದಲ್ಲಿ ಧ್ಯಾನ್ ಚಿತ್ರರಂಗದಲ್ಲಿ ಮೋಡಿ ಮಾಡುವ ಭರವಸೆ ಮೂಡಿಸಿದ್ದಾರೆ.

ಕರ್ನಾಟ ಬಲಂ ಹಾಡಿಗೆ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಈ ಗೀತೆಯನ್ನು ತ್ರಿಲೋಕ್ ತ್ರಿವಿಕ್ರಮ್ ಬರೆದಿದ್ದಾರೆ. ಈ ಹಾಡನ್ನು ಖ್ಯಾತ ಗಾಯಕ ಬಳಿ ಹಾಡಿಸಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಟ್ರಾಕ್ ಹಾಡಿನೊಂದಿಗೆ ಹಾಡಿನ ಚಿತ್ರೀಕರಣ ನಡೆದಿದೆ.

ಹಾಡಿನ ಚಿತ್ರೀಕರಣ ವೀಕ್ಷಣೆಯ ಬಳಿಕ ಬೆಟ್ಟದ ಕೆಳೆಗೆ ಪತ್ರಿಕಾಗೋಷ್ಡಿಗೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ನಿರ್ಮಾಪಕ ಸಿಪಿ ಯೋಗೃಶ್ವರ, ನಟ ಧ್ಯಾನ್ ಯೋಗೇಶ್ವರ, ನಟಿ ಮಣಿಕಾ ವಿಶ್ವಕರ್ಮ, ನಿರ್ದೇಶಕ ಎಸ್ .ನಾಗಣ್ಣ ಹಾಗು ಧ್ಯಾನ್ ಅವರ ತಾಯಿಯ ಪಾತ್ರ ಮಾಡುತ್ತಿರುವ ಹಿರಿಯ ನಟಿ ಲಯ, ಹಿರಿಯ ಕಲಾವಿದರಾದ ರಾಜ್ ಬಲವಾಡಿ, ಸಂಪತ್ ಮೈತ್ರೇಯಾ, ಮಾನಸಿ ಸುದೀರ್, ಮಜಾ ಟಾಕೀಸ್ ಪವನ್ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

ನಟ ಧ್ಯಾನ್ ಯೊಗೇಶ್ವರ ಮಾತನಾಡಿ, ಕರ್ನಾಟ ಬಲಂ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದೇನೆ. ಕಳೆದ 20ಕ್ಕೂ ಅಧಿಕ ದಿನಗಳಿಂದ ಚಿತ್ರೀಕರಣ ನಡೆಯುತ್ತಿದೆ, ಇಲ್ಲಿನ ಜನರು ತೋರಿಸುತ್ತಿರುವ ಪ್ರೀತಿಗೆ ಅಬಾರಿ, ಅದನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಒಳ್ಳೆ ಸಿನಿಮಾ ನೀಡುವ ಎಲ್ಲಾ ಪ್ರಯತ್ನ ಮಾಡಿದ್ದೇವೆ. ಚಿತ್ರಕ್ಕೆ ಎಲ್ಲೆ ಸಹಕಾರವಿರಲಿ, ಚಿತ್ರವನ್ನು ಜನವರಿ 15ಕ್ಕೆ ತೆರೆಗೆ ತರುವ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ ಎಂದರು

ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಚಿಕ್ಕವಯಸ್ಸಿನಿಂದ ನಟನಾಗಬೇಕು ಎನ್ನುವ ಹಂಬಲವಿತ್ತು, ತಂದೆ ಬೆಂಬಲ ನೀಡುತ್ತಿರಲಿಲ್ಲ. ಇತ್ತೀಚಿಗೆ ನಾನು ಎತ್ತರ ಬೆಳೆದಿದ್ದೇನೆ.ಪಿಟ್ ಇದ್ದೇನೆ ಎಂದು ಬೆಂಬಲ ನೀಡಿದ್ದಾರೆ. ಅದಕ್ಕೆ ತಕ್ಕಂತರ ಡ್ಯಾನ್ಸ್, ಪೈಟ್, ನಟನೆ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ತರಬೇತಿ ಪಡೆದಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin