Achyutakumar in the role of "Karunakara" in the movie "Just Married"
“ಜಸ್ಟ್ ಮ್ಯಾರೀಡ್” ಚಿತ್ರದಲ್ಲಿ “ಕರುಣಾಕರ” ಪಾತ್ರದಲ್ಲಿ ಅಚ್ಯುತಕುಮಾರ್
ಸಂಗೀತ ಸಂಯೋಜಕರಾಗಿ ಭಾರತದಾದ್ಯಂತ ಹೆಸರು ಮಾಡಿರುವ ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್.ಬಾಬಿ ನಿರ್ಮಿಸಿ ಸಿ.ಆರ್.ಬಾಬಿ ಅವರೆ ಮೊದಲ ಬಾರಿಗೆ ನಿರ್ದೇಶಿಸಿರುವ ಹಾಗೂ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್”

ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಭಾರತ ಚಿತ್ರರಂಗದ ಹೆಸರಾಂತ ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಅಚ್ಯುತಕುಮಾರ್ “ಜಸ್ಟ್ ಮ್ಯಾರೀಡ್” ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.
“ಕರುಣಾಕರ” ಪಾತ್ರವನ್ನು ಅಚ್ಯುತಕುಮಾರ್ ನಿರ್ವಹಿಸಿದ್ದಾರೆ. ಅಚ್ಯುತಕುಮಾರ್ ಅವರ ಪಾತ್ರ ಪರಿಚಯದ ಪೆÇೀಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

