ಹರೀಶ್ ರಾಜ್ ನಿರ್ದೇಶನದ “ವೆಂಕಟೇಶಾಯ ನಮಃ” ಚಿತ್ರೀಕರಣ ಮುಕ್ತಾಯ
ಚಂದನವನದ ಕಲಾಕರ್ ನಟ , ನಿರ್ದೇಶಕ ಹರೀಶ್ ರಾಜ್ ಸಾರಥ್ಯದ “ವೆಂಕಟೇಶಾಯ ನಮಃ” ರೋಮ್ಯಾಂಟಿಕ್ ಲವ್ ಸ್ಟೋರಿ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ

ಹುಡುಗಿ ಕೈ ಕೊಟ್ಟಾಗ ಲೈಫ್ ನ ಚಾಲೆಂಜ್ ಆಗಿ ತಗೊಂಡು ಲವ್ ಮಾಡದೆ, ಹುಡುಗೀರ ಜೊತೆ ಚೆಲ್ಲಾಟವಾಡುತ್ತಾ , ಎಂಜಾಯ್ ಮಾಡಬೇಕೆಂಬ ವೆಂಕಿ ಅಲಿಯಾಸ್ ವೆಂಕಟೇಶನಿಗೆ ಮತ್ತೆ ಲೈಫ್ನಲ್ಲಿ ಲವ್ ಆಗುತ್ತಾ ಎಂಬುದೇ ಕಥಾಹಂದರ. ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಸಂಪೂರ್ಣ ಮನರಂಜನೆಯ ಜೊತೆ ನೀಡುತ್ತೇವೆ ಎನುತ್ತಾರೆ ಒಟ್ಟಿನಲ್ಲಿ ಆ ವೆಂಕಟೇಶ್ವರನ ಆಶೀರ್ವಾದ ಮತ್ತು ಜನಗಳ ಪೆÇ್ರೀತ್ಸಾಹ ವಿರಲಿ ಎನುತ್ತಾರೆ ಹರೀಶ್ ರಾಜ್
ನಿರ್ಮಾಪಕ ಪಿ. ಜನಾರ್ದನ , ನಿರ್ದೇಶಕರು ಈ ಕಾಮಿಡಿ ಸಬ್ಜೆಕ್ಟ್ ಹೇಳಿದ್ರು, ನಮಗೆ ಬಹಳ ಇಷ್ಟವಾಗಿ ಚಿತ್ರವನ್ನ ಆರಂಭಿಸಿದ್ದೆವು ಇದೀಗ ಚಿತ್ರೀಕರಣ ಮುಗಿದಿದೆ ನಮಗೆ ಎಲ್ಲರೂ ಸಪೋರ್ಟ್ ಮಾಡಿ ಎಂದು ಕೇಳಿಕೊಂಡರು.

ನಾಯಕ ಹರೀಶ್ ರಾಜ್ ಸಾಫ್ಟ್ವೇರ್ ಉದ್ಯೋಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ತಾಯಿಯ ಪಾತ್ರದಲ್ಲಿ ಹಿರಿಯ ನಟಿ ಉಮಾಶ್ರೀ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ನಾಯಕಿಯಾಗಿ ಪ್ರಕೃತಿ ಪ್ರಸಾದ್ ನಟಿಸಿದ್ದಾರೆ . ದೊಡ್ಡ ತಾರಾ ಬಳಗವೇ ಹೊಂದಿದೆ.ಹಿರಿಯ ನಟ ಅಶೋಕ್,ಉಮೇಶಣ್ಣ, ತಬಲಾ ನಾಣಿ ,ನಾಯಕಿಯ ತಾಯಿಯಾಗಿ ಚಿತ್ಕಲ ಬಿರಾದರ್ , ರಾಘು ರಾಮನ ಕೊಪ್ಪ , ಸೇರಿದಂತೆ ಹಲವಾರು ಕಲಾವಿದರಿದ್ದಾರೆ

ಚಿತ್ರಕ್ಕೆ ಶಿವಶಂಕರ್ ಛಾಯಾಗ್ರಾಹಣ ,ಪ್ರವೀಣ್ ಶ್ರೀನಿವಾಸ್ ಮೂರ್ತಿ ಸಂಗೀತ , ಪ್ರಮೋದ್ ಮರುವಂತೆ , ಚೇತನ್ ಕುಮಾರ್, ಗೌವ್ಸ್ ಪೀರ್ ಸಾಹಿತ್ಯ , ಜೀವನ್ ಪ್ರಕಾಶ್ ಸಂಕಲನ , ವಿನಯ್. ಜಿ. ಆಲೂರ್ ಡಿ.ಐ, ಮಿತೇಶ್, ಸಂತೋಷ್. ಸಿ.ಎಂ ಸಹ ನಿರ್ದೇಶನವಿದೆ ಮೊರು ಹಾಡುಎರಡು ಫೈಟ್ ಚಿತ್ರದಲ್ಲಿವೆ

