The emotional song 'Tappu Madodu Sahaja' from the movie 'Just Married' was released

ಜಸ್ಟ್ ಮ್ಯಾರೀಡ್’ ಚಿತ್ರದ ಭಾವಪೂರ್ಣ ಗೀತೆ ‘ತಪ್ಪು ಮಾಡೋದು ಸಹಜ’ ಬಿಡುಗಡೆ - CineNewsKannada.com

ಜಸ್ಟ್ ಮ್ಯಾರೀಡ್’ ಚಿತ್ರದ ಭಾವಪೂರ್ಣ ಗೀತೆ ‘ತಪ್ಪು ಮಾಡೋದು ಸಹಜ’ ಬಿಡುಗಡೆ

ಬಹುನಿರೀಕ್ಷಿತ ಕನ್ನಡ ಸಿನಿಮಾ ‘ಜಸ್ಟ್ ಮ್ಯಾರೀಡ್’ ಚಿತ್ರದ ‘ತಪ್ಪು ಮಾಡೋದು ಸಹಜ’ ಎಂಬ ಸುಂದರ ಗೀತೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ

ಅನನ್ಯಾ ಭಟ್ ಧ್ವನಿಯಲ್ಲಿ ಮೂಡಿಬಂದಿರುವ ಹಾಡಿಗೆ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ ಹಾಗೂ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದಾರೆ. ಗೀತೆಯು ಆಧುನಿಕ ಬದುಕಿನ ಪ್ರತಿಯೊಬ್ಬರ ಜೀವನದ ಕನ್ನಡಿಯಂತಿದೆ.

ನಿರ್ದೇಶಕ ಮತ್ತು ನಟ ರಾಜ್ ಬಿ ಶೆಟ್ಟಿ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.ಸಿ.ಆರ್. ಬಾಬಿ ಬರೆದು ನಿರ್ದೇಶಿಸಿದ್ದು ಬಿ. ಅಜನೀಶ್ ಲೋಕನಾಥ್ ಮತ್ತು ಸಿ.ಆರ್. ಬಾಬಿ ನಿರ್ಮಿಸಿದ್ದಾರೆ. ವಿ.ಕೆ ಫಿಲಂಸ್ ಚಿತ್ರ ವಿತರಿಸಲಿದೆ.

ಚಿತ್ರದಲ್ಲಿ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನುಪ್ ಭಂಡಾರಿ, ಸಾಕ್ಷಿ ಅಗರ್ವಾಲ್, ಶ್ರುತಿ ಹರಿಹರನ್, ದೇವರಾಜ್, ಅಚ್ಯುತ್ ಕುಮಾರ್, ಶ್ರುತಿ ಕೃಷ್ಣ, ಮತ್ತು ಶ್ರೀಮಾನ್ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರು ಅಭಿನಯಿಸಿದ್ದಾರೆ.’ಜಸ್ಟ್ ಮ್ಯಾರೀಡ್’ ಚಿತ್ರ ಆಗಸ್ಟ್ 22 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin