Awards showered on veteran actress Padmaja Rao's short film "Lakshmi"

ಹಿರಿಯ ನಟಿ ಪದ್ಮಜಾ ರಾವ್ ನಟನೆಯ “ಲಕ್ಷ್ಮಿ” ಕಿರುಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ - CineNewsKannada.com

ಹಿರಿಯ ನಟಿ ಪದ್ಮಜಾ ರಾವ್ ನಟನೆಯ “ಲಕ್ಷ್ಮಿ” ಕಿರುಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ

ಕಿರುತೆರೆಯ ಸಾಕಷ್ಟು ವಿಭಾಗಗಳಲ್ಲಿ ಕೆಲಸಮಾಡಿ ಅನುಭವ ಪಡೆದ ಅಭಿಜಿತ್ ಪುರೋಹಿತ್ ಕಳೆದ ವರ್ಷ “ಲಕ್ಷ್ಮಿ” ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ಆ ಚಿತ್ರ ಇದೀಗ ದೇಶ ವಿದೇಶಗಳ ಫಿಲಂ ಫೆಸ್ಟಿವಲ್ ಗಳಲ್ಲಿ ಭಾಗವಹಿಸಿ ಪ್ರಶಂಸೆಯ ಜತೆ ಅಭಿನಯ, ನಿರ್ದೇಶನ, ಸಂಗೀತ, ಛಾಯಾಗ್ರಹಣ ಸೇರಿದಂತೆ ನಾನಾ ವಿಭಾಗಗಳಲ್ಲಿ 27 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ನಿರ್ದೇಶಕ ಅಭಿಜಿತ್ ಮಾತನಾಡಿ ಸಮಾರಂಭಕ್ಕೆ ಗಿರಿಜಮ್ಮ ಅವರೇ ಸೂಕ್ತ ವ್ಯಕ್ತಿ ಎಂದು ಅವರನ್ನು ಆಹ್ವಾನಿಸಿದಾಗ, ತುಂಬಾ ಖುಷಿಯಿಂದ ಬಂದಿದ್ದಾರೆ. ಲಕ್ಷ್ಮಿ ಕಿರುಚಿತ್ರ 27 ಪ್ರಶಸ್ತಿಗಳನ್ನು ಗಳಿಸಿದೆ. ಇದಕ್ಕೆ ಮಾಧ್ಯಮದವರ ಸಹಕಾರವೇ ಕಾರಣ. ಅಮ್ಮನ 70ನೇ ಹುಟ್ಟುಹಬ್ಬಕ್ಕೆ ಅವರ ಕಟೌಟ್ ಹಾಕಿಸಿದ್ದೇನೆ. ಒಬ್ಬ ಮಗನಾಗಿ 40 ವರ್ಷಗಳ ಹಿಂದೆಯೇ ಕಳೆದುಕೊಂಡಿದ್ದ ಅವರ ತಂದೆ, ತಾಯಿ ಅಲ್ಲದೆ ಪತಿಯನ್ನು ತೋರಿಸಿದ್ದೇನೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತನ್ನ ತಾಯಿಗೆ ಅವರ ತಂದೆಯ ವಿಗ್ರಹವನ್ನು ಕೊಡುಗೆಯಾಗಿ ನೀಡಿದರು.

ನಿರ್ಮಾಪಕಿ ನಳಿನಿ ಮಾತನಾಡಿ ನನ್ನ ಮಗ ನನಗೆ ಪ್ರಶಸ್ತಿ, ಗೌರವ ಎಲ್ಲವನ್ನೂ ತಂದು ಕೊಟ್ಟ. ಗಂಡ, ತಂದೆ, ತಾಯಿಯನ್ನು ತೋರಿಸಿದ. ಇಂಥ ಮಗನನ್ನು ಪಡೆಯಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೆ ಎಂದರು.

ಹಿರಿಯ ನಟಿ ಗಿರಿಜಾ ಲೋಕೇಶ್ ಮಾತನಾಡಿ ಈ ಥರದ ಮಗ ಎಲ್ಲ ತಾಯಂದಿರಿಗೂ ಸಿಗಲ್ಲ. ತನ್ನ ತಾಯಿಗೆ ಆತ ಅದೆಂಥ ಸರ್ ಪ್ರೈಸ್ ಕೊಟ್ಟಿದ್ದಾನೆ. ಈಗ ನಳಿಸಿ ಅವರೀಗ ಸ್ಟಾರ್ ಆಗಿದ್ದಾರೆ.ನಾನೂ ಕಿರುಚಿತ್ರವನ್ನು ನೋಡಿದೆ 20 ನಿಮಿಷದಲ್ಲಿ ಎಂತೆಂಥ ವಿಚಾರಗಳನ್ನು ಹೇಳಿದ್ದಾನೆ. ಹುಟ್ಟಿ ಬೆಳೆದ ಮನೆಯ ಜತೆ ಸಂಬಂಧಗಳನ್ನೂ ಉಳಿಸಿಕೊಳ್ಳುತ್ತಾನೆ ಎಂದರು.

ಚಿತ್ರದಲ್ಲಿ ನಟಿಸಿರುವ ಹಿರಿಯ ಕಲಾವಿದೆ ಪದ್ಮಜಾರಾವ್ ಮಾತನಾಡಿ ನನಗೆ ಇಂಥ ಮಹತ್ತರ ಪಾತ್ರ ಮಾಡಲು ಅಭಿ ಕಾರಣ. ಪ್ರಶಸ್ತಿಯೂ ಬಂತು. ಎಂದು ಹೇಳಿದರು.

ನಿರ್ದೇಶಕ ರಘುರಾಮ್ ಮಾತನಾಡಿ ತಮ್ಮ ತಾಯಿಯನ್ನು ನೆನೆದು ಕಣ್ಣೀರಾದರರು. ಸಂಗೀತ ನಿರ್ದೇಶಕ ಗಿರಿಧರ ದೀವಾನ್ ಕೂಡ ವೇದಿಕೆಯಲ್ಲಿದ್ದರು. ಈ ಕಾರ್ಯಕ್ರಮಕ್ಕೆ ಎಲ್ಲ ತಾಯಂದಿರನ್ನೂ ಆಹ್ವಾನಿಸಲಾಗಿತ್ತು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin