ವಿಭಿನ್ನ ಕಥೆಯ “ಕಮಲ್ ಶ್ರೀದೇವಿ” ಚಿತ್ರ ಸೆಪ್ಟಂಬರ್ 19ಕ್ಕೆ ಬಿಡುಗಡೆ
“ಗಜರಾಮ” ಚಿತ್ರದ ಬಳಿಕ ನಿರ್ದೇಶಕ ಸುನೀಲ್ ಕುಮಾರ್ ನಿರ್ದೇಶನದ ಎರಡನೇ ಚಿತ್ರ “ ಕಮಲ್ ಶ್ರೀದೇವಿ” ಮುಂದಿನವಾರ ಸೆಪ್ಟರ್ 19 ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಿನಿಮಾ ಮೇಲಿನ ನಂಬಿಕೆ ಮತ್ತು ನಿರೀಕ್ಷೆ ದುಪ್ಪಟ್ಟು ಮಾಡಿದೆ

ಹ್ಯಾಪಿಬರ್ತ್‍ಡೇ,ಬೆಂಗಳೂರು 23 ಚಿತ್ರಗಳ ಬಳಿಕ ನಟ ಸಚಿನ್ ಚಲುವರಾಯ ಸ್ವಾಮಿ ನಟನೆಯ ಮೂರನೇ ಚಿತ್ರ ಇದಾಗಿದ್ದು ಪ್ರತಿಭಾನ್ವಿತ ನಟಿ ಸಂಗೀತ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ., ನಟ ರಾಜವರ್ಧನ್ ಸಹ ನಿರ್ಮಾಣವಿದೆ
ಕಮಲ್ ಶ್ರೀದೇವಿ ಚಿತ್ರ ವಿಭಿನ್ನ ಪೋಸ್ಟರ್ ಹಾಗೂ ಟೀಸರ್ ನಿಂದ ವಿಶಿಷ್ಟವಾಗಿ ಗಮನ ಸೆಳೆದಿದ್ದು ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಸಿನಿಮಾ ಬಗ್ಗೆ ಕುತೂಹಲ ಹೆಚ್ಚುವಂತೆ ಮಾಡಿದೆ
ಕಮಲ್ ಶ್ರೀದೇವಿ ಚಿತ್ರದ ಟ್ರೈಲರ್ ಪೋಸ್ಟರ್ ಟೀಸರ್ ಹಾಗೂ ಹಾಡು ಹತ್ತಪಟ್ಟು ಹೆಚ್ಚು ಚಿತ್ರದ ಮೇಲೆ ಭರವಸೆ ಹುಟ್ಟಿಸಿದೆ. ತಾಂತ್ರಿಕ ಗುಣಮಟ್ಟ, ಪಾತ್ರಗಳ ವಿಶೇಷ ಕಮಲ್ ಶ್ರೀದೇವಿ ಚಿತ್ರ ಉದ್ಯಮದಲ್ಲಿ ಸಂಚಲನ ಸೃಷ್ಟಿಸುವ ಸೂಚನೆ ಕೊಡ್ತಿದೆ.
ಚಿತ್ರದಲ್ಲಿ ಕಿಶೋರ್,ರಮೇಶ್ ಇಂದಿರಾ, ಸಂಗೀತಾ ಭಟ್ ಸೇರಿ ಪ್ರತಿಭಾವಂತ ತಾರಾಬಳಗವಿದ್ದು ಚಿತ್ರವನ್ನ ವಿ.ಎ ಸುನೀಲ್ ಕುಮಾರ್ ನಿರ್ದೇಶಿಸಿದ್ದು ಪೂರ್ಣ ಕ್ರಿಯೇಟಿವ್ ಜವಾಬ್ದಾರಿಯನ್ನ ಸಹ ನಿರ್ಮಾಪಕ ರಾಜವರ್ಧನ್ ಹೊತ್ತಿಕೊಂಡಿದ್ದಾರೆ.
ಈ ವೇಳೆ ಮಾತನಾಡಿದ ಸಹ ನಿರ್ಮಾಪಕ ರಾಜವರ್ಧನ್ ನಟಿ ಸಂಗೀತಾ ಭಟ್ ಅಭಿನಯಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ಎಲ್ಲಾ ಪ್ರಶಸ್ತಿಗಳು ಇವರಿಗೆ ಸಲ್ಲಬೇಕು ಎಂದು ಮೆಚ್ಚುಗೆಯ ಮಾತನಾಡಿದರು

ನಟ ಚಲುವರಾಯಸ್ವಾಮಿ ಮಾತನಾಡಿ ಚಿತ್ರದಲ್ಲಿ ನಾನೊಬ್ಬ ವಿಫಲ ನಿರ್ದೇಶಕ, ಚಿತ್ರಮಂದಿರದಲ್ಲಿ ನಿಲ್ಲುವ ಕಥೆ ಚಿತ್ರದಲ್ಲಿದೆ. ಚಿತ್ರದ ಎಲ್ಲಾ ಪಾತ್ರಗಳು ಕಾಡುತ್ತವೆ ಎಂದಿದ್ದಾರೆ
ನಟಿ ಸಂಗೀತ ಭಟ್ ಮಾತನಾಡಿ ಶ್ರೀದೇವಿ ‘ಸಂಕಟ’ ವೃತ್ತಿ ಬದುಕಿಗೆ ತಿರುವು ಕೊಡಲಿದೆ. ಪಾತ್ರಕ್ಕೆ ರಿಸ್ಕ್ ತೆಗೆದುಕೊಂಡಿದ್ದೇನೆ, ವೃತ್ತಿ ಪರತೆಯನ್ನು ಕಾಪಾಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡರು


