Dr. Vishnuvardhan's eye-catching opportunity through the film "Chamayya Son of Ramachari"

“ಚಾಮಯ್ಯ ಸನ್ ಆಫ್ ರಾಮಾಚಾರಿ” ಚಿತ್ರದ ಮೂಲಕ ಡಾ, ವಿಷ್ಣುವರ್ಧನ್ ಕಣ್ತುಂಬಿಕೊಳ್ಳುವ ಸದಾವಕಾಶ - CineNewsKannada.com

“ಚಾಮಯ್ಯ ಸನ್ ಆಫ್ ರಾಮಾಚಾರಿ” ಚಿತ್ರದ ಮೂಲಕ ಡಾ, ವಿಷ್ಣುವರ್ಧನ್ ಕಣ್ತುಂಬಿಕೊಳ್ಳುವ ಸದಾವಕಾಶ

ಸಾಹಸ ಸಿಂಹ ಡಾ, ವಿಷ್ಣುವರ್ಧನ್ ಅವರನ್ನು ಮತ್ತೊಮ್ಮೆ ತೆರೆಯ ಮೇಲೆ ಕಣ್ತುಂಬಿಕೊಳ್ಳುವ ಅವಕಾಶವನ್ನು “ಚಾಮಯ್ಯ ಸನ್ ಆಫ್ ರಾಮಾಚಾರಿ” ಚಿತ್ರದ ಮೂಲಕ ರಾಧಾಕೃಷ್ಣ ಪಲ್ಲಕ್ಕಿ ಅಭಿಮಾನಿಗಳಿ ಸುವರ್ಣಾವಕಾಶ ಒದಗಿಸಿದ್ದಾರೆ.

“ಚಾಮಯ್ಯ ಸನ್ ಆಫ್ ರಾಮಾಚಾರಿ” ಚಿತ್ರದ ಅಡಿ ಬರಹದಲ್ಲಿ ‘ಕೋಟೆ ನಾಡಿನ ನಾಗರ ಹಾವು’ ಎಂಬ ಅಡಿಬರಹವಿದೆ. ಚಿತ್ರ ಬಿಡುಗಡೆಗೆ ಸಜ್ಜಾಗಿರುವ ಹಿನ್ನೆಲೆಯಲ್ಲಿ ಟ್ರೈಲರ್ ಬಿಡುಗಡೆ ಮಾಡಿದ್ದು ಗಮನ ಸೆಳೆದಿದೆ

ಪಲ್ಲಕ್ಕಿ ಬರವಣಿಗೆ, ನಿರ್ದೇಶನ ಮತ್ತು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಾಧಾಕೃಷ ಪಲ್ಲಕ್ಕಿ ಬಂಡವಾಳ ಹೂಡಿದ್ದು, ಗೌತಮ್ ಪಲ್ಲಕ್ಕಿ ಮತ್ತು ವಿ.ಗೋವಿಂದರಾಜು ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ.

ನಿರ್ದೇಶಕ ಪಲ್ಲಕ್ಕಿ ಮಾತನಾಡಿ ಸಿನಿಮಾದ ಒಂದಳೆ ಸಾರಾಂಶ ಈಗಾಗಲೇ ಹೇಳಿದ್ದೇನೆ. ಕೆಲವು ಸನ್ನಿವೇಶದಲ್ಲಿ ಚಿತ್ರದುರ್ಗದ ಕೋಟೆ ಬಳಸದೆ, ಹಿನ್ನಲೆಯಲ್ಲಿರುವ ಮಹಾನ್ ನಾಯಕರ ಕೋಟೆಗಳ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆ. ಹಾಗೂ ಇವರೆಲ್ಲರ ಚರಿತ್ರೆಗಳು ಸಣ್ಣದಾಗಿ ಬಂದು ಹೋಗುತ್ತವೆ. ಬೆಂಗಳೂರು, ಬಾದಾಮಿ, ಬನಶಂಕರಿ, ಐಹೊಳೆ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಜಲೀಲ್ (ಅಂಬರೀಷ್) ಮಗನಾಗಿ ಚೋಟಾ ಜಲೀಲ್ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಕೊಲೆ ತನಿಖೆ ಮಾಡುವ ರೋಲ್ ನಿಭಾಯಿಸಿದ್ದೇನೆ ಎಂದರು

ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ ಸೆಪ್ಟಂಬರ್ 18ರಂದು ತೆರೆಗೆ ತರುವ ಯೋಜನೆ ಇತ್ತು. ಆದರೆ ಈಗಾಗಲೇ 10 ಸಿನಿಮಾಗಳು ತೆರೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸಾಹಸ ಸಿಂಹ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಪ್ರದರ್ಶನ ಮಾಡಲು ಚಿಂತನೆ ನಡೆಸಲಾಗಿದೆ. ಮೈಸೂರು, ಚಿತ್ರದುರ್ಗ, ಶಿವಮೊಗ್ಗದಲ್ಲಿ ಹೆಚ್ಚು ಅಭಿಮಾನಿಗಳು ಇರುವುದರಿಂದ, ಒಂದು ದಿನದ ಗಳಿಕೆ ಹಣವನ್ನು ಅಭಿಮಾನ ಸಂಘದ ಸಮಾಜಮುಖಿ ಕಾರ್ಯಕ್ಕೆ ನೀಡಲಾಗುವುದು ಎಂದು ಮಾಹಿತಿ ಹಂಚಿಕೊಂಡರು

ನಟಿ ಜಯಶ್ರೀರಾಜ್ ಪಾತ್ರಕ್ಕಾಗಿ ಸಿದ್ದತೆ ಮಾಡಿಕೊಂಡು ಬದ್ದತೆಯಿಂದ ಪ್ರಯೋಗ ಮಾಡಿದ್ದೇನೆ ಎಂದರು.

ಪ್ರೇಮಾಗೌಡ, ಪ್ರದೀಪ್ ಶಾಸ್ತ್ರೀ, ಚೈತ್ರಾ, ಪ್ರಕಾಶ್‍ಅರಸು. ಉಳಿದಂತೆ ಸೀನೂ ಮಾರ್ಕಳಿ, ವರಪ್ರಸಾದ ಶರ್ಮ, ವಿನುತ, ರಾಘವೇಂದ್ರ, ಸುಧಾಕರ, ಸೂರ್ಯತೇಜ, ಕಾರ್ತಿಕ್, ಗುರುಕಿರಣ್, ಸಂದೀಪ್ ಹಾಗೂ ವೃತ್ತಿ ರಂಗಕರ್ಮಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

ಡಾ.ಕುಮಾರಚಲ್ಯಾ ಮತ್ತು ಹೈತೋ ಸಾಹಿತ್ಯದ ಗಜಲ್ ಗೀತೆಗಳಿಗೆ ಸ್ಯಾಂ ಸಂಗೀತ ಸಂಯೋಜಿಸಿದ್ದಾರೆ. ಹಿನ್ನಲೆ ಶಬ್ದ ಪಳನಿಸೇನಾಪತಿ, ಛಾಯಾಗ್ರಹಣ ಎಂ.ಆರ್.ಸೀನು, ಎಸ್‍ಎಫ್‍ಎಕ್ಸ್ ಗೋಪಿ, ಸಂಕಲನ ಶಿವಕುಮಾರ್. ನಿರ್ವಹಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin