“Koragajja” ready for release in various languages: A gift for the director

“ಕೊರಗಜ್ಜ” ವಿವಿಧ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದತೆ: ನಿರ್ದೇಶಕರಿಗೆ ಉಡುಗೊರೆ - CineNewsKannada.com

“ಕೊರಗಜ್ಜ” ವಿವಿಧ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದತೆ: ನಿರ್ದೇಶಕರಿಗೆ ಉಡುಗೊರೆ

ಕನ್ನಡ, ಅಸ್ಸಾಮಿ, ಚೈನಿಸ್ ಮತ್ತು ಇಂಗ್ಲಿಷ್ ಅವತರಣಿಕೆ ಸೇರಿದಂರೆ 6 ಭಾಷೆಗಳಲ್ಲಿ “ಕೊರಗಜ್ಜ” ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಕೊಚ್ಚಿ ಮತ್ತು ಚೆನ್ನೈ ನಲ್ಲಿ ಚಿತ್ರದ 3ಡಿ ಕೆಲಸ ಭರದಿಂದ ಸಾಗುತ್ತಿದೆ. ಚಿತ್ರ ತಾಂತ್ರಿಕವಾಗಿ ಯಾವುದೇ ಅಂತರಾಷ್ಟ್ರೀಯ ಮಟ್ಟದ ಸಿನಿಮಾಗೂ ಕಡಿಮೆ ಇಲ್ಲ ಎನ್ನುವ ಹಾಗೆ ಮೂಡಿ ಬರುತ್ತಿದೆ

ಅಂತಾರಾಷ್ಟ್ರೀಯ ವಿತರಣಾ ಸಂಸ್ಥೆಗಳು ಚಿತ್ರ ವಿತರಣೆ ಮಾಡಲು ಆಸಕ್ತಿ ತೋರಿಸುತ್ತಿರುವುದರಿಂದ ಖುಷಿ ಪಟ್ಟಿರುವ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ಕಳೆದ ಮೂರು ವರ್ಷಗಳಿಂದ ಚಿತ್ರದ ಮಟ್ಟದ ಬೆಳವಣಿಗೆಗೆ ಶ್ರಮಿಸುತ್ತಿರುವ ನಿರ್ದೇಶಕ ಸುಧೀರ್ ಅತ್ತಾವರ್ ಐಷಾರಾಮಿ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ

ಹೊಸ ಫ್ಲಾಟ್‍ನ ಗ್ರಹ ಪ್ರವೇಶ, ಸತ್ಯನಾರಾಯಣ ದೇವರ ವ್ರತ ಪೂಜೆ ಕೂಡಾ ನಡೆದು, ಬೆಂಗಳೂರಿಗೆ ತುಸು ಅಪರೂಪ ಅನ್ನಬಹುದಾದ ಕೊರಗಜ್ಜ ದೈವದ ಅಗೆಲು ಸೇವೆಯನ್ನು ಪತ್ರಕರ್ತರ ಮತ್ತು ಬಂದ ಅತಿಥಿಗಳ ಸಮ್ಮುಖದಲ್ಲಿ ನಡೆಸಲಾಯಿತು

ಹಿರಿಯ ನಟಿ ಭವ್ಯ ಕೊರಗಜ್ಜ ದೈವದ ಅಗೆಲು ಸೇವೆಗೆ ಇಷ್ಟವಾದ ಕುಚಲಕ್ಕಿ ಅನ್ಮ, ಹುರುಳಿ-ಬಸಳೆ ಸಾರು, ಬಂಗುಡೆ ಮೀನಿನ ಗಸಿ,ಮಿಡಿ ಮಾವಿನ ಉಪ್ಪಿನಕಾಯ್,ಕೋಳಿ ಸುಕ್ಕ,ಕಳ್ಳು ಮೊದಲಾದ ಭಕ್ಷ್ಯಗಳನ್ನು ಗೆರಸೆಯಲ್ಲಿಟ್ಟು ಸಮರ್ಪಿಸಿದರು. ನಿರ್ದೇಶಕರ ಪತ್ನಿ ರಾಜಶ್ರೀ ಸುಧೀರ್ ಎಲ್ಲಾ ಭಕ್ಷ್ಯ ಅಣಿಗೊಳಿಸಿದರೆ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ಭವ್ಯರಿಗೆ ಸಾಥ್ ನೀಡಿದರು.

ಹಿರಿಯ ನಟಿ ಭವ್ಯ ಮಾತನಾಡಿ ಕೊರಗಜ್ಜ ಸಿನಿಮಾ ಹೆಚ್ಚು ದೈವಭಕ್ತಳನ್ನಾಗಿಸಿದೆ. ಚಿತ್ರದ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಾ ಚಿತ್ರತಂಡದ ಅವಿಭಾಜ್ಯ ಅಂಗ ಎನ್ನುವ ರೀತಿಯಲ್ಲಿ ಜೊತೆಗಿದ್ದೇನೆ. ಚಿತ್ರದಲ್ಲಿ ಕೊರಗಜ್ಜನಿಗೆ ಪ್ರಪ್ರಥಮವಾಗಿ ಅಗೆಲು ಸೇವೆ ನೀಡುವ ರಾಣಿ “ಪಂಜಂದಾಯಿ” ಪಾತ್ರ ವಹಿಸಿದ್ದೆ. ಈಗ ಕೊರಗಜ್ಜನಿಗೆ ಅಗೆಲು ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆಎ ಎಂದರು

ನಿರ್ದೇಶಕ ಸುಧೀರ್ ಅತ್ತಾವರ ಮಾತನಾಡಿ ಕಳೆದ ಜನವರಿ ತಿಂಗಳಲ್ಲಿ ಬಿಡುಗಡೆಗೆ ಸರ್ವ ಸನ್ನದ್ದವಾಗಿ, ಝೀ ಮ್ಯೂಸಿಕ್ ಬ್ಯಾನರ್ ಅಡಿ ಭರ್ಜರಿ ಆಡಿಯೋ ಲಾಂಚ್ ಕೂಡಾ ಮಾಡಲಾಗಿತ್ತು 2ಡಿ, 3ಡಿಯಿಂದ ಚಿತ್ರ ವಿಳಂಬವಾಗಿತ್ತು . ಈಗ ಆಗಸ್ಟ್‍ನಲ್ಲಿ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು

ನಿರ್ಮಾಪಕ ತ್ರಿವಿಕ್ರಮ್ ಮಾತನಾಡಿ ಚಿತ್ರ ಚೈನಿಸ್ ಭಾಷೆಗೂ ಡಬ್ ಆಗುತ್ತಿದೆ.ಹಾಂಕಾಂಗ್ ಮತ್ತು ಬೀಜಿಂಗ್ ನಿಂದ ಹಾಗೂ ಇನ್ನಿತರ ಕಡೆಗಳಿಂದ ಅಂತರಾಷ್ಟ್ರೀಯ ವಿತರಣಾ ಸಂಸ್ಥೆಗಳು ವಿದೇಶಗಳಲ್ಲಿ ಚಿತ್ರ ಬಿಡುಗಡೆ ಗೊಳಿಸಲು ಮುಂದೆ ಬರುತ್ತಿದೆ. ಚಿತ್ರದ ಬಜೆಟ್ 40 ಕೋಟಿ ರುಪಾಯಿ ದಾಟಿದರೂ, ವ್ಯಾವಹಾರಿಕವಾಗಿ ಹೆಚ್ಚು ವಿಶ್ವಾಸ ಮತ್ತು ಖುಷಿ ಹೆಚ್ಚುತ್ತಿರುವ ಈ ಹಿನ್ನೆಯಲ್ಲಿ ಕಳೆದ 3ವರ್ಷಗಳಿಂದ ಚಿತ್ರಕ್ಕಾಗಿ ಶ್ರಮಿಸುತ್ತಿರುವ ನಿರ್ದೇಶಕರಿಗೆ ಈ ಫ್ಲಾಟನ್ನು ಉಡುಗೊರೆ ನೀಡಲಾಗಿದೆ ಎಂದರು

ಕಾರ್ಯಕಾರಿ ನಿರ್ಮಾಪಕ ಹಾಗೂ ಚಿತ್ರದ ಎಡಿಟರ್ ವಿದ್ಯಾಧರ್ ಶೆಟ್ಟಿ, ಆಗಸ್ಟ್ ನಲ್ಲಿ ಚಿತ್ರ ಬಿಡುಗಡೆಗೆ ತಯಾರಿ ನಡೆಸಲಾಗಿದೆ ಎಂದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin