Another female director, Rashmi, arrives in Kannada with the female-led film “Suli”.

ಮಹಿಳಾ ಪ್ರದಾನ ಚಿತ್ರ “ಸುಳಿ” ಮೂಲಕ ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ರಶ್ಮಿ ಆಗಮನ - CineNewsKannada.com

ಮಹಿಳಾ ಪ್ರದಾನ ಚಿತ್ರ “ಸುಳಿ” ಮೂಲಕ ಕನ್ನಡಕ್ಕೆ ಮತ್ತೊಬ್ಬ ಮಹಿಳಾ ನಿರ್ದೇಶಕಿ ರಶ್ಮಿ ಆಗಮನ

ಕನ್ನಡ ಚಿತ್ರರಂಗದ ಒಂದು ರೀತಿ ಪುರುಷ ಪ್ರದಾನ. ಅದರಲ್ಲಿಯೂ ನಿರ್ದೇಶಕರ ವಿಷಯಕ್ಕೆ ಬಂದರೆ ಮಹಿಳಾ ನಿರ್ದೇಶಕಿಯರ ಸಂಖ್ಯೆ ಬೆರಳಣಿಕೆಯಷ್ಟಿದೆ. ಅದರ ಸಾಲಿಗೆ ಇದೀಗ ಮತ್ತೊಬ್ಬ ಮಹಿಳಾ ನಿರ್ದೇಶಕಿ ರಶ್ಮಿ, ಎಸ್ ಹೊಸ ಸೇರ್ಪಡೆಯಾಗಿದ್ದಾರೆ.

ಮಹಿಳಾ ನಿರ್ದೇಶಕಿ ರಶ್ಮಿ. ಎಸ್ (ಸಾಯಿರಶ್ಮಿ) ಅವರು ನಿರ್ದೇಶನ ಮಾಡಿದ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಮಹಿಳಾ ಪ್ರದಾನವಾಗಿರುವುದು ಚಿತ್ರದ ಕುತೂಹಲದ ಸಂಗತಿ.

ತಮಿಳು ಭಾಷೆಯಲ್ಲಿ ಪ್ರಕಟವಾಗಿದ್ದ ಚಿನ್ನಪ್ಪ ಭಾರತಿ ಅವರ ‘ಪವಳಾಯಿ’ ಕಾದಂಬರಿ, ಕನ್ನಡ ಭಾಷೆಗೂ ಅನುವಾದವಾಗಿ ಬಿಡುಗಡೆಯಾಗಿತ್ತು.ಈ ಕಾದಂಬರಿ ಈಗ ‘ಸುಳಿ’ ಹೆಸರಲ್ಲಿ ಚಿತ್ರವಾಗಿದೆ. ಸದ್ದುಗದ್ದಲವಿಲ್ಲದೆ ಬಹುತೇಕ ಚಿತ್ರದ ಚಿತ್ರೀಕರಣ ಮುಗಿದಿದ್ದು ಸೂಕ್ತ ಸಮಯದಲ್ಲಿ ತೆರೆಗೆ ಬರಲು ಸಜ್ಜಾಗಿದೆ

ಚಿತ್ರಕ್ಕೆ ಬೆಟ್ಟಸ್ವಾಮಿ ಗೌಡ ಬಂಡವಾಳ ಹಾಕಿದ್ದಾರೆ. ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿವೆ. ‘ಸಾಹಿತಿ ಹಾಗು ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್, ಹಿರಿಯ ನಟಿ ಭವ್ಯಾ, ನಟರಾದ ಸುಚೇಂದ್ರ ಪ್ರಸಾದ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ‘ಸುಳಿ’ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು ಒಂದಕ್ಕಿಂತ ಒಂದು ಹಾಡುಗಳು ವಿಭಿನ್ನವಾಗಿದ್ದು ಗಮನ ಸೆಳೆದಿದೆ

ನಿರ್ದೇಶಕಿ ರಶ್ಮಿ ಎಸ್ ಮಾತನಾಡಿ ಸಾಮಾಜಿಕ ಕಥಾಹಂದರದ ಸಿನಿಮಾ. 1980ರ ಕಾಲಘಟ್ಟದಲ್ಲಿ ಸಿನಿಮಾದ ಕಥೆ ಸಾಗುತ್ತದೆ. ‘ ‘ಸಾಕ್ಷಾತ್ಕಾರ’ ಸಿನಿಮಾದಲ್ಲಿ ಅಣ್ಣಾವ್ರ ಪಾತ್ರದ ಮಾನವೀಯ ಮೌಲ್ಯ ಮತ್ತು ಪ್ರೀತಿಯ ಆಳದ ಬಗ್ಗೆ ಹೇಳಲಾಗಿದೆ. ಹೆಣ್ಣಿನ ಅಂತರಂಗದ ಭಾವನೆಗಳು, ಸಾಮಾಜಿಕ ಮೌಲ್ಯಗಳು ಎಲ್ಲವನ್ನೂ ಈ ಸಿನಿಮಾದಲ್ಲಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಮಂಡ್ಯದ ಗ್ರಾಮೀಣ ಪರಿಸರದಲ್ಲಿ ಕಥೆ ಸಾಗಲಿದೆ ಎಂದು ಕಥೆಯ ಸಾರ ಬಿಚ್ಚಿಟ್ಟರು

ಈ ವೇಳೆ ಮಾತನಾಡಿದ ಮಾಜಿ ಸಚಿವೆ ಬಿ. ಟಿ. ಲಲಿತಾ ನಾಯಕ್, ‘ಹೆಣ್ಣು ಮತ್ತು ಗಂಡಿನ ಕೂಡಿಕೆ ಪ್ರಕೃತಿ ಸಹಜವಾದದ್ದು. ಪ್ರತಿ ಮನುಷ್ಯ ಕೂಡ ಪರಸ್ಪರ ಅವಲಂಭನರಯಲ್ಲೇ ಬದುಕಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಮತ್ತೊಬ್ಬ ವ್ಯಕ್ತಿಯ ಸಾಂಗತ್ಯ ಸಹಜ ಮತ್ತು ಅಗತ್ಯ.ಇಂಥಯ ಕೂಡಿಕೆಯ ಕಥೆಯನ್ನು ಪ್ರೇಕ್ಷಕರ ಮುಂದೆ ತರುತ್ತಿರುವ ಚಿತ್ರತಂಡದ ಪ್ರಯತ್ನ ಸ್ವಾಗತಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ಹಿರಿಯ ನಟಿ ಭವ್ಯಾ ಮಾತನಾಡಿ, ಚಿತ್ರರಂಗ ಹೆಚ್ಚಾಗಿ ಪುರುಷ ಪ್ರಧಾನ. ಇಲ್ಲಿ ಮಹಿಳಾ ನಿರ್ದೇಶಕರೊಬ್ಬರು ಕಡಿಮೆ ಈಗ ರಶ್ಮಿ ಅವರ ಆಗಮನವಾಗಿದ್ದು ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು

ಹಿರಿಯ ನಟ ಸುಚೇಂದ್ರ ಪ್ರಸಾದ್ ಮಾತನಾಡಿ, ‘ಸುಳಿ’ ಚಿತ್ರ ಸವಾಲಿನ ಕೆಲಸವನ್ನು ಸಲೀಸಾಗಿ ಮಾಡಿ ಮುಗಿಸಿದೆ. ತಂಡಕ್ಕೆ ಒಳ್ಳೆಯದಾಗಲಿ ಎಂದರು

ನಾಯಕ ನಟ ಸನತ್ ಮಾತನಾಡಿ, ವಿಭಿನ್ನವಾದ ಪಾತ್ರ ‘ಸುಳಿ’ ಸಿನಿಮಾದಲ್ಲಿ ಸಿಕ್ಕಿದೆ. ್ಲ ಮಂಡ್ಯ ಹಿನ್ನೆಲೆಯ ಹಳ್ಳಿ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ. ಹಳ್ಳಿಯ ಬಡ ಹುಡುಗನೊಬ್ಬನ ಜೀವನದಲ್ಲಿ ಏನೇನು ತಿರುವುಗಳು ಸಿಗುತ್ತದೆ ಎನ್ನುವುದು ಪಾತ್ರ ಎಂದರು

ನಾಯಕಿ ಚೈತ್ರಾ ಸಾಕೇಲ್ ಮಾತನಾಡಿ, ಗ್ರಾಮೀಣ ಸೊಗಡಿನ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮಂಡ್ಯದ ಜೀವನ ಶೈಲಿ, ಭಾಷೆಯ ಬಳಕೆ ಪಾತ್ರದಲ್ಲಿದ್ದು, ಹೊಸ ಅನುಭವ. ಸಿನಿಮಾದಿಂದ ಸಾಕಷ್ಟು ಕಲಿತಿದ್ದೇನೆ ಎಂದು ಹೇಳಿದರು

ಮತ್ತೊಬ್ಬ ನಾಯಕಿ ಸಂಜನಾ ನಾಯ್ಡು ಮಾತನಾಡಿ, ಒಳ್ಳೆಯ ಸಾಮಾಜಿಕ ಸಂದೇಶವಿರುವ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದಕ್ಕೆ ಖುಷಿಯಾಗುತ್ತಿದೆ ಎಂದು ತಿಳಿಸಿದರು

ನಿರ್ಮಾಪಕ ಬೆಟ್ಟಸ್ವಾಮಿ ಗೌಡ ಮಾತನಾಡಿ, ಸಿನಿಮಾ ನಾವಂದುಕೊಂಡಂತೆ ಚೆನ್ನಾಗಿ ಮೂಡಿಬಂದಿದೆ. ಗ್ರಾಮೀಣ ಸೊಗಡು, ಮನರಂಜನೆ, ಸಂದೇಶ ಎಲ್ಲವೂ ‘ಸುಳಿ’ ಸಿನಿಮಾದಲ್ಲಿದೆ. ಎಲ್ಲರಿಗೂ ಇಷ್ಟವಾಗುವÀ ಸಿನಿಮಾ ಎಂದು ಹೇಳಿದರು

ನಟರಾದ ಶಿವಕುಮಾರ ಆರಾಧ್ಯ, ಶಂಕರ ನಾರಾಯಣ್, ಸಿದ್ಧು ಮಂಡ್ಯ, ಹರಿಹರನ್, ನಟಿ ಕಾವ್ಯಾ, ಛಾಯಾಗ್ರಹಕ ವಿಕ್ರಂ ಯೋಗಾನಂದ್, ಸಾಹಿತಿ ಸತೀಶ್ ಜೋಶಿ ಮೊದಲಾದವರು ‘ಸುಳಿ’ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು

ಚಿತ್ರವನ್ನು ಆಲಭುಜನಹಳ್ಳಿ, ನಗರಕೆರೆ, ಮಾಲಗಾರನಹಳ್ಳಿ, ಕೆ. ಎಂ. ದೊಡ್ಡಿ ಮದ್ದೂರು ಸೇರಿದಂತೆ ಹಲವು ತಾಣಗಳಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.ಎನ್. ರಾಜು ಸಂಗೀತವಿದೆ. ಮುಂದಿನ ಅಕ್ಟೋಬರ್ ಅಂತ್ಯದೊಳಗೆ ‘ಸುಳಿ’ ಚಿತ್ರ ತೆರೆಗೆ ಬರುವ ನಿರೀಕ್ಷೆ ಇದೆ

ಚಿತ್ರದಲ್ಲಿ ಯುವನಟ ಸನತ್, ಚೈತ್ರಾ ಸಾಕೇಲ್, ಸಂಜನಾ ನಾಯ್ಡು, ಶಿವಕುಮಾರ್ ಆರಾಧ್ಯ, ಸೌಭಾಗ್ಯ, ಸಿದ್ಧು ಮಂಡ್ಯ, ಶಂಕರ ನಾರಾಯಣ, ಬೆಟ್ಟಸ್ವಾಮಿ ಗೌಡ, ಕಾವ್ಯಾ, ಹರಿಹರನ್ ಮತ್ತಿತರರು ‘ಸುಳಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin