`ಕೆಂದಾವರೆ’ ಕಾದಂಬರಿ ಬಿಡುಗಡೆ: ಶೀಘ್ರದಲ್ಲಿ ಸಿನಿಮಾರೂಪದಲ್ಲಿ ಪ್ರೇಕ್ಷಕರ ಮುಂದೆ
ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಇತ್ತೀಚೆಗೆ ಅಪರೂಪ, ಆಗೊಮ್ಮೆ ಹೀಗೊಮ್ಮೆ ಸೆಟ್ಟೇರುತ್ತಿವೆ, ಈಗ ಅದರ ಸಾಲಿಗೆ ಮತ್ತೊಂದು ಸೇರ್ಪಡೆಗೆ “ ಕೆಂದಾವರೆ” ಸಜ್ಜಾಗಿದೆ.

ಯುವನಟ, ಸಂಗೀತಗಾರ, ಕಂಠದಾನ ಕಲಾವಿದ ಆದಿತ್ಯ ವಿನೋದ್ ಅವರ ಮಹಿಳಾ ಪ್ರಧಾನ ಮತ್ತು ಸಾಮಾಜಿಕ ಕಥಾನಕಕ್ಕೆ ಡಾ. ಶಯದೇವಿಸುತೆ ಮರವಂತೆ ಕಾದಂಬರಿ ರೂಪ ನೀಡಿದ್ದು ರಾಜ್ಯ ಮಹಿಳಾ ಆಯೋದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಬಿಡುಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಕಾದಂಬರಿ ಸಿನಿಮಾ ರೂಪಕ್ಕೆ ಬರುತ್ತಿದೆ.
ಕೆಂದಾವರೆ ಚಿತ್ರದಲ್ಲಿ ನಟ ಆದಿತ್ಯ ವಿನೋದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕಡಲ ತೀರದ ಭಾರ್ಗವ' ಚಿತ್ರ ನಿರ್ದೇಶಿಸಿದ್ದ ಪನ್ನಗಚಿತ್ರಕ್ಕೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ
ನಟ ಆದಿತ್ಯ ವಿನೋದ್ ಮಾಹಿತಿ ಹಂಚಿಕೊಡಿದ್ದು ಸುತ್ತಲಿನ ವಾಸ್ತವಗಳಿಂದ ಪ್ರಭಾವಿತನಾಗಿ, ಗಂಭೀರ ಸಮಸ್ಯೆಗಳಲ್ಲಿ ಒಂದಾದ ಮಕ್ಕಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಬೆಳಕಿಗೆ ತರಲು ಕಥೆ ಬರೆದಿದ್ದೇನೆ. ಕಾದಂಬರಿ ಕೇವಲ ಕಥೆಯಿಲ್ಲ, ಇದೊಂದು ಎಚ್ಚರಿಕೆಯ ಕರೆ. ನೈಜ ಘಟನೆಗಳಿಂದ ಪ್ರೇರಿತವಾದ ಕಾದಂಬರಿ ಮಕ್ಕಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಕ್ಕಳು ಮುಕ್ತವಾಗಿ, ಸುರಕ್ಷಿತವಾಗಿ ಮತ್ತು ಸಂತೋಷದಿಂದ ಬದುಕಬಹುದಾದ ಭರವಸೆ ಮೂಡಿಸುವ ಪ್ರಯತ್ನವಾಗಿದೆ ಎಂದಿದ್ಧಾರೆ

ಪ್ರತಿಯೊಂದು ಮಗುವೂ ಮಗುವಾಗಲು ಮುಕ್ತರಾಗಲಿ ಎಂಬ ಹಂಬಲ ಕಾದಂಬರಿ ಮೂಲ ಆಶಯವಾಗಿದೆ. ಶೀಘ್ರದಲ್ಲಿಯೇ ಈ ಕಾದಂಬರಿ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ ಎಂದು ಮಾಹಿತಿ ಹಂಚಿಕೊಂಡರು.
ತಾರಾ ಬಳಗದ ಯಾರೆಲ್ಲಾ ಇದ್ದಾರೆ
ಕೆಂದಾವರೆ ಪುಸ್ತಕದ ಟೈಟಲ್ ನ್ನೇ ಸಿನಿಮಾಗೆ ಇಡಲಾಗಿದೆ. ಪನ್ನಗ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಆದಿತ್ಯ ವಿನೋದ್ ನಟಿಸುತ್ತಿದ್ದು, ನಾಯಕಿಯಾಗಿ ದಿಯಾ ಸಾಥ್ ಕೊಡುತ್ತಿದ್ದಾರೆ. ಉಳಿದಂತೆ ಅಕ್ಷತಾ ಶ್ರೀಧರ್ ಶಾಸ್ತ್ರೀ, ಪ್ರಕಾಶ್ ತುಮ್ಮಿನಾಡು, ಶ್ರವಣ್ ಜಗದೀಶ್, ಪುನೀತ್ ಓಂಕಾರ್, ವಿಶ್ವಾಸ್ ಕೃಷ್ಣ ತಾರಾಬಳಗದಲ್ಲಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವುದರ ಜೊತೆಗೆ ಆದಿತ್ಯ ವಿನೋದ್ ಸಂಗೀತ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದು, ಅರುಣ್ ಕುಮಾರ್ ಕ್ಯಾಮೆರಾ ಹಿಡಿಯಲಿದ್ದಾರೆ. ಈಗಾಗಲೇ ಶೇಕಡಾ 50ರಷ್ಟು ಶೂಟಿಂಗ್ ಮುಕ್ತಾಯಗೊಂಡಿದೆ. ಹುಬ್ಬಳ್ಳಿ, ಧಾರವಾಡ, ಸವದತ್ತಿ, ಸಾಗರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ಕೆಂದಾವರೆ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. ಅಪ್ರಮೇಯ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ತಯಾರಾಗುತ್ತಿದೆ

