The film “Elumale” is receiving good praise everywhere: A smile on the faces of the film crew

“ಏಳುಮಲೆ” ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆ: ಚಿತ್ರತಂಡದ ಮುಖದಲ್ಲಿ ಮಂದಹಾಸ - CineNewsKannada.com

“ಏಳುಮಲೆ” ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆ: ಚಿತ್ರತಂಡದ ಮುಖದಲ್ಲಿ ಮಂದಹಾಸ

ನಿರ್ದೇಶಕ ತರುಣ್ ಸುಧೀರ್ ನಿರ್ಮಾಣದ “ಏಳುಮಲೆ” ಚಿತ್ರ ಬಿಡುಗಡೆಯಾದ ಎಲ್ಲಾ ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ, ಇದು ಸಹಜವಾಗಿ ಚಿತ್ರತಂಡದ ಮುಖದಲ್ಲಿ ನಗುವಿನ ಮಂದಹಾಸ ಮೂಡಿಸಿದೆ.

ನಾಯಕ ರಾಣಾ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಪ್ರೇಕ್ಷಕರ ಪ್ರೀತಿ ಪಡೆದುಕೊಂಡಿದ್ದಾರೆ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಪುನೀತ್ ರಂಗಸ್ವಾಮಿಯಂತಹ ಒಳ್ಳೆ ನಿರ್ದೇಶಕರು ಸಿಕ್ಕಿದ್ದಾರೆ.

ಗೆಲುವಿನ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ತರುಣ್ ಸುದೀರ್, ಏಳುಮಲೆ ಸಿನಿಮಾಗೆ ಸಿಕ್ಕುತ್ತಿರುವ ಅದ್ಭುತ ಪ್ರತಿಕ್ರಿಯೆ. ಪಾಸಿಟಿವ್ ಟಾಕ್ ಬರಲು ಟೀಂ, ಪ್ರೇಕ್ಷಕರು ಹಾಗೂ ಮೀಡಿಯಾ ಕಾರಣ. ಇವರೆಲ್ಲರಿಗೂ ಧನ್ಯವಾದಗಳು. ನಾನು ಈ ಸಿನಿಮಾ ಮಾಡಲು ನಂಬಿದ್ದು ಎರಡನ್ನೇ. ಈ ಕಥೆ ಹಾಗೂ ಕನ್ನಡ ಪ್ರೇಕ್ಷಕರನ್ನು. ಒಳ್ಳೆ ಕಂಟೆಂಟ್ ನ್ನು ಪ್ರೇಕ್ಷಕರು ಯಾವತ್ತೂ ಕೈಬಿಡುವುದಿಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಚೌಕ ಸಿನಿಮಾ ಹೇಗೆ ನಿಧಾನವಾಗಿ ಪಿಕಪ್ ಆಯ್ತು. ಅದೇ ರೀತಿ ಏಳುಮಲೆ ಸಿನಿಮಾ ಕೂಡ ಪಿಕಪ್ ಆಯ್ತು. ಇಲ್ಲಿಯವರೆಗೂ ಅದ್ಭುತವಾದ ಕಲೆಕ್ಷನ್ ಆಗಿದೆ. ಈ ಸಿನಿಮಾ ಚಾಲೆಂಜಿಂಗ್. ಅದನ್ನು ಇಡೀ ತಂಡ ಫುಲ್ ಮಾಡಿದೆ ಎಂದರು.

ಕರ್ನಾಟಕ ಹಾಗೂ ತಮಿಳುನಾಡಿ ಗಡಿ ಪ್ರದೇಶದಲ್ಲಿ ನಡೆಯುವ ನೈಜ ಕಥೆ ಸಿನಿಮಾಪ್ರೇಮಿಗಳಿಗೆ ಇಷ್ಟವಾಗಿದೆ. ಎಲ್ಲಾ ಕಲಾವಿದರೂ ಅಚ್ಚುಕಟ್ಟಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರೀಕ್ಷೆ ಇಟ್ಟುಕೊಳ್ಳದೇ ಥಿಯೇಟರ್ ಗೆ ಹೋದರೆ ನಿರೀಕ್ಷೆಗೂ ಮೀರಿ ಇಷ್ಟವಾಗುವ ಸಿನಿಮಾ ಏಳುಮಲೆ.

ಏಳುಮಳೆ ಚಿತ್ರ ಸೆಪ್ಟೆಂಬರ್-5 ರಂದು ರಿಲೀಸ್ ಆಗಿದೆ. ರಾಜ್ಯದೆಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಒಳ್ಳೆ ಅಭಿಪ್ರಾಯ ಪಡೆದುಕೊಂಡಿದೆ. ಪುನೀತ್ ರಂಗಸ್ವಾಮಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin