Preethiyana lyrical video song from the movie Love Seasons released

ಲವ್ ಸೀಸನ್ಸ್ ಚಿತ್ರದ ಪ್ರೀತಿಯಾನ ಲಿರಿಕಲ್ ವೀಡಿಯೋ ಹಾಡು ಬಿಡುಗಡೆ - CineNewsKannada.com

ಲವ್ ಸೀಸನ್ಸ್ ಚಿತ್ರದ ಪ್ರೀತಿಯಾನ ಲಿರಿಕಲ್ ವೀಡಿಯೋ ಹಾಡು ಬಿಡುಗಡೆ

ಕೆಲ ದಿನಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದ “ಲವ್ ಸೀಸನ್ಸ್” ಚಿತ್ರದ ಹಾಡೊಂದು ಎಲ್ಲೆಡೆ ಟ್ರೆಂಡ್ ಸೆಟ್ ಮಾಡಿತ್ತು. ಸಂಗೀತ ಪ್ರೇಮಿಗಳೆಲ್ಲ ಆ ಹಾಡಿನ ಗುಂಗಿನಲ್ಲಿರುವಾಗಲೇ ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆಗೊಳಿಸಿದೆ.

ಹೊಸದೊಂದು ಪ್ರೀತಿ ಯಾನ ಏನೆಂದರು ಚೆನ್ನ. ದಿನವೆಲ್ಲ ಮಾಡುತೀನಿ ನಾ ನಿನ್ನದೆ ಧ್ಯಾನ… ಎಂಬ ಸಾಲುಗಳಿರುವ ಈ ಗೀತೆಯನ್ನು ಧನಂಜಯ್ ರಂಜನ್ ಬರೆದಿದ್ದಾರೆ. ವೀರ್ ಸಮರ್ಥ್ ಸಂಗೀತ ಸಂಯೋಜನೆಯ ಹಾಡು ಕೇಶವ್ ಆನಂದ್ ಕಂಠಸಿರಿಯಲ್ಲಿ ಮೂಡಿ ಬಂದಿದೆ.

ಮುಕುಂದ ರಾಮಸ್ವಾಮಿ ಮತ್ತು ಶ್ವೇತಾ ಕೊಗ್ಲೂರು ಹಾಡಿನಲ್ಲಿ ಮನ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಲವಲವಿಕೆಯ ಧಾಟಿಯಲ್ಲಿ ಪ್ರೇಮದ ಭಾವಗಳನ್ನು ಕಟ್ಟಿ ಕೊಟ್ಟಂತಿರುವ ಸದರಿ ಹಾಡೂ ಕೂಡಾ ಮೊದಲ ಹಾಡಿನಂತೆಯೇ ಟ್ರೆಂಡ್ ಹುಟ್ಟುಹಾಕೋ ಸಾಧ್ಯತೆಗಳೇ ದಟ್ಟವಾಗಿವೆ.

ಎನ್.ಆರ್ ಮಂಜುನಾಥ (ನೀಲೇರಿ) ಚಿತ್ರ ನಿರ್ಮಾಣ ಮಾಡಿದ್ದಾರೆ. ಕೃತ್ವಿಕ್ ನಿರ್ದೇಶನ, ವೀರ್ ಸಮರ್ಥ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ ಮುಂತಾದವರು ಸಾಹಿತ್ಯ ಬರೆದಿದ್ದಾರೆ. ಅವಿನಾಶ ಶಾಸ್ತ್ರಿ ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನ, ಭಜರಂಗಿ ಮೋಹನ್ ನೃತ್ಯ ಸಂಯೋಜನೆಯಿರುವ ಈ ಚಿತ್ರದಲ್ಲಿ ಮುಕುಂದ ರಾಮಸ್ವಾಮಿ ನಾಯಕನಾಗಿ ನಟಿಸಿದ್ದಾರೆ.

ದಿಯಾ ಕೀರ್ತಿ, ಚಂದನಾ ಗೌಡ ಮತ್ತು ಶ್ವೇತಾ ಕೊಗ್ಲೂರು ನಾಯಕಿಯರಾಗಿ ಜೊತೆಯಾಗಿದ್ದಾರೆ. ಮಂಡ್ಯ ರಮೇಶ್, ರಾಜೇಶ್ ನಟರಂಗ, ಸಂಗೀತಾ ಅನಿಲ್, ಜಯತೀರ್ಥ, ಚೇತನ್ ದುರ್ಗ, ಕಾಮಿಡಿ ಕಿಲಾಡಿ ಸದಾನಂದ, ಹುಲಿ ಕಾರ್ತಿಕ್, ಬೇಬಿ ರಿತು ಸಿಂಗ್ ಮುಂತಾದವರ ತಾರಾಗಣವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin