ಸಾಹಸಸಿಂಹ ಡಾ.ವಿಷ್ಣುವರ್ಧನ್, ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ - CineNewsKannada.com

ಸಾಹಸಸಿಂಹ ಡಾ.ವಿಷ್ಣುವರ್ಧನ್, ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ

ರಾಜ್ಯ ಸರ್ಕಾರ ಪ್ರತಿಷ್ಠಿತ ಪ್ರಶಸ್ರಿಗಳಲ್ಲಿ ಒಂದಾದ ಕರ್ನಾಡ ರತ್ನ ಪ್ರಶಸ್ರಿಯನ್ನು ಸಾಹಸಸಿಂಹ ಡಾ.ವಿಷ್ಣುವರ್ಧನ್, ಬಿ. ಸರೋಜಾ ದೇವಿ ಅವರಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ರಾಜ್ಯ ಸರ್ಕಾರ ಮರಣೋತ್ತರ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದ ಬೆನ್ನಲ್ಲೇ ಕನ್ನಡ ಚಿತ್ರರಂಗದ ಮತ್ತೆ ಇಬ್ಬರು ಹಿರಿಯ ಕಲಾವಿದರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ಇತ್ತೀಚಿಗೆ ಕನ್ನಡ ಚಿತ್ರರಂಹದ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್ ಮತ್ತು ಅವರ ಅಳಿಯ ನಟ ಅನಿರುಧ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಸಲ್ಲಿಸಿದ್ದರು.

ಇದರ ಜೊತೆಗೆ ಕನ್ನಡದ ಹಿರಿಯ ನಟಿಯರಾದ ಡಾ. ಜಯಮಾಲ, ಶೃತಿ, ಮಾಳವಿಕ ಅವಿನಾಶ್ ಅವರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದರು.

ಕನ್ನಡ ಚಿತ್ರರಂಗದ ಹಿರಿಯ ನಟಿಯರ ಮನವಿಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಕನ್ಮಡದ ಚಿತ್ರರಂಗದ ಇಬ್ಬರು ಅನಘ್ಯ ರತ್ನಗಳಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಘೋಷಣೆ ಮಾಡಿದೆ. ಇದು ಸಹಜವಾಗಿ ಇಬ್ಬರು ಕಲಾವಿದರ ಅಭಿಮಾನಿಗಳು , ಚಿತ್ರರಂಗದ ಮಂದಿ, ಕುಟುಂಬದ ಸದಸ್ಯರು ಮತ್ತು ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಎಂದು ಮನವಿ ಮಾಡಿದ್ದ ಮಂದಿಯ ಸಂಸತ ಹೆಚ್ಚುವಂತೆ ಮಾಡಿದೆ.


ಕುವೆಂಪು ಅವರಿಗೆ ಭಾರತ ರತ್ನ;

ರಾಷ್ಟ್ರ ಕವಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ. ಇದೇ ವೇಳೆ ಡಾ. ವಿಷ್ಣುವರ್ಧನ್ ಮತ್ತು ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ .ಕೆ ಪಾಟೀಲ್ ತಿಳಿಸಿದ್ದಾರೆ.


ಈವರೆಗೆ ಕರ್ನಾಟಕ ರತ್ನ ಪ್ರಶಸ್ತಿ ಯಾರಿಗೆಲ್ಲಾ:


* 1992 – ಕುವೆಂಪು – ಸಾಹಿತ್ಯ ಕ್ಷೇತ್ರ
* 1992 – ಡಾ. ರಾಜ್ ಕುಮಾರ್ – ಸಿನಿಮಾ
* 1999 – ಎಸ್.ನಿಜಲಿಂಗಪ್ಪ – ರಾಜಕೀಯ
* 2000 – ಸಿ. ಎನ್. ಆರ್. ರಾವ್ – ವಿಜ್ಞಾನ
* 2001 – ದೇವಿ ಶೆಟ್ಟಿ – ವೈದ್ಯಕೀಯ
* 2005 – ಭೀಮಸೇನ ಜೋಶಿ – ಸಂಗೀತ
* 2007 – ಶಿವಕುಮಾರ ಸ್ವಾಮೀಜಿಬ – ಸಮಾಜ ಸೇವೆ
* 2008 -:ಜವರೇಗೌಡ – ಶಿಕ್ಷಣ, ಸಾಹಿತ್ಯ
* 2009 – ವೀರೇಂದ್ರ ಹೆಗ್ಗಡೆ ; ಸಮಾಜ ಸೇವೆ
* 2022 – ಪುನೀತ್ ರಾಜ್ ಕುಮಾರ್ – ಸಿನಿಮಾ , ಸಮಾಜಸೇವೆ ( ಮರಣೋತ್ತರ)
* 2025- ; ಡಾ. ವಿಷ್ಣುವರ್ಧನ್ ಮತ್ತು ಬಿ.‌ಸರೋಜಾ ದೇವಿ ( ಮರಣೋತ್ತರ)
*

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin