Bajrangi Loki is all set to perform opposite Power Star Pawan Kalyan.

ಪವರ್ ಸ್ಟಾರ್ ಪವನ್‌ ಕಲ್ಯಾಣ್‌ ಎದುರು ಆರ್ಭಟಿಸಲು ಸಜ್ಜಾದ ಭಜರಂಗಿ ಲೋಕಿ - CineNewsKannada.com

ಪವರ್ ಸ್ಟಾರ್ ಪವನ್‌ ಕಲ್ಯಾಣ್‌ ಎದುರು ಆರ್ಭಟಿಸಲು ಸಜ್ಜಾದ ಭಜರಂಗಿ ಲೋಕಿ

ಭಜರಂಗಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ್ದು ಭರವಸೆಯ ಖಳನಟ ಭಜರಂಗಿ ಲೋಕಿ ಇದೀಗ ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ಎದುರು ” ಒಜಿ ” ಚಿತ್ರದಲ್ಲಿ ಖಳನಟನಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ

ಭಜರಂಗಿ ಸಿನಿಮಾ ಮೂಲಕ ಯಾರಪ್ಪ ಈ ನಟ ಅಂತ ಇಡೀ ಇಂಡಸ್ಟ್ರೀ ಒಮ್ಮೆಲೆ ತಿರುಗಿ ನೋಡುವಂತೆ ಮಾಡಿದ ಕಲಾವಿದ. ಅಮೋಘ ಅಭಿನಯದ ಮೂಲಕವೇ ಪ್ರೇಕ್ಷಕರ ಗಮನ ಸೆಳೆದ ಸೌರವ್‌ ಲೋಕೇಶ್‌ ಭಜರಂಗಿ ಸಿನಿಮಾ ನಂತರ ಭಜರಂಗಿ ಲೋಕಿ ಎಂದೇ ಫೇಮಸ್‌ ಆಗಿದ್ದರು. ಇದೀಗ ತೆಲುಗಿನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

ಇದೇ ವಾರ ಪ್ರಪಂಚದಾದ್ಯಂತ ತೆರೆಗೆ ಬರ್ತಿರೋ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅಭಿನಯದ “ಓಜಿ” ಸಿನಿಮಾದ ಪ್ರಮುಖ ಪಾತ್ರದಲ್ಲಿ ಭಜರಂಗಿ ಲೋಕಿ ಕೂಡ ಅಭಿನಯಿಸಿದ್ದಾರೆ…ಖಡಕ್‌ ಹಾಗೂ ಸ್ಟೈಲಿಷ್‌ ವಿಲನ್‌ ಆಗಿ ಲೋಕಿ ಪವನ್‌ ಕಲ್ಯಾಣ್‌ ಎದುರು ಕಾಣಿಸಿಕೊಳ್ಳುತ್ತಿದ್ದು ತೆಲುಗು ಚಿತ್ರ ಪ್ರೇಕ್ಷಕರ ಮನ ಗೆಲ್ಲಲು ಮುಂದಾಗಿದ್ದಾರೆ.

ಸದ್ಯ ಬಿಡುಗಡೆ ಆಗಿರೋ ಟ್ರೇಲರ್‌ ನಲ್ಲಿ ಭಜರಂಗಿ ಲೋಕಿ ಲುಕ್‌ ನೋಡಿ ಕನ್ನಡಿಗರು ಮೆಚ್ಚಿಕೊಂಡಿದ್ದಾರೆ. ಆಂದ್ರ ಪ್ರದೇಶದ ಉಪ ಮುಖ್ಯಮಂತ್ರಿಯೂ ಆಗಿರುವ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಂಡಿರುವುದಕ್ಕೆ ಭಜರಂಗಿ ಲೋಕಿ ಸಂತಸ ಹೊರಹಾಕಿದ್ದಾರೆ.

ಈ ಕುರಿತು ಮಾಹಿತಿ ಹಂಚಿಕೊಂಡ ಅವರು ಪವರ್ ಸ್ಟಾರ್ ಪವನ್ ಕಲ್ಯಾಣ್ ಎದುರು ಖಳನಟನಾಗಿರುವುದು ಖುಷಿಕೊಟ್ಟಿದೆ. ಓಜಿ ಸಿನಿಮಾದಲ್ಲಿ ಇಮ್ರಾನ್‌ ಹಶ್ಮಿ ಕೂಡ ಪ್ರಮುಖ ಪಾತ್ರವಹಿಸಿದ್ದು ಇಮ್ರಾನ್‌ ಹಶ್ಮಿ ಅವರ ಜೊತೆಯಲ್ಲಿಯೂ ತೆರೆ ಹಂಚಿಕೊಂಡಿರುವುದಾಗಿ ಹೇಳಿದ್ದಾರೆ

ಓಜಿ 90 ರ ದಶಕದ ಮುಂಬೈ ಮಾಫಿಯಾ ಹಿನ್ನೆಲೆಯ ಕಥಾ ಹಂದರ ಹೊಂದಿದೆ. ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ ನಟ ಇಮ್ರಾನ್ ಹಷ್ಮಿ, ಸೌರವ್‌ ಲೋಕೇಶ್‌, ಪ್ರಿಯಾಂಕಾ ಮೋಹನ್, ಅರ್ಜುನ್ ದಾಸ್, ಪ್ರಕಾಶ್ ರಾಜ್, ರಾವ್ ರಮೇಶ್ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.

ಥಮನ್ ಎಸ್. ಸಂಗೀತ ನೀಡಿದ್ದಾರೆ. ಸೆಪ್ಟೆಂಬರ್ 25ರಂದು ‘ಓಜಿ’ ಸಿನಿಮಾ ದೇಶಾದ್ಯಂತ ಬಿಡುಗಡೆ ಆಗಲಿದೆ.
ಸುಜೀತ್ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಡಿವಿವಿ ದಾನಯ್ಯ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin