‘ಸಿಟಿ ಲೈಟ್ಸ್ “ ಚಿತ್ರದ ಹೊಸ ಹಾಡು ಬಿಡುಗಡೆ: ಸಿನಿಮಾ ಬಗ್ಗೆ ಕುತೂಹಲ ಹೆಚ್ಚಳ
ಸ್ಯಾಂಡಲ್ ವುಡ್ ಸಲಗ ವಿಜಯ್ ಕುಮಾರ್ ನಿರ್ದೇಶಿಸುತ್ತಿರುವ ಮೂರನೇ ಚಿತ್ರ `ಸಿಟಿ ಲೈಟ್ಸ್’ ಬಿಡುಗಡೆಗೆ ಸಜ್ಜಾಗಿದೆ. ನಟ ವಿನಯ್ ರಾಜ್‍ಕುಮಾರ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಸಲಗ' ಮತ್ತುಭೀಮ’ ಚಿತ್ರಗಳಲ್ಲಿ ಹಿಟ್ ಜೋಡಿಯಾಗಿದ್ದ ವಿಜಯ್ ಕುಮಾರ್, ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತು ಸಂಭಾಷಣೆಗಾರ ಮಾಸ್ತಿ ಚಿತ್ರದಲ್ಲೂ ಒಂದಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕಂದಮ್ಮ' ಮತ್ತುಬಾವ ಬಾವ’ ಹಾಡುಗಳು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.
ಎರಡು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ ಸಿಟಿಲೈಟ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದ್ದು ಗಮನ ಸೆಳೆದಿದೆ, ಪ್ರತಿ ಬಾರಿ ಜಾನಪದ, ಬುಡಕಟ್ಟು ಹಾಡುಗಳಿಗೆ ಹೊಸ ರೂಪ ಕೊಟ್ಟು ಪ್ರೇಕ್ಷಕರ ಮುಂದಿಡುವ ದುನಿಯಾ ವಿಜಯ್ ಈ ಬಾರಿ ಮಾದಪ್ಪನ ಜಾನಪದ ಹಾಡುಗಳ ಸಾಲುಗಳನ್ನ ಬಳಸಿಕೊಂಡು ಈಗಿನ ಟ್ರೆಂಡ್ ಗೆ ತಕ್ಕಂತೆ ಹೊಸ ಸಾಂಗ್ ರಿಲೀಸ್ ಮಾಡಿದ್ದಾರೆ

ಅದೇ ಕೆಂಡದೋಕುಳಿ ಗಂಡನಾ ಹಾಡನ್ನು ಜಾನಪದ ಕಲಾವಿದ ಕಂಸಾಳೆ ಧನುಷ್ ಹಾಡಿದ್ದಾರೆ, ಹಾಡಲ್ಲಿ ಬರುವ ರಾಪ್ ಸಾಲುಗಳನ್ನು ಅಮೋಘ್ ಬಾಲಾಜಿ ಹಾಡಿದ್ದಾರೆ. ಸಿಟಿಲೈಟ್ಸ್ ಸಿನಿಮಾಗೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸಿನಿಮಾದ ಮೂಲಕ ನಿರ್ದೇಶಕ ವಿಜಯ್ ಕುಮಾರ್ ಅವರ ಕಿರಿಯ ಮಗಳು ಮೊನಿಷಾ ವಿಜಯ್ ಕುಮಾರ್ ಸ್ಯಾಂಡಲ್ ವುಡ್‍ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.
ನಟ ವಿನಯ್ ರಾಜ್‍ಕುಮಾರ್ ಮಾತನಾಡಿ “ಇಬ್ಬರು ಮುಗ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ನಗರಕ್ಕೆ ಬಂದಾಗ ಎದುರಿಸಬೇಕಾಗಿ ಬರುವ ಸವಾಲುಗಳು ಮತ್ತು ಅವರ ಜೀವನದಲ್ಲಿ ನಡೆಯುವ ತಿರುವುಗಳೇ ಸಿನಿಮಾದ ಮುಖ್ಯ ಕಥಾವಸ್ತು, ಇನ್ನು ಮಾದಪ್ಪನ ಹಾಡು ಹಾಗೂ ಮಹದೇಶ್ವರ ಬೆಟ್ಟದಲ್ಲಿ ಹಾಡು ಚಿತ್ರೀಕರಣ ಮಾಡಲು ಅವಕಅಶ ಸಿಕ್ಕಿದ್ದೆ ನನ್ನ ಪುಣ್ಯ’ ಎಂದರು..

ನಾಯಕಿ ಮೊನಿಷಾ ಮಾತನಾಡಿ ``ಅಭಿನಯದ ಸೂಕ್ಷ್ಮಗಳನ್ನು ಕಲಿಯಲು ಲಂಡನ್‍ನಲ್ಲಿ ನಟನಾ ತರಬೇತಿ ಪಡೆದಿದ್ದೇನೆ. ನನ್ನ ತಂದೆ ನನಗೆ ವಿಭಿನ್ನವಾದ ಪಾತ್ರವನ್ನು ನೀಡಿದ್ದು, ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಂಪೂರ್ಣ ಶ್ರಮ ಹಾಕಿದ್ದೇನೆ” ಎಂದು ಮಾಹಿತಿ ಹಂಚಿಕೊಂಡರು

ನಿರ್ದೇಶಕ ವಿಜಯ್ ಕುಮಾರ್ ಮಾತನಾಡಿ ಡಾ. ರಾಜ್‍ಕುಮಾರ್ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ಇಂದು ಅವರ ಮೊಮ್ಮಗನಿಗೆ ಆಕ್ಷನ್-ಕಟ್ ಹೇಳುತ್ತಿರುವುದು ನನಗೆ ಸಿಕ್ಕ ದೊಡ್ಡ ಗೌರವ ಹಾಗೂ ಅಪಾರ ಸಂತಸ ತಂದಿದೆ”ಎಂದಿದ್ದಾರೆ.
ವಿಜಯ್ ಕುಮಾರ್ ಮತ್ತು ವಿಕ್ರಮ್ ಆರ್ಯ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.À ಕೆವಿಎನ್ ಪೆÇ್ರಡಕ್ಷನ್ಸ್ ಸಂಸ್ಥೆ `ಸಿಟಿ ಲೈಟ್ಸ್’ ಚಿತ್ರವನ್ನು ವಿತರಣೆ ಮಾಡುತ್ತಿದೆ.


