Bookings for the much-awaited film "Kantara Chapter 1" have begun.

ಬಹು ನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರದ ಬುಕ್ಕಿಂಗ್ ಆರಂಭ - CineNewsKannada.com

ಬಹು ನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರದ ಬುಕ್ಕಿಂಗ್ ಆರಂಭ

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ, ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ವಿಜಯ್ ಕಿರಗಂದೂರ್ ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ಅವರ ನಟನೆ ಹಾಗೂ ನಿರ್ದೇಶನದ, ವಿಶ್ವವೇ ಎದುರು ನೋಡುತ್ತಿರುವ, ಬಹು ನಿರೀಕ್ಷಿತ “ಕಾಂತಾರ ಅಧ್ಯಾಯ 1” ಚಿತ್ರದ ಬುಕ್ಕಿಂಗ್ ಸೆಪ್ಟೆಂಬರ್ 26 ರ ಶುಕ್ರವಾರ ಮಧ್ಯಾಹ್ನ 12.29 ಕ್ಕೆ ಕರ್ನಾಟಕದಾದ್ಯಂತ ಆರಂಭವಾಗಲಿದೆ ಎಂದು ಹೊಂಬಾಳೆ ಫಿಲಂಸ್ ಸಂಸ್ಥೆ ಮಾಹಿತಿ ನೀಡಿದೆ.

“ಕಾಂತಾರ ಆಧ್ಯಾಯ 1” ಚಿತ್ರ ಅಕ್ಟೋಬರ್ 2 ರಂದು ಭಾರತದಾದ್ಯಂತ 7000 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಕನ್ನಡ ಸೇರಿದಂತೆ ಸಪ್ತ ಭಾಷೆಗಳಲ್ಲಿ ಭಾರತ ಹಾಗೂ ಭಾರತದಾಚೆಗೂ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin