Motion poster of the bullfighting film “Jackie” released

ಟಗರು ಕಾಳಗದ “ಜಾಕಿ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ - CineNewsKannada.com

ಟಗರು ಕಾಳಗದ “ಜಾಕಿ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

“ಮಡ್ಡಿ” ಚಿತ್ರದ ಮೂಲಕ ಭಾರತದ ಮೊದಲ ಮಡ್ ರೇಸಿಂಗ್ ಚಿತ್ರ ನಿರ್ದೇಶಿಸಿದ್ದ ಡಾ. ಪ್ರಗಭಾಲ್, ಇದೀಗ ಮತ್ತೊಂದು ವಿಶಿಷ್ಟ ಹಾಗೂ ಸಾಹಸಭರಿತ ವಿಷಯದ ಭಾರತೀಯ ಸಿನಿಮಾ ಪ್ರೇಮಿಗಳ ಮುಂದೆ ತರಲು ಸಜ್ಜಾಗಿದ್ದಾರೆ.

ನಿರ್ಮಾಪಕರಾದ ಪ್ರೇಮಾ ಕೃಷ್ಣದಾಸ್ ಮತ್ತು ಸಿ ದೇವದಾಸ್ ಅವರ ಪಿಕೆ ಸ್ಟುಡಿಯೋಸ್ ಮೂಲಕ “ಜಾಕಿ” ಹೆಸರಿನ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಸಾಂಪ್ರದಾಯಿಕ ಮದುರೈ ಟಗರು ಕಾಳಗವನ್ನೇ ಆಧಾರವಾಗಿಟ್ಟುಕೊಂಡ ಕಥೆ ಇದಾಗಿರಲಿದೆ. ಅಂದಹಾಗೆ, ಚಿತ್ರದ ಮೊದಲ ಮೋಷನ್ ಟಗರು ಕಾಳಗದ “ಜಾಕಿ” ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ.

ಮದುರೈ ಪ್ರವಾಸದ ವೇಳೆ ಟಗರು ಕಾಳಗ ಮೊದಲ ಬಾರಿ ಕಂಡ ನಿರ್ದೇಶಕ ಪ್ರಗಭಾಲ್ ಅವರಿಗೆ ಅದು ಕೇವಲ ಕ್ರೀಡೆ ಅಲ್ಲ, ಟಗರು ಹಾಗೂ ಅದರ ಪಾಲಕರ ನಡುವಿನ ಆಳವಾದ ಬಾಂಧವ್ಯದ ಸಾಂಸ್ಕೃತಿಕ ಅಭಿವ್ಯಕ್ತಿ ಎಂದು ತಿಳಿಯಿತು. 2022ರಿಂದಲೇ ಮದುರೈಯಲ್ಲೇ ವಾಸವಿದ್ದು ಸಂಶೋಧನೆ ನಡೆಸಿ, ನೈಜ ಕಥೆ ಬರೆದಿದ್ದಾರೆ

ಚಿತ್ರದ ವಾಸ್ತವಿಕತೆಗೆ ಪಾತ್ರಧಾರಿಗಳು ಟಗರುಗಳ ಜೊತೆಗೆ ನೈಜ ಸಂಬಂಧ ಬೆಳೆಸಬೇಕಾಯಿತು. ಅದಕ್ಕಾಗಿಯೇ ಸಿನಿಮಾ ಸಲುವಾಗಿಯೇ ಒಂದಷ್ಟು ಟಗರುಗಳನ್ನು ಖರೀದಿಸಿ, ಅವುಗಳ ಜೊತೆ ದಿನನಿತ್ಯ ಬೆರೆತು, ತರಬೇತಿ ಪಡೆದಿದೆ ಚಿತ್ರತಂಡ.

ಸಿನಿಮಾಕ್ಕೆ ನಟರ ಆಯ್ಕೆ ದೊಡ್ಡ ಸವಾಲಾಗಿತ್ತು. ಶಾರೀರಿಕ ತರಬೇತಿ ಜೊತೆಗೆ ಗಾಯಗಳ ಭೀತಿಯೂ ಎದುರಾಗಿತ್ತು. ಯುವನ್ ಕೃಷ್ಣ ಮತ್ತು ರಿಧನ್ ಕೃಷ್ಣಾಸ್ ತಮ್ಮ ಶ್ರಮದಿಂದ ಸವಾಲನ್ನು ಸ್ವೀಕರಿಸಿ, ಮದುರೈಯಲ್ಲೇ ವಾಸವಿದ್ದು ಟಗರುಗಳ ಜೊತೆ ತರಬೇತಿ ಪಡೆದಿದ್ದಾರೆ. ಅಮ್ಮು ಅಭಿರಾಮಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದು, ಮಧುಸೂಧನ್ ರಾವ್ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದ ನೈಜತೆಗೆ ಮದುರೈ ಸ್ಥಳೀಯರು ಹಾಗೂ ಟಗರುಗಳ ಮಾಲೀಕರೂ ಚಿತ್ರತಂಡಕ್ಕೆ ಸಹಕಾರ ನೀಡಿದ್ದಾರೆ. ಹೀರೋ ಹಾಗೂ ಅವನ ಟಗರಿನ ನಡುವಿನ ಬಾಂಧವ್ಯ ಕಥೆಯ ಹೃದಯವಾಗಿದ್ದು, ಖಳನಾಯಕನ ಪಾತ್ರವೂ ಅದೇ ಮಟ್ಟಿಗೆ ಬಲಿಷ್ಠವಾಗಿದೆ. ಮೂರು ಆಡುಗಳನ್ನು ಕೈಯಲ್ಲಿ ಹಿಡಿದು ಅವನು ಎದುರಾಗುವ ಸನ್ನಿವೇಶಗಳು ಚಿತ್ರಕ್ಕೆ ಹೆಚ್ಚುವರಿ ತೂಕ ನೀಡುತ್ತವೆ.

ಇದೀಗ ಮೂರು ವರ್ಷಗಳ ಪರಿಶ್ರಮದ ಫಲವಾಗಿ ಮೂಡಿಬಂದಿರುವ “ಜಾಕಿ” ಸಿನಿಮಾ, ಟಗರು ಕಾಳಗದ ಪೈಪೆÇೀಟಿ ಜೊತೆಗೆ ಮದುರೈ ಸಂಸ್ಕೃತಿಯನ್ನ ವಿಶ್ವದ ಮುಂದೆ ತೆರೆದಿಡುವ ಪ್ರಯತ್ನವೂ ಆಗಲಿದೆ. ಸದ್ಯ ಬಿಡುಗಡೆ ಆಗಿರುವ ಮೋಷನ್ ಪೋಸ್ಟರ್, ಕುತೂಹಲಕ್ಕೆ ಒಗ್ಗರಣೆ ಹಾಕಿದ್ದು, ಮುಂದಿನ ದಿನಗಳಲ್ಲಿ ಇದೇ ಚಿತ್ರದ ಮತ್ತಷ್ಟು ವಿಶೇಷತೆಗಳು ಹೊರಬೀಳಲಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin