Allu Arjun provides 'accident insurance' to 150,000 fans in Karnataka

ಕರ್ನಾಟಕದ 150 ಮಂದಿ ಸೇರಿ ಸಾವಿರ ಫ್ಯಾನ್ಸ್‍ಗೆ `ಅಪಘಾತ ವಿಮೆ’ ಮಾಡಿಸಿದ ಅಲ್ಲು ಅರ್ಜುನ್ - CineNewsKannada.com

ಕರ್ನಾಟಕದ 150 ಮಂದಿ ಸೇರಿ ಸಾವಿರ ಫ್ಯಾನ್ಸ್‍ಗೆ `ಅಪಘಾತ ವಿಮೆ’ ಮಾಡಿಸಿದ ಅಲ್ಲು ಅರ್ಜುನ್

ನಟನೆ ಮತ್ತು ಅದ್ಭುತ ಡ್ಯಾನ್ಸ್ ಮೂಲಕ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್, ಇದೀಗ ಮಾನವೀಯ ನಡೆಯಿಂದ ಮತ್ತೊಮ್ಮೆ ಲಕ್ಷಾಂತರ ಜನರ ಮನಗೆದ್ದಿದ್ದಾರೆ. ಸುಮಾರು 1,000 ಅಭಿಮಾನಿಗಳಿಗೆ ಅಲ್ಲು ಅರ್ಜುನ್ ‘ಅಪಘಾತ ವಿಮೆ’ ಮಾಡಿಸುವ ಮೂಲಕ ಭಾರತೀಯ ಚಿತ್ರರಂಗದಲ್ಲೇ ಹೊಸದೊಂದು ಮಾದರಿ ಹುಟ್ಟುಹಾಕಿದ್ದಾರೆ.

ಅಲ್ಲು ಅರ್ಜುನ್ ಅಭಿಮಾನಿಗಳಿಂದ ನೂತನವಾಗಿ ಆರಂಭಗೊಂಡಿರುವ ‘ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್’ ಆಶ್ರಯದಲ್ಲಿ ಹೈದರಾಬಾದ್‍ನಲ್ಲಿ ಬೃಹತ್ ಫ್ಯಾನ್ಸ್ ಮೀಟ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರ ಸೇರಿದಂತೆ ದೇಶದ 7 ಪ್ರಮುಖ ರಾಜ್ಯಗಳಿಂದ ಸುಮಾರು 1000 ಅಭಿಮಾನಿಗಳು ಆಗಮಿಸಿದ್ದರು.

ಕರ್ನಾಟಕದ 150 ಅಭಿಮಾನಿಗಳಿಗೆ ವಿಮಾ ಸುರಕ್ಷೆ:

ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಅಭಿಮಾನಿಯ ಸುರಕ್ಷತೆ ಮತ್ತು ಕುಟುಂಬದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಲ್ಲು ಅರ್ಜುನ್ ಮಹತ್ವದ ನಿರ್ಧಾರ ತಳೆದಿದ್ದಾರೆ. ಹೈದರಾಬಾದ್ ಸಮಾವೇಶದಲ್ಲಿ ಕರ್ನಾಟಕ ಒಂದರಿಂದಲೇ ಸುಮಾರು 150ಕ್ಕೂ ಹೆಚ್ಚು ಅಭಿಮಾನಿಗಳು ಭಾಗವಹಿಸಿದ್ದು, ಅವರೆಲ್ಲರಿಗೂ ಅಲ್ಲು ಅರ್ಜುನ್ ಕಡೆಯಿಂದಲೇ ಅಪಘಾತ ವಿಮೆ ಮಾಡಿಸಿ ಕೊಟ್ಟಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

ವಿಮೆಯ ವಿವರ ಹಾಗೂ ಪಾಲಿಸಿ ವಿತರಣೆ:

ರಾಜ್ಯ ಸಮಿತಿ ಸದಸ್ಯರಿಗೆ ತಲಾ 5 ಲಕ್ಷ ಮೊತ್ತದ ಅಪಘಾತ ವಿಮೆ ಕವರೇಜ್, ಜಿಲ್ಲಾ ಸಮಿತಿ ಸದಸ್ಯರಿಗೆ ತಲಾ 3 ಲಕ್ಷ ಮೊತ್ತದ ಅಪಘಾತ ವಿಮೆ ಕವರೇಜ್ ಮಾಡಿಸಲಾಗಿದೆ. ಕಾರ್ಯಕ್ರಮ ವೇದಿಕೆಯಲ್ಲೇ ಅಲ್ಲು ಅರ್ಜುನ್ ಅವರು ಸ್ವತಃ ಪ್ರತಿಯೊಬ್ಬ ಅಭಿಮಾನಿಗೂ ಇನ್ಶೂರೆನ್ಸ್ ಕಾರ್ಡ್‍ಗಳನ್ನು ವಿತರಿಸಿದ್ದಾರೆ. “ನನಗೆ ನನ್ನ ಅಭಿಮಾನಿಗಳ ಪ್ರೀತಿ ಎಷ್ಟು ಮುಖ್ಯವೋ, ಅವರ ಹಾಗೂ ಅವರ ಕುಟುಂಬಗಳ ಸುರಕ್ಷತೆಯೂ ಅಷ್ಟೇ ಮುಖ್ಯ” ಎಂಬ ಸಂದೇಶವನ್ನು ಈ ವೇಳೆ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆಗಳ ಮಹಾಪೂರ

ಅಭಿಮಾನಿಗಳನ್ನು ಕೇವಲ ಸಿನಿಮಾ ಗೆಲುವಿನ ಸಂಭ್ರಮಕ್ಕೆ ಅಥವಾ ಪ್ರಚಾರಕ್ಕೆ ಸೀಮಿತಗೊಳಿಸದೆ, ಅವರ ಕುಟುಂಬದ ಹಿತದೃಷ್ಟಿಯಿಂದ ಈ ರೀತಿಯ ಭದ್ರತಾ ಯೋಜನೆ ರೂಪಿಸಿದ ‘ಐಕಾನ್ ಸ್ಟಾರ್’ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ಅವರ ಸಾಮಾಜಿಕ ಕಾಳಜಿ ಬೇರೆಲ್ಲಾ ಚಿತ್ರರಂಗದ ನಟರಿಗೂ ಪ್ರೇರಣೆಯಾಗಲಿ, ಪ್ರತಿಯೊಬ್ಬ ತಾರೆಯೂ ತಮ್ಮ ಅಭಿಮಾನಿಗಳ ಭದ್ರತೆಗೆ ಈ ರೀತಿ ಚಿಂತಿಸಲಿ ಎಂದು ನೆಟ್ಟಿಗರು ಕೊಂಡಾಡುತ್ತಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin