ಐತಿಹಾಸಿಕ ಚಿತ್ರದಲ್ಲಿ ನಟ ಶ್ರೀಮುರುಳಿ ನಟನೆಗೆ ಸಿದ್ದತೆ
ಚಂದನವನದಲ್ಲಿ ಐತಿಹಾಸಿಕ ಕಥಾವಸ್ತು ಆಧಾರಿತ ಚಿತ್ರ ತಯಾರಿಕೆಗೆ ಸದ್ದಿಲ್ಲದೆ ಸಿದ್ದತೆ ನಡೆದಿದೆ.ವಿಭಿನ್ನ ಪಾತ್ರಗಳ ಮೂಲಕ ಜನಮಾನಸದಲ್ಲಿ ಸ್ಥಾನ ಪಡೆದಿರುವ ಶ್ರೀಮುರುಳಿ ನಾಯಕನಾಗಿ ಕಾಣಿಸಿಕೊಳ್ಳಲಿದ್ಧಾರೆ.

ಸರಿಸುಮಾರು 500 ವರ್ಷದ ಹಳೆಯ ಕಥೆ ಒಳಗೊಂಡಿರುವಂತಹ ಚಿತ್ರದಲ್ಲಿ ಶ್ರೀಮುರುಳಿ ನಟಿಸಲಿದ್ದಾರೆ, ಬಾರಿ ಬಜೆಟಿನ ಚಿತ್ರವನ್ನು ಯುವ ನಿರ್ದೇಶಕ ಪುನೀತ್ ರುದ್ರನಾಗ್ ಸಾರಥ್ಯ ವಹಿಸಿಕೊಂಡಿದ್ದು ನಿರ್ಮಾಪಕ ಜಯರಾಮ್ ದೇವಸಮುದ್ರ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ. ಕಾಲಘಟ್ಟದಲ್ಲಿ ನಡೆಯುವ ಕಥಾ ವಸ್ತುವಿನ ಬಗ್ಗೆ ಪೂರ್ವ ತಯಾರಿ ನಡೆಸುತ್ತಿದ್ದಾರೆ.

ಕೆಜಿಫ್ ಚಾಪ್ಟರ್ 1 , ಎಕ್ಕ ಸೇರಿದಂತೆ ಹಲವು ಚಿತ್ರದಲ್ಲಿ ನಟಿಸಿರುವ ಅನುಭವವಿರುವ ಪುನೀತ್ ರುದ್ರನಾಗ್ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಈ ನಡುವೆ ನಟ ಯುವರಾಜ್ ಕುಮಾರ್ ಅಭಿನಯದ “ಯುವ ರಣಧೀರವ ಕಂಠೀರವ” ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ನಟ ಶ್ರೀಮುರಳಿಗಾಗಿ 500 ವರ್ಷದ ಹಳೆಯ ಮಹತ್ವಾಕಾಂಕ್ಷೆಯ ಕಥೆ ಆಯ್ಕೆ ಮಾಡಿಕೊಂಡು ಒಂದಷ್ಟು ಪೂರ್ವ ತಯಾರಿ ಕೆಲಸ ಮಾಡುತ್ತಿದ್ದಾರೆ. ಮೈಸೂರಿನ ಸಂಕೇತ್ ಚಿತ್ರಕ್ಕೆ ಛಾಯಾಗ್ರಹಕರಾಗಿ ಕೆಲಸ ಮಾಡಲಿದ್ದು , ಸಂಕಲನ ವಿಜಯ್ ರಾಜ್ ಕಲಾ ನಿರ್ದೇಶನದಲ್ಲಿ ಅಮರ್, ಸಲಾರ್ ಚಿತ್ರಕ್ಕೆ ವಿ.ಎಫ್.ಎಕ್ಸ್ ಮಾಡಿರುವ ನಿರ್ಮಲ್ ಕುಮಾರ್ ಅವರು ಸಾಥ್ ನೀಡಲಿದ್ದಾರೆ

ಸಂಗೀತ ನಿರ್ದೇಶಕರ ಆಯ್ಕೆ ನಡೆಯುತ್ತಿದೆಯಂತೆ. ಜೊತೆಗೆ ತಂತ್ರಜ್ಞರು ಹಾಗೂ ಕಲಾವಿದರ ಆಯ್ಕೆಯ ಪ್ರಕ್ರಿಯೆ ಮುಂದುವರೆದಿದೆ. ನವೆಂಬರ್ ನಲ್ಲಿ ಚಿತ್ರದ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ

