Kiccha Sudeep's single call, Bigg Boss starts again

ಕಿಚ್ಚ ಸುದೀಪ್ ಒಂದೇ ಕರೆಗೆ ಬಿಗ್ ಬಾಸ್ ಮತ್ತೆ ಆರಂಭ - CineNewsKannada.com

ಕಿಚ್ಚ ಸುದೀಪ್ ಒಂದೇ ಕರೆಗೆ ಬಿಗ್ ಬಾಸ್ ಮತ್ತೆ ಆರಂಭ

ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ನಿಯಮ ಪಾಲಿಸಿಲ್ಲ ಎಂದು ಬಿಡದಿಯ ಜಾಲಿವುಡ್ ಸ್ಟುಡಿಯೋಗೆ ಬೆಂಗಳೂರು ದಕ್ಷಿಣ ಜಿಲ್ಲಾಡಳಿತ ಬೀಗ ಹಾಕಿದ ಬಿಗ್ ಬಾಸ್ ಶೋ ಸ್ಪರ್ಧಿಗಳನ್ನು ಹೊರಗೆ ಕಳುಹಿಸಲಾಗಿತ್ತು, ಇದು ಸಹಕವಾಗಿ ಶೋ ಸಂಘಟಕರಿಂದ ಹಿಡಿದು ಬಿಗ್ ಬಾಸ್ ವೀಕ್ಷಕರಿಗೆ ಆಘಾತ ಎದುರಾಗಿತ್ತು.

ಬಿಗ್‍ಬಾಸ್ ಶೋ ನಿರೂಪಕ ಹಾಗು ನಟ ಕಿಚ್ಚ ಸುದೀಪ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾಡಿದ ಒಂದೇ ಒಂದು ಪೋನ್ ಕರೆಯಿಂದ ಬಿಗ್‍ಬಾಸ್ ಮತ್ತೆ ಆರಂಭವಾಗಿದೆ. ಇದರಿಂದ ಆತಂಕದಲ್ಲಿದ್ದ ಸ್ಪರ್ಧಿಗಳು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದು ಮತ್ತೆ ಬಿಗ್ ಬಾಸ್ ಮನೆ ಸೇರಿದ್ದಾರೆ

ಕಿಚ್ಚ ಸುದೀಪ್ ಮನವಿಯ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೆಂಗಳೂರು ದಕ್ಷಿಣ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು ಜಾಲಿವುಡ್ ನಿಯಮ ಪಾಲಿಸುವ ಸಯಮ ನೀಡಿ ಬೀಗ ತೆರೆಯುವಂತೆ ಸೂಚಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಇಂದಿನಿಂದ ಮತ್ತೆ ಆರಂಭವಾಗಲಿದೆ.

ಬಿಗ್ ಬಾಸ್ ಕಾರ್ಯಕ್ರಮ ನಡೆಯುವ ಸ್ಥಳವಾದ ಜಾಲಿವುಡ್‍ನಲ್ಲಿ ನಿಯಮ ಪಾಲಿಸದ ಹಿನ್ನೆಲೆಯಲ್ಲಿ ಬೀಗಮುದ್ರೆ ಹಾಕಿದ ಹಿನ್ನೆಲೆಯಲ್ಲಿ ಬಿಗ್‍ಬಾಸ್ ಶೋ ಎರಡು ದಿನಗಳ ಕಾಲ ಚಿತ್ರೀಕರಣ ಆಗಿರಲಿಲ್ಲ, ಬದಲಾಗಿ ಎಲ್ಲಾ ಸ್ಪರ್ಧಿಗಳನ್ನು ಬಿಡದಿಯ ಖಾಸಗಿ ರೆಸಾರ್ಟ್‍ನಲ್ಲಿ ಉಳಿಸಲಾಗಿತ್ತು, ಈಗ ಮತ್ತೆ ಬಿಗ್ ಬಾಸ್‍ಗೆ ಮನೆಗೆ ಬಂದಿದ್ಧಾರೆ.

ಸಾಮಾಜಿಕ ಜಾಲತಾಣದಲ್ಲಿ ನಟ ಕಿಚ್ಚ ಸುದೀಪ್ ಅವರು ಸಮಯೋಚಿತ ಬೆಂಬಲಕ್ಕಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇತ್ತೀಚಿನ ಅವ್ಯವಸ್ಥೆ ಅಥವಾ ಗೊಂದಲಗಳಲ್ಲಿ ಬಿಗ್‍ಬಾಸ್ ಭಾಗಿಯಾಗಿಲ್ಲ ಅಥವಾ ಭಾಗವಾಗಿರಲಿಲ್ಲ. ಮತ್ತೆ ಬಿಗ್‍ಬಾಸ್ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಧನ್ಯವಾದ ಹೇಳುವುದಾಗಿ ತಿಳಿಸಿದ್ದಾರೆ

ತಮ್ಮ ಒಂದೇ ಒಂದು ಕರೆಗೆ ತಕ್ಷಣ ಸ್ಪಂದಿಸಿದ್ದಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮತ್ತೊಮ್ಮೆ ಧನ್ಯವಾದ ಹೇಳುವೆ, ಎಂದಿನಂತೆ ಬಿಗ್ ಬಾಸ್ ಮತ್ತೆ ಆರಂಭವಾಗಿದೆ ಎಂದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin