“ದಿಲ್ ಮಾರ್” ಚಿತ್ರ ಮಾಡು ಇಲ್ಲವೆ ಮಡಿ ಎನ್ನುವಂತಾಗಿದೆ: ನಾಯಕ ರಾಮ್ ಗೌಡ
“ ಪಾತ್ರ ಒಂದು ರೀತಿ ಸೈಕ್ ರೀತಿ ಇದೆ. ಆದರೆ ಹುಚ್ಚ ಅಲ್ಲ. ನಿರ್ದೇಶಕ ಚಂದ್ರಮೌಳಿ ಕಥೆ ಹೇಳಿಲ್ಲ. ಸಿನಿಮಾನೂ ತೋರಿಸಿಲ್ಲ. ಚಿತ್ರದಲ್ಲಿ ನನ್ನ ಲೈಫ್ ಇದೆ. ಜೊತೆಗೆ ನಿಮ್ಮದೂ ಕೂಡ..ಎಷ್ಟು ಹೇಳುತ್ತೇನೆ ಅಷ್ಟು ಮಾಡಿ ಎಂದರು, ಮರು ಮಾತನಾಡದೆ ಚಿತ್ರೀಕರಣ ಸಮಯದಲ್ಲಿ ಯಾರ ಜೊತೆಯೂ ಮಾತನಾಡದೆ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದೆ…”
ಹೀಗಂತ ಹೇಳಿಕೊಂಡರು ನಾಯಕ ನಟ ರಾಮ್ ಗೌಡ, “ದಿಲ್‍ಮಾರ್” ಸಿನಿಮಾಗಾಗಿ ಫ್ಯಾಮಿಲಿ, ವಯಕ್ತಿಕ ಜೀವನ ಕಳೆದುಕೊಂಡಿದ್ದೇನೆ. ಚಿತ್ರ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ನಾಯಕನಾಗಲು ಡ್ರೈವರ್, ಪೆÇ್ರಡಕ್ಷನ್ ಮ್ಯಾನೇಜರ್ ಆಗಿದ್ದೇನೆ. ಸಿನಿಮಾ ಆರಂಭದಲ್ಲಿ ಅವಮಾನಕ್ಕೆ ಒಳಗಾಗಿದ್ದೇನೆ, ಸೆಟ್ಟೇರಿದ್ದ ಅನೇಕ ಸಿನಿಮಾ ನಿಂತು ಹೋಗಿದೆ. ಈ ಸಿನಿಮಾ ಫ್ಯಾಮಿಲಿಗಿಂತ ಹೆಚ್ಚು. ಗೆದ್ದೇ ಗೆಲ್ಲುವ ಹಂಬಲವಿದೆ, ಸಹಕಾರ ಪ್ರೋತ್ಸಾಹವಿರಲಿ ಎಂದರು

ಚಿತ್ರದಲ್ಲಿ ಸೈಕ್ ಶುಕ್ಲಾ ಆಗಿ ಕಾಣಿಸಿಕೊಂಡಿದ್ದೇನೆ. ನಾಯಕನಾಗಿ ಮೊದಲ ಚಿತ್ರ. 2006ರಿಂದ ನಾಯಕನಾಗುವ ಕನಸು ಕಟ್ಟಿಕೊಂಡಿದ್ದೆ ಈಗ ನನಸಾಗಿದೆ.ಖುಷಿ ಭಯ ಆಗ್ತಾ ಇದೆ.ಕಷ್ಟಪಟ್ಟು ಇಡೀ ತಂಡ ಕೆಲಸ ಮಾಡಿದೆ. ಎಲ್ಲಾ ಕಲಾವಿದರು, ತಂತ್ರಜ್ಞರು ಸಹಕಾರ ನೀಡಿದ್ದಾರೆ, ಪ್ರತಿಯೊಬ್ಬರು ಸಿನಿಮಾ ನೋಡಿ, ನನ್ನಂತಹ ಅನೇಕರಿಗೆ ಅನುಕೂಲವಾಗಲಿದೆ.ಸಿನಿಮಾ ನೋಡಿ ಬೆಂಬಲಿಸಿ ಎಂದು ಕೇಳಿಕೊಂಡರು.
ನಟಿ ಅದಿತಿ ಪ್ರಭುದೇವ ಮಾತನಾಡಿ ಪ್ರತಿಯೊಂದು ಪಾತ್ರವೂ ಚೆನ್ನಾಗಿ ಬಂದಿದೆ. ನಿರ್ದೇಶಕರು ಹೇಳಿದ ಕಥೆ ಕೇಳಿ ಇಂಟರ್ ವೆಲ್‍ನಲ್ಲಿ ಅತ್ತಿದ್ದೇನೆ. ಕ್ಲೈಮ್ಯಾಕ್ಸ್ ಹೇಳಿಲ್ಲ .ಎರಡು ಮೂರು ರೀತಿ ಚಿತ್ರೀಕರಣ ಮಾಡಿದ್ದಾರೆ. ಅದರಲ್ಲಿ ಯಾವುದು ಬಳಸಿಕೊಂಡಿದ್ದಾರೆ ಗೊತ್ತಿಲ್ಲ. ನಾಯಕ ರಾಮ್ ಪಾತ್ರವೇ ಆಗಿದ್ದಾರೆ.ಎ ಲ್ಲರೂ ಹೊಸಬರೇ ಇದ್ದಾರೆ ಎಂದು ಹೇಳಿದರು

ನಿರ್ದೇಶಕರಿಗೆ ಆದೇನು ಆತ್ಮವಿಶ್ವಾಸ:
ನಿರ್ದೇಶಕ ಎಂ ಚಂದ್ರಮೌಳಿ ಮಾತನಾಡಿ ಎರಡು ವರ್ಷದ ಹಿಂದೆಯೇ ಚಿತ್ರ ಸಿದ್ದವಿತ್ತು ,ಬ್ಯಾಕ್ ರೌಂಡ್‍ಗಾಗಿ ತಡ ಆಯ್ತು. ಈ ಹಂತಕ್ಕೆ ಬರಲು ನಿರ್ಮಾಪಕರು ಕಾರಣ. ಕಿಂಡಲ್ ಮಾಡುವರಿಗೆ ಏನು ಹೇಳೋದು, ತಡಿರಿ ಸರ್ ನಾವೂ ಬರ್ತಾ ಇದ್ದೇವೆ ಎಂದು ಮಾತಿನ ಮೂಲಕವೇ ತಿರುಗೇಟು ನೀಡಿದರು.
ಇದೇ 24 ರಂದು ನಾಯಕ ರಾಮ್ ನಾಯಕಿಯರಾದ ಅದಿತಿ ಪ್ರಭುದೇವ, ಡಿಂಪಲ್ ಹಯಾತಿ ಅವರ ಪಾತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲ ಕಲಾವಿದರ ಪಾತ್ರಗಳು ಉತ್ತಮವಾಗಿದೆ ಗೋವಿಂದೇಗೌಡಪ-ಜಿಜಿ ನಟಿಸಿದ್ದ ಎರಡು ಸನ್ನಿವೇಶಗಳನ್ನು ಕಟ್ ಮಾಡಲಾಗಿದೆ ಕ್ಷಮೆ ಇರಲಿ ಎಂದರು.
ಕಥೆ, ಪಾತ್ರ, ನಾಯಕ ಎಲ್ಲವೂ ಹೊಸದು ಪ್ರೆಶ್ ಆಗಿರಲಿದೆ. ತಂತ್ರಜ್ಞರು ಸಿನಿಮಾವನ್ನು ನೂರು ಬಾರಿ ನೋಡಿದ್ದಾರೆ. ಅವರಿಗೆ ಬೇಜಾರು ಆಗಿಲ್ಲ. ನೀವು ಒಂದು ಬಾರಿ ಸಿನಿಮಾ ನೋಡಿ, ಒಳ್ಳೆಯದು ಇದ್ದರೂ ಹೇಳಿ ಕೆಟ್ಟದು ಇದ್ದರೂ ಹೇಳಿ,ತಿದ್ದಿಕೊಳ್ಳುವೆ. ಚಿತ್ರರಂಗದಲ್ಲಿ ಇರಲು ಬಂದಿದ್ದೇನೆ. ಮುಂದೆಯೂ ಸಿನಿಮಾ ಮಾಡ್ತೇನೆ ಎಂದರು.
ನಿರ್ಮಾಪಕ ನಾಗರಾಜ್ ಭದ್ರವತಿ ಮಾತನಾಡಿ ಟ್ರೈಲರ್ ಅದ್ಬುತವಾಗಿ ಮೂಡಿಬಂದಿದೆ.ಮೊದಲ ಚಿತ್ರಕ್ಕೆ ದೃವ ಸರ್ಜಾ ಬೆಂಬಲ ನೀಡಿರುವುದಕ್ಕೆ ಧನ್ಯವಾದಗಳು ಎಂದರು. ಸಹ ನಿರ್ಮಾಪಕ ಮಹೇಶ ಕೆ, ದೇವು ಕೈ ಜೋಡಿಸಿದ್ದಾರೆ
ಕಲಾವಿದರಾದ ದಿವ್ಯಶ್ರೀ,ನರೇಂದ್ರ, ಶೇಖರ್ , ಹಿನ್ನೆಲೆ ಸಂಗೀತ ನೀಡಿರುವ ಪ್ರದ್ಯೋತ್ತನ್, ಮತ್ತಿತರರು ತಮ್ಮ ತಮ್ಮ ಪಾತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡರು
ಧೃವ ಸರ್ಜಾ ಟ್ರೈಲರ್ ಬಿಡುಗಡೆ
ದಿಲ್ ಮಾರ್ ಚಿತ್ರದ ಟ್ರೈಲರ್ ಬಿಡುಡಗೆ ಮಾಡಿ ನಟ ಧೃವ ಸರ್ಜಾ ಶುಭ ಹಾರೈಸಿದರು. ಹೊಸ ತಂಡ ಗೆಲ್ಲಲಿ ಇನ್ನಷ್ಟು ಸಿನಿಮಾ ಮಾಡಲಿ ಎಂದು ಶುಭ ಹಾರೈಸಿದರು
ಎಮೋಷನ್ ,ಪ್ರೀತಿ, ಅಕ್ಷನ್ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಚಂದ್ರಮೌಳಿ ಆಕ್ಷನ್ ಕಟ್ ಹೇಳಿರುವ ಚಿತ್ರದಲ್ಲಿ ರಾಮ್ ಗೌಡ, ಅದಿತಿ ಪ್ರಭುದೇವ, ತೆಲುಗು ನಟಿ ಡಿಂಪಲ್ ಹಯಾತಿ, ಸಾಯಿ ಕುಮಾರ್, ಶರತ್ ಲೋಹಿತಾಶ್ವಸೇರಿದಂತೆ ಮತ್ತಿತರು ಕಾಣಿಸಿಕೊಂಡಿರುವ ಚಿತ್ರ ಇದು.

