Tamil director Atlee praises actors Rishab Shetty and Yash for singing: Kantara's film also appreciated

ನಟರಾದ ರಿಷಬ್ ಶೆಟ್ಟಿ, ಯಶ್ ಹಾಡಿ ಹೊಗಳಿದ ತಮಿಳು ನಿರ್ದೇಶಕ ಅಟ್ಲಿ : ಕಾಂತಾರ ಚಿತ್ರಕ್ಕೂ ಮೆಚ್ಚುಗೆ - CineNewsKannada.com

ನಟರಾದ ರಿಷಬ್ ಶೆಟ್ಟಿ, ಯಶ್ ಹಾಡಿ ಹೊಗಳಿದ ತಮಿಳು ನಿರ್ದೇಶಕ ಅಟ್ಲಿ : ಕಾಂತಾರ ಚಿತ್ರಕ್ಕೂ ಮೆಚ್ಚುಗೆ

ಬೆಂಗಳೂರು ಅಂದೆ ನಂಗೆ ತುಂಬಾ ಇಷ್ಟ. ಇಲ್ಲಿನ ಸಿನಿಮಾ ನಟರಾದ ಯಶ್, ರಿಷಬ್ ಶೆಟ್ಟಿ ಮುಂತಾದವರ ಜೊತೆಗೆ ನನಗೆ ಉತ್ತಮ ಸ್ನೇಹವಿದೆ ಎಂದು ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲಿ ಕುಮಾರ್ ಹೇಳಿದ್ದಾರೆ

ಕನ್ನಡ ಸಿನಿಮಾ ನಟರು ಅದ್ಭುತವಾಗಿ ಕೆಲಸ ಮಾಡ್ತಾ ಇದ್ದಾರೆ.
ಕಾಂತಾರ ಅಧ್ಯಾಯ 1 ನಿಜಕ್ಕೂ ಅದ್ಭುತ ಸಿನಿಮಾ‘‘ ನಾನು ನೋಡಿ ಬೆರಗಾಗಿದ್ದೇನೆ ಎಂದು ಮೆಚ್ಚಿಗೆ ವ್ಯಕ್ತ ಪಡಿಸಿದ್ದಾರೆ.

ಮೂಲತಃ ತಮಿಳು ನಾಡಿನವರಾಗಿದ್ದರು ಅಟ್ಲಿಗೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನ ಅಂದ್ರೆ ಸಖತ್ ಭಕ್ತಿ ಇದೆ. ಆಗಾಗ ಕುಕ್ಕೆ ಸುಬ್ರಮಣ್ಯ ಸ್ವಾಮಿ ದರ್ಶನ ಪಡೆಯುತ್ತೇನೆ ಎಂದು ಹೇಳಿದರು

ಜವಾನ್ ಸಿನಿಮಾ ಸೂಪರ್ ಹಿಟ್ ಆದ ಕಾರಣ ಖರೀದಿ ಮಾಡಿರುವ ಪಿಕಲ್ ಬಾಲ್ ತಂಡಕ್ಕೆ ಬೆಂಗಳೂರು ಜವಾನ್ಸ್ ಎಂದು ಹೆಸರಿಟ್ಟಿರುವೆ.ಆರ್.ಸಿ .ಬಿ ಫ್ಯಾನ್. ಬೆಂಗಳೂರು ತಂಡ ಕಳೆದ ಬಾರಿ ಐಪಿಎಲ್ ಕಪ್ ಗೆದ್ದಿತ್ತು.. ಅದರಂತೆ ನಮ್ಮ ತಂಡ ಬೆಂಗಳೂರು ಜವಾನ್ಸ್ ತಂಡ ಕೂಡ ಗೆದ್ದಿತ್ತು ಎಂದು ಹೇಳಿದ್ದಾರೆ

ಪಿಕಲ್‌ಬಾಲ್ ಲೀಗ್ ಪಂದ್ಯಾವಳಿ

ರಾಜರಾಣಿ, ತೇರಿ, ಬಿಗಿಲ್, ಜವಾನ್ ಖ್ಯಾತಿಯ
ಅಲ್ಲು ಅರ್ಜುನ್ ಮುಂದಿನ ಚಿತ್ರದ ನಿರ್ದೇಶಕ‌
ನಿರ್ದೇಶಕ ಅಟ್ಲಿ ಕುಮಾರ್ ರಿಂದ ವರ್ಲ್ಡ್ ಪಿಕಲ್‌ಬಾಲ್ ಲೀಗ್ ಪಂದ್ಯಾವಳಿ ಯಲ್ಲಿ ಬೆಂಗಳೂರು ಒಪನ್ 2025 ನಲ್ಲಿ ಅಟ್ಲಿ ಮಾಲಿಕತ್ವದ ಬೆಂಗಳೂರು ಜವಾನ್ಸ್ ತಂಡ ಆಡುತ್ತಿದೆ. ಈ ಕಾರ್ಯಕ್ರಮವನ್ನ ಬೆಂಗಳೂರಿನ ಪಿಕಲ್ ಬಾಲ್ ಕ್ಲಬ್ ನಲ್ಲಿ‌ ಚಾಲನೆ ನೀಡಲಾಯಿತು

ಕಳೆದ ಬಾರಿ ಭಾರತದ ಮೊಟ್ಟ ಮೊದಲ ಪಿಕಲ್ ಬಾಲ್ ಲೀಗ್ ಅನ್ನು ಕರ್ನಾಟಕ ಸ್ಟೇಟ್ ಪಿಕಲ್ ಬಾಲ್ ಅಸೋಸಿಯೇಷನ್ ಸಾರಥ್ಯದಲ್ಲಿ ಯಶಸ್ವಿಯಾಗಿ ಮಾಡಲಾಗಿತ್ತು. ಇದೀಗ ಎರಡನೇ ಪಿಕಲ್ ಬಾಲ್ ಲೀಗ್ ಆವೃತ್ತಿಗೆ ಚಾಲನೆ ನೀಡಲಾಗಿದೆ. ಅಕ್ಟೋಬರ್ 12 ತಾರೀಖ್ ತನಕ ರೋಚಕ ಪಿಕಲ್ ಬಾಲ್ ಪಂದ್ಯಾವಳಿಗಳು ನಡೆಯಲಿವೆ

ಕಳೆದ ವರ್ಷ ಆರ್.ಸಿ ಬಿ ತಂಡ ಐಪಿಎಲ್ ಟ್ರೋಫಿ ಗೆದ್ದತ್ತು.. ಬೆಂಗಳೂರು ಜವಾನ್ಸ್ ಕೂಡ ಚಾಂಪಿಯನ್ಸ್ ಆಗಿತ್ತು. ಬೆಂಗಳೂರು ಒಪನ್ 2025 ವರ್ಲ್ಡ್ ಪಿಕಲ್ ಬಾಲ್ ಲೀಗ ಉದ್ಘಾಟಿಸಿ, ಸ್ಫರ್ಧಾಳುಗಳ ಜತೆ ಸ್ನೇಹಪೂರ್ವಕ ‌ಅಟ್ಲಿ ಕುಮಾರ್ ಪಂದ್ಯ ಆಡುವ ಮೂಲಕ ಸ್ಪೂರ್ತಿ ತುಂಬಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin