Director Simple Suni is all set to create a 'Gatavaibhav' for the Dushyant-Aashika pair.

ದುಶ್ಯಂತ್- ಆಶಿಕಾ ಜೋಡಿಯ ‘ಗತವೈಭವ’ ಸೃಷ್ಠಿಸಲು ಸಜ್ಜಾದ ನಿರ್ದೇಶಕ ಸಿಂಪಲ್ ಸುನಿ - CineNewsKannada.com

ದುಶ್ಯಂತ್- ಆಶಿಕಾ ಜೋಡಿಯ ‘ಗತವೈಭವ’ ಸೃಷ್ಠಿಸಲು ಸಜ್ಜಾದ ನಿರ್ದೇಶಕ ಸಿಂಪಲ್ ಸುನಿ

ನಿರ್ದೇಶಕ ಸಿಂಪಲ್ ಸುನಿ ಬೆಳ್ಳಿತೆರೆಯಲ್ಲಿ ‘ಗತವೈಭವ’ ಸೃಷ್ಟಿಸಲು ಸಜ್ಜಾಗಿದ್ದಾರೆ. ಹೊಸ ಪ್ರತಿಭೆ ದುಶ್ಯಂತ್ ನಾಯಕನಾಗಿ, ಚುಟುಚುಟು ಬ್ಯೂಟಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ನವೆಂಬರ್ 14ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ.

ಇತ್ತೀಚೆಗೆ ಟೀಸರ್ ಮೂಲಕ ಗಮನಸೆಳೆದಿರುವ ಗತವೈಭವ ಸಿನಿಮಾದ ಮೊದಲ ಹಾಡನ್ನು ಅನಾವರಣ ಮಾಡಲಾಗಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ವರ್ಣಮಾಲೆ ಎಂಬ ಮೆಲೋಡಿ ಗೀತೆ ಬಿಡುಗಡೆಯಾಗಿದೆ

ಪತ್ರಗಳ ಮೂಲಕ ಪ್ರೀತಿ ವಿನಿಮಯ ಮಾಡುವ ನವ ಪ್ರೇಮಿಗಳ ನಡುವಿನ ವರ್ಣಮಾಲೆ ಹಾಡಿಗೆ ಸಿಂಪಲ್ ಸುನಿ ಕ್ಯಾಚಿ ಮ್ಯಾಚಿ ಪದ ಪೆÇಣಿಸಿದ್ದಾರೆ. ಅಭಿನಂದನ್ ಮಹಿಶಾಲೆ, ಸುನಿಧಿ ಗಣೇಶ್ ಕಂಠ ಕುಣಿಸಿದ್ದು, ಜೂಡಾ ಸ್ಯಾಂಡಿ ಸಂಗೀತದ ಇಂಪು ವರ್ಣಮಾಲೆ ಗೀತೆಯ ಶ್ರೀಮಂತಿಕೆ ಹೆಚ್ಚಿಸಿದೆ. ದುಶ್ಯಂತ್-ಆಶಿಕಾ ಹಳ್ಳಿ ಗೆಟಪ್ ನಲ್ಲಿ ಮಿಂಚಿದ್ದಾರೆ.

‘ಗತವೈಭವ’ ಫ್ಯಾಂಟಸಿ ಹಾಗೂ ಪುರಾಣದ ಕಥೆ ಜೊತೆಗೆ ರೋಮ್ಯಾಂಟಿಕ್ ಲವ್ ಸ್ಟೋರಿ ಮಿಕ್ಸ್ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ಇದು ಸಿಂಪಲ್ ಸುನಿ ಕರಿಯರ್‍ನ ವಿಭಿನ್ನ ಸಿನಿಮಾ. ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ಹಾಡಿಗೆ ಸಾಹಿತ್ಯ ಕೂಡ ಬರೆದಿದ್ದಾರೆ. ಸರ್ವ್‍ಗರಾ ಸಿಲ್ವರ್ ಸ್ಕ್ರೀನ್ಸ್ ಹಾಗೂ ಸುನಿ ಸಿನಿಮಾಸ್ ಸಂಸ್ಥೆಯಲ್ಲಿ ದೀಪಿಕ್ ತಿಮ್ಮಯ್ಯ ಹಾಗೂ ಸುನಿ ಇಬ್ಬರೂ ಸೇರಿ ನಿರ್ಮಾಣ ಮಾಡ್ತಿದ್ದಾರೆ. ವಿಲಿಯಂ ಡೇವಿಡ್ ಕ್ಯಾಮೆರಾ ವರ್ಕ್, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.

ಗತವೈಭವ ಕನ್ನಡದ ಜೊತೆಗೆ ತೆಲುಗು ಸೇರಿದಂತೆ ಬೇರೆ ಭಾಷೆಯಲ್ಲಿಯೂ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರತಂಡ ಬೇರೆ ರಾಜ್ಯಗಳಿಗೆ ಹೋಗಿ ಪ್ರಮೋಷನ್ ನಡೆಸುತ್ತಿದೆ. ನಿನ್ನೆ ಹೈದರಾಬಾದ್ ನಲ್ಲಿ ಗತವೈಭವದ ಪ್ರಚಾರ ಕೆಲಸ ನಡೆದಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin