ಆಕ್ಷನ್ ಥ್ರಿಲ್ಲರ್ ‘ಕಟ್ಟಾಳನ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ - CineNewsKannada.com

ಆಕ್ಷನ್ ಥ್ರಿಲ್ಲರ್ ‘ಕಟ್ಟಾಳನ್’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ಆಕ್ಷನ್, ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ “ಕಟ್ಟಾಳನ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುದ್ದು ಗಮನ ಸೆಳೆದಿದೆ.ನಟ ಆಂಟನಿ ವರ್ಗೀಸ್ ಪೆಪೆ ಸಂಪೂರ್ಣ ಮಾಸ್ ಮತ್ತು ರೌದ್ರಾವತಾರದಲ್ಲಿ ಅಬ್ಬರಿಸಿದ್ದಾರೆ.

ಜ್ವಲಂತ ಕಣ್ಣುಗಳು, ಕೆಂಪಾಗಿರುವ ಗೊಂದಲಮಯ ಕೇಶವಿನ್ಯಾಸ, ತುಟಿಗಳ ನಡುವೆ ಉರಿಯುತ್ತಿರುವ ಸಿಗಾರ್ – ಈ ಎಲ್ಲಾ ಅಂಶಗಳು ಪೋಸ್ಟರ್ ಗಮನ ಸೆಳೆದಿದೆ. ಪ್ಯಾನ್-ಇಂಡಿಯನ್ ಹಿಟ್ ಮಾರ್ಕೊ ನಂತರ, ಇದು ಕ್ಯೂಬ್ಸ್ ಎಂಟರ್‍ಟೈನ್‍ಮೆಂಟ್ ಚಿತ್ರ ಇದಗಿದೆ

ಚೊಚ್ಚಲ ನಿರ್ದೇಶಕ ಪಾಲ್ ಜಾರ್ಜ್ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಚಿತ್ರ, ಮಲಯಾಳಂನ ಅತಿ ದೊಡ್ಡ ಪೂಜೆ ಸಮಾರಂಭದೊಂದಿಗೆ ಪ್ರಾರಂಭವಾಗಿತ್ತು. ಪ್ಯಾನ್-ಇಂಡಿಯನ್ ದೃಶ್ಯಕಾವ್ಯವಾಗಿ ಪ್ರೇಕ್ಷಕರನ್ನು ತಲುಪಲಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಕಟ್ಟಾಳನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಥೈಲ್ಯಾಂಡ್‍ನಲ್ಲಿ ಚಿತ್ರೀಕರಿಸಿದ ಅಪಾಯಕಾರಿ ಆಕ್ಷನ್ ಸೀಕ್ವೆನ್ಸ್‍ಗಳಿಗೆ ಓಂಗ್-ಬಾಕ್ ಚಿತ್ರಗಳ ಖ್ಯಾತಿಯ ವಿಶ್ವ ವಿಖ್ಯಾತ ಸಾಹಸ ನಿರ್ದೇಶಕ ಕೇಚಾ ಕಾಂಫಕ್ಡೀ ತಂಡ ಸಂಯೋಜನೆ ಮಾಡಿದೆ. ಕುತೂಹಲಕಾರಿ ಸಂಗತಿ ಏನೆಂದರೆ, ಓಂಗ್-ಬಾಕ್ ಸಿನಿಮಾಗಳ ಮೂಲಕ ಹೆಸರು ಮಾಡಿದ ಆನೆ ಪಾಂಗ್ ಸಹ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.

ಚಿತ್ರದಲ್ಲಿ ತೆಲುಗು ನಟ ಸುನೀಲ್, ಕಬೀರ್ ದುಹಾನ್ ಸಿಂಗ್, ರಾಜ ತಿರಂದಾಸು, ಬೇಬಿ ಜೀನ್, ಪಾರ್ಥ್ ತಿವಾರಿ, ಹಾಗೂ ಮಲಯಾಳಂನ ಹಿರಿಯ ಕಲಾವಿದರಾದ ಜಗದೀಶ್ ಮತ್ತು ಸಿದ್ದಿಕ್ ಸೇರಿದಂತೆ ಬಹು ದೊಡ್ಡ ತಾರಾಬಳಗವಿದೆ. ಮಲಯಾಳಂ, ತಮಿಳು, ತೆಲುಗು, ಕನ್ನಡ, ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಕಟ್ಟಾಳನ್ ಭಾರತೀಯ ಚಿತ್ರರಂಗದ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin