ಅದ್ವಿತಿ ಶೆಟ್ಟಿ- ರೂಪೇಶ್ ಶೆಟ್ಡಿ ನಟನೆಯ “ಜೈ” ಚಿತ್ರದ ಹಾಡು ಬಿಡುಗಡೆ
ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ತುಳು ಹಾಗೂ ಕನ್ನಡ ಭಾಷೆಯಲ್ಲಿ ಮೂಡಿ ಬಂದಿರುವ ” ಜೈ ” ಸಿನಿಮಾದ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ

ಚಿತ್ರದ ಹಾಡನ್ನು ಗುರುಕಿರಣ್ , ನಿರಂಜನ್ ದೇಶಪಾಂಡೆ , ವಿನಯ್ ಗೌಡ, ರೂಪೇಶ್ ರಾಜಣ್ಣ , ಆರ್ಯವರ್ಧನ್ ಗುರೂಜಿ ದಂಪತಿ ಹಾಡು ಬಿಡುಗಡೆ ಮಾಡಿ ಶುಭ ಹಾರೈಸಿದರು
ಜೈ ಸಿನಿಮಾ ತುಳು ಮತ್ತು ಕನ್ನಡ ಎರಡು ಭಾಷೆಯಲ್ಲೂ ಬಿಡುಗಡೆ ಆಗಲಿದ್ದು , ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಸಾಹಿತ್ಯ ಬರೆದಿದ್ದು, ಕನ್ನಡಕ್ಕೆ ಕೀರ್ತನ್ ಬಂಡಾರಿ ಬರೆದಿದ್ದಾರೆ. ತುಳು ಭಾಷೆಯಲ್ಲಿ ರೂಪೇಶ್ ಶೆಟ್ಟಿ ಕೂಡ ಈ ಹಾಡು ಬರೆದಿದ್ದಾರೆ.

ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಅದ್ವಿತಿಗೆ ಮೊದಲ ತುಳು ಸಿನಿಮಾವಾಗಿದ್ದು, ಅವರ ಮಾತೃಭಾಷೆ ತುಳು ಆಗಿದ್ದು ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ
ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ.
ನಟ,ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ ಕಾನ್ಸೆಪ್ಟ್ ಇದ್ದದ್ದೇ ರಿಯಲ್ ಲೈಫ್ ನಲ್ಲಿ ಲವ್ ಗೆ ಉದಾಹರಣೆಯಾಗಿದ್ದವರಿಂದ ಹಾಡನ್ನು ರಿಲೀಸ್ ಮಾಡಬೇಕು ಅನ್ನೋ ಆಸೆ ಇತ್ತು. ಅದು ನೆರವೇರಿದೆ. ಹಾಡು ಕೂಡ ಎಲ್ಲರಿಗೂ ತುಂಬಾ ಇಷ್ಟವಾಗಿದೆ ಎಂದರು.


