The first song of the film 'Moda Kavida Vatavarana' is released: curiosity increases

‘ಮೋಡ ಕವಿದ ವಾತಾವರಣ’ ಚಿತ್ರದ ಮೊದಲ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ - CineNewsKannada.com

‘ಮೋಡ ಕವಿದ ವಾತಾವರಣ’ ಚಿತ್ರದ ಮೊದಲ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ

ನಿರ್ದೇಶಕ ಸಿಂಪಲ್ ಸುನಿ ಪ್ರಯೋಗ ಮಾಡುವುದರಲ್ಲಿ ಎತ್ತಿದ ಕೈ, ಹೊಸ ಹೊಸ ಕಲಾವಿದರನ್ನು ಪರಿಚಯಿಸಿದ ಹೆಗ್ಗಳಿಕೆಯೂ ಸುನಿ ಅವರಿಗೆ ಸಲ್ಲಲಿದೆ, ಇದೀಗ ತಮ್ಮದೇ ಗರಡಿಯ ಹುಡುಗ ಶೀಲಮ್ ಅವರನ್ನು ನಾಯಕನನ್ನಾಗಿ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ ಅದುವೇ “ಮೋಡ ಕವಿದ ವಾತಾವರಣ” ಚಿತ್ರದ ಮೂಲಕ

ಸುನಿ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶೀಲಮ್ ಈಗ ನಾಯಕನಾಗಿದ್ದಾರೆ, ಈ ಹಿಂದೆ ಕೆಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅನುಭವನ್ನು ಹೊಂದಿದ್ದಾರೆ. ಚಿತ್ರೀಕರಣ ಪೂರ್ಣಗೊಂಡು ತೆರೆಗೆ ಬರಲು ಸಿದ್ದವಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.

ಈ ವೇಳೆ ಮಾತಿಗಿಳಿದ ನಿರ್ದೇಶನ ಸಿಂಪಲ್ ಸುನಿ, ಮುಂದಿನ ವರ್ಷ ಜನವರಿ 9ರಂದು ಚಿತ್ರ ತೆರೆಗೆ ತರುವ ಉದ್ದೇಶ ಹೊಂದಲಾಗಿದೆ. ಚಿತ್ರದಲ್ಲಿ ರಿವರ್ಸ್ ಸ್ಕ್ರೀನ್ ಪ್ಲೇ ಇದೆ. ಚಿತ್ರದ ಪ್ರಮೋಷನಲ್ ಸಾಂಗ್. ಈ ಸಾಂಗ್ ಇಷ್ಟು ಚೆನ್ನಾಗಿ ಬರಲು ಕಾರಣ ಆರ್ಟಿಸ್ಟ್, ಟೆಕ್ನಿಷಿಯನ್ಸ್ ಹಾಗೂ ಪೆÇ್ರಡ್ಯೂಸರ್. ಶೀಲಮ್ ಈ ಚಿತ್ರಕ್ಕಾಗಿ ಸಾಕಷ್ಟು ವರ್ಕೌಟ್ ಮಾಡಿದ್ದಾರೆ. ತುಂಬಾ ಡೆಡಿಕೇಷನ್ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಮೋಕ್ಷಾ ಬೇರೆ ರೀತಿ ಕಾಣಿಸುತ್ತಾರೆ. ಸಾತ್ವಿಕಾ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು

ನಟ ಶೀಲಮ್ ಮಾತನಾಡಿ, ಮೋಡ ಕವಿದ ವಾತಾವರಣ ಸಿನಿಮಾದ ಪ್ರತಿ ಮೂಮೆಂಟ್ ಕನಸು ನನಸಾದ ಕ್ಷಣ. ಒಂದೊಳ್ಳೆ ಟೆಕ್ನಿಕಲ್ ಟೀಂ ಜೊತೆ ಕೆಲಸ ಮಾಡಿರುವುದಕ್ಕೆ ಪುಣ್ಯ. ಒಂದು ತಿಂಗಳು ಈ ಹಾಡಿಗಾಗಿ ಪ್ರಾಕ್ಟೀಸ್ ಮಾಡಿದ್ದೇವೆ. ನಾನು ಅದ್ಭುತ ಡ್ಯಾನ್ಸರ್ ಅಲ್ಲ. ಇನ್ನೂ ಡ್ಯಾನ್ಸ್ ಕಲಿಯುತ್ತಿದ್ದೇನೆ. ಡ್ಯಾನ್ಸ್, ಪಾರ್ಫಾರ್ಮೆನ್ಸ್ ಮಾಡುವುದು ಕಷ್ಟವಾಗಿತ್ತು ಎಂದರು.

ಸೈಂಟಿಫಿಕ್ ಫಿಕ್ಷನ್ ಲವ್ ಸ್ಟೋರಿ ಹೊಂದಿರುವ ಮೋಡ ಕವಿದ ವಾತಾವರಣ ಚಿತ್ರದಲ್ಲಿ ಶೀಲಮ್ ಗೆ ಜೋಡಿಯಾಗಿ ಸಾತ್ವಿಕಾ ಹಾಗೂ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ನನ್ನೆದೆಯ ಹಾಡೊಂದನು ಎಂಬ ಮೆಲೋಡಿ ಗೀತೆ ಸರೆಗಮ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ನಾಯಕ ಶೀಲಮ್ ಹಾಗೂ ನಾಯಕಿಯರಾದ ಸಾತ್ವಿಕಾ ಹಾಗೂ ಮೋಕ್ಷಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸುನಿ ಸಾಹಿತ್ಯ ಬರೆದ ಗೀತೆಗೆ ಸಂಚಿತ್ ಹೆಗ್ಡೆ ಹಾಗೂ ಜೂಡಾ ಸ್ಯಾಂಡಿ ಧ್ವನಿಯಾಗಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚು ಮಾಡಿದೆ

ಮೈಸೂರು ರಮೇಶ್, ಶ್ರೀರಂಗರಾಜು, ಲೋಕೇಶ್ ಬೆಳವಾಡಿ ಹಾಗೂ ಗೋವಾ ರಮೇಶ್ ನಿರ್ಮಾಣ ಮಾಡಿದ್ದಾರೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ಹಿಡಿದಿದ್ದು, ಆದಿತ್ಯ ಕಶ್ಯಪ್ ಸಂಕಲನ ಸಿನಿಮಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin