ಪ್ರೇಮಕಥೆ ಜೊತೆಗೆ ಹುಲಿವೇಷದ ಕಥೆಯ “ಮಾರ್ನಮಿ’ ಮುಂದಿನ ತಿಂಗಳು ತೆರೆಗೆ
ಕರಾವಳಿ ಭಾಗದ ಹುಲಿವೇಷ ಹಿನ್ನೆಲೆಯ ಕಥೆ ಹೊಂದಿರುವ “ ಮಾರ್ನಮಿ” ಚಿತ್ರ ನವಂಬರ್ 21 ರಂದು ರಾಜ್ಯಾದ್ಯಂತ ತೆರಗೆ ಬರಲು ಸಜ್ಜಾಗಿದೆ.

ಕನ್ನಡ ಕಿರುತೆರೆಯಲ್ಲಿ ‘ಅನುರೂಪ’, ‘ಗಿಣಿರಾಮ’, ‘ನಿನಗಾಗಿ’ ಮುಂತಾದ ಧಾರಾವಾಹಿಗಳ ಮೂಲಕ ಜನಪ್ರಿಯರಾಗಿರುವ ನಟ ರಿತ್ವಿಕ್ ಮಠದ್ ಮಾರ್ನಮಿ ನಾಯಕನಾಗಿ ನಟಿಸಿದ್ದು, ಚೈತ್ರಾ ಜೆ. ಆಚಾರ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ
1990ರ ದಶಕ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸ್ಟೋರಿ. ಚಿತ್ರದ ಮೂಲಕ ನಿರ್ದೇಶಕ ರಿಷಿತ್ ಶೆಟ್ಟಿ ಹುಲಿ ವೇಷ ಸಂಸ್ಕೃತಿಯನ್ನು ಇಡೀ ಪ್ರಪಂಚಕ್ಕೆ ತೋರಿಸಲು ಹೊರಟಿದ್ದಾರೆ
‘ಮಾರ್ನಮಿ’ ಸಿನಿಮಾಗೆ ರಿಶಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಅವರ ಚೊಚ್ಚಲ ಸಿನಿಮಾ. ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅವರದ್ದೇ. ಚಿತ್ರದ ಕಥೆ ಸುಧಿ ಆರ್ಯನ್ ಬರೆದಿದ್ದಾರೆ, ಈ ಸಿನಿಮಾದಲ್ಲಿ ರಿತ್ವಿಕ್ ಮತ್ತು ಚೈತ್ರಾ ಜೊತೆಗೆ ಸುಮನ್ ತಲ್ವಾರ್, ಸೋನು ಗೌಡ, ಪ್ರಕಾಶ್ ತುಮಿನಾಡು, ಜ್ಯೋತೀಶ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಮೈಮ್ ರಾಮದಾಸ್, ಚೈತ್ರಾ ಶೆಟ್ಟಿ ಮುಂತಾದ ಕಲಾವಿದರು ನಟಿಸಿದ್ದಾರೆ.

ಚರಣ್ ರಾಜ್ ಸಂಗೀತ ನಿರ್ದೇಶನ, ಶಿವಸೇನ ಕ್ಯಾಮೆರಾ ಕೈ ಚಳಕ, ಪ್ರತೀಕ್ ಶೆಟ್ಟಿ ಸಂಕಲನ,ವರದರಾಜ್ ಕಾಮತ್ ಕಲಾ ನಿರ್ದೇಶನ ಮಾಡಿದ್ದಾರೆ. ವರ್ಷಾ ಆಚಾರ್ಯ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಗುಣಾಧ್ಯ ಪೆÇ್ರಡಕ್ಷನ್ಸ್' ಮೂಲಕ ಶಿಲ್ಪಾ ನಿಶಾಂತ್ ಹಾಗೂ ನಿಶಾಂತ್ ಅವರುಮಾರ್ನಮಿ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

