ಹೊಸಬರ “ಧೈರ್ಯಂ ಧರ್ಮಂ ದೇಶಂ” ಬಿಡುಗಡೆಗೆ ಸಿದ್ದತೆ
ಹೊಸಬರು ಸೇರಿಕೊಂಡು ಸಿದ್ದಪಡಿಸಿರುವ “ಧೈರ್ಯಂ ಧರ್ಮಂ ದೇಶಂ- ಡಿಡಿಡಿ” ಚಿತ್ರದ ಟ್ರೇಲರ್ ಮತ್ತು ಹಾಡು ಬಿಡುಗಡೆಯಾಗಿದ್ದು ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ಸಜ್ಜಾಗಿದೆ

ಹೊಸೂರಿನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿರುವ ಕೆ.ಬಿ.ಮಂಜುನಾಥ್ ಸಿನಿಮಾಕ್ಕೆ ಕಥೆ,ನಿರ್ದೇಶನ ಅಲ್ಲದೆ ಕೆಬಿಎಂ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಮಹೇಶ್ ಹಾಗೂ ಚಂದ್ರಣ್ಣ ಸಹ ನಿರ್ಮಾಪಕರು.
ನಿರ್ದೇಶಕ ಮಂಜುನಾತ್ ಮಾತನಾಡಿ ಇಲ್ಲಿಯವರೆಗೆ ಎರಡು ಕಿರುಚಿತ್ರಗಳನ್ನು ಮಾಡಿದ್ದೇನೆ.ನನಗೆ ಮೊದಲ ಹಿರಿತೆರೆಯ ಅನುಭವ. ಸಾಮಾನ್ಯ ಪ್ರಜೆಯಾದವನು ಧೈರ್ಯ ಮಾಡಬೇಕು. ಅಧಿಕಾರಿಗಳು ಧರ್ಮವನ್ನು ಕಾಪಾಡಬೇಕು. ಯೋಧನಾದವನು ದೇಶವನ್ನು ಕಾಪಾಡಬೇಕು. ಇವುಗಳು ಸಮಾಜದ ಮೂರು ಅಂಗಗಳಾಗಿದೆ. ಅದಕ್ಕಾಗಿ ‘ಡಿಡಿಸ’ ಎಂದು ಶೀರ್ಷಿಕೆ ಇಡಲಾಗಿದೆ ಎಂದು ಹೇಳಿದರು
ಸಮಾಜವನ್ನು ಹೇಗೆ ನೋಡಿಕೊಳ್ಳಬೇಕು. ಅವಘಡಗಳು ಆದಾಗ ಅದನ್ನು ಯಾವ ರೀತಿ ಎದುರಿಸಬೇಕು ಎಂಬುದನ್ನು ಹೇಳಲಾಗಿದೆ. ಮಾನವಿಯತೆ, ಪ್ರೀತಿ, ಸಂಬಂಧಗಳ ಬೆಲೆ ಇನ್ನು ಮುಂತಾದವನ್ನು ಐದು ಹಾಡುಗಳಲ್ಲಿ ತೋರಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು

ನಾಯಕ ಅರುಣ್ ವೆಂಕಟರಾಜು ನಾಯಕನಾಗಿ ಎರಡನೇ ಅವಕಾಶ. ಶಿವಮೊಗ್ಗದ ಗಗನಮಲ್ನಾಡ್ ನಾಯಕಿ. ಇನ್ಸ್‍ಪೆಕ್ಟರ್ ಆಗಿ ರಘುಶಿವಮೊಗ್ಗ, ಉಳಿದಂತೆ ಚಾರ್ಲ್ಸ್ ಟೋನಿ, ಸುರೇಶ್‍ಬಾಬು, ಡಿವಿ.ನಾಗರಾಜು, ಸುರೇಶ್‍ಬಾಬು, ರೋಹಿಣಿ ಮುಂತಾದವರು ಅಭಿನಯಿಸಿದ್ದಾರೆ.
ಬಹದ್ದೂರ್ ಚೇತನ್‍ಕುಮಾರ್, ಗಜೇಂದ್ರ, ಸಂಜಯ್ ಮತ್ತು ಲಕ್ಷಿದಿನೇಶ್ ಸಾಹಿತ್ಯದ ಐದು ಗೀತೆಗಳಿಗೆ ಸೂರಜ್‍ಜೋಯಿಸ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಎಸ್.ಕೆ.ಮಸ್ತಾನ್ ಷರೀಫ್, ಸಂಕಲನ ಧನುಷ್.ಎಲ್.ಬೇಡಿ ಅವರದಾಗಿದೆ. ಬೆಂಗಳೂರು, ಮಂಗಳೂರು, ಕೊಳ್ಳೆಗಾಲ ಗಡಿಭಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ.
ವೆಂಕಟ್‍ಗೌಡ ಸಾರಥ್ಯದಲ್ಲಿ ನವೆಂಬರ್ ತಿಂಗಳಲ್ಲಿ ಸುಮಾರು 40 ಕೇಂದ್ರಗಳಲ್ಲಿ ಸಿನಿಮಾ ತೆರೆ ಕಾಣಲಿದೆ.

