ನಟ ವಿರಾಟ್ ಲವ್ವರ್ ಬಾಯ್ ನಿಂದ ಮಾಸ್ ಲುಕ್ನಲ್ಲಿ “ಹಕ್ರ್ಯುಲೆಸ್” ಅವತಾರ
“ಕಿಸ್” ಚಿತ್ರದ ಮೂಲಕ ನಾಯಕನಾಗಿ ಎಂಟ್ರಿಕೊಟ್ಟ ಯುವ ನಟ ವಿರಾಟ್ , ಎರಡನೇ ಚಿತ್ರದಲ್ಲಿ “ರಾಯಲ್” ಆಗಿ ಮಿಂಚಿದ್ದು ಈಗ “ಹರ್ಕ್ಯುಲಸ್” ಆಗಿ ಮಾಸ್ ಎಂಟ್ರಿ ಕೊಡುತ್ತಿದ್ದಾರೆ. ಚಾಟ್ ಜಿಪಿಟಿ ಜೊತೆ ಸಹಯೋಗ ಪಡೆದ ಕನ್ನಡದ ಮೊದಲ ಕನ್ನಡ ಚಿತ್ರ ಎನ್ನುವ ಹೆಗ್ಗಳಿಕೆಗೆ “ಹರ್ಕ್ಯುಲಸ್” ಪಾತ್ರವಾಗಿದ್ದು ಲವ್ವರ್ ಬಾಯ್ ಇಮೇಜ್ನಿಂದ ಮಾಸ್ ಇಮೇಜ್ನಲ್ಲಿ ನಟ ವಿರಾಟ್ ಕಾಣಿಸಿಕೊಂಡಿದ್ದಾರೆ.

“ಹರ್ಕ್ಯುಲಸ್” ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ನಾಯಕ ವಿರಾಟ್ ಖದರ್ ಲುಕ್ ಇರುವ ಸುಮಾರು 200 ಅಡಿಯ ಬೃಹತ್ ಟೈಟಲ್ ಪೋಸ್ಟರ್ ಗಮನ ಸೆಳೆದಿದೆ.ಯುವ ಪ್ರತಿಭೆ ಭಗೀರಥ ಕಥೆ , ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಹಾನ ಫಿಲಂಸ್ ಚಿತ್ರ ನಿರ್ಮಾಣ ಮಾಡಿತ್ತಿದೆ
ನಿರ್ದೇಶಕ ಭಗೀರಥ ಮಾತನಾಡಿ ‘ಹರ್ಕ್ಯುಲಸ್’ ಎಂದರೆ ಸೈಕಲ್ ಅಲ್ಲ, ಒಬ್ಬ ವಾರಿಯರ್ ಹೆಸರು. 12 ವರ್ಷಗಳ ಜರ್ನಿ , ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ ಹಲವು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ನಿರ್ದೇಶಕ ಶ್ರೀನಿವಾಸರಾಜು ಬಳಿ ಬಹಳಷ್ಟು ಕಲ್ತಿದ್ದೇನೆ. ರೈಟಿಂಗ್ ಹವ್ಯಾಸ. ಹಾಗಾಗಿ ವೆಬ್ ಸೀರೀಸ್ ಗಾಗಿ ಅಮೀಬಾ ಎಂಬ ಕಥೆ ಬರೆದಿದ್ದೆ. ಸಿನಿಮಾನೇ ಜೀವನ , ಹಾಗಾಗಿಮೊದಲ ಪ್ರಯತ್ನವಾಗಿ ಹರ್ಕುಲಸ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು
ಸೋಲೇ ಕಾಣದ ವಾರಿಯರ್ ಒಬ್ಬನ ಹೆಸರು. ಚಿತ್ರದಲ್ಲಿ ನಾಯಕನ ಕ್ಯಾರೆಕ್ಟರ್ ಅದೇ ರೀತಿ ಇರುತ್ತದೆ. ಇದೊಂದು ಆಕ್ಷನ್ ಲವ್ ಕಂಟೆಂಟ್ ಇರುವ ಸಿನಿಮಾ. ಚಿತ್ರದ ಮೂಲಕ ವಿರಾಟ್ ಅವರನ್ನ ಬೇರೆಯದೇ ರೀತಿಯಲ್ಲಿ ತೋರಿಸಬೇಕೆಂದು ಪ್ರಯತ್ನಿಸುತ್ತಿದ್ದೇವೆ. ಚಿತ್ರಕ್ಕೆ ಕರುಣಾಕರ್ ಛಾಯಾಗ್ರಹಣ,ಹರಿಕೃಷ್ಣ ಪುತ್ರ ಆದಿ ಹರಿ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ದೀಪು. ಎಸ್. ಕುಮಾರ್ ಸಂಕಲನವಿದೆ,. ನವೆಂಬರ್ ನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಿ ಮಾರ್ಚ್ ಏಪ್ರಿಲ್ ವೇಳೆಗೆ ಸಿನಿಮಾ ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು

ನಟ ವಿರಾಟ್ ಮಾತನಾಡಿ ಮೂರನೇ ಚಿತ್ರ, ಹರ್ಕ್ಯುಲಸ್ ಇನ್ನೊಬ್ಬರಿಗೋಸ್ಕರ ಯುದ್ದ ಮಾಡುತ್ತಾನೆ. ಆತನಿಗೆ ಯಾವತ್ತೂ ಸೋಲಿಲ್ಲ. ಆದರೆ ಆತನ ಹೋರಾಟ ಯಾರಿಗೋಸ್ಕರ ಅನ್ನೋದೆ ಕಥೆ. ಚಿತ್ರದಲ್ಲಿ ನನಗೆ ಶೇಡ್ಗಳುವೆ ಎರಡು ಚಿತ್ರಗಳಲ್ಲಿ ಲವ್ವರ್ ಬಾಯ್ ಆಗಿದೆ , ಚಿತ್ರದಲ್ಲಿ ಆಕ್ಷನ್ ಕಮ್ ಲವ್ವರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಕ್ಯಾರೆಕ್ಟರ್ ಗಾಗಿ ಮಾಡಿಕೊಂಡಿರೋ ಪ್ರಿಪರೇಶನ್ ಕುರಿತು ವಿವರಿಸುತ್ತ ಹರ್ಕ್ಯುಲಸ್ ಗಾಗಿ ಗೆಟಪ್ ಸೇರಿದಂತೆ ಬಹಳಷ್ಟು ಬದಲಾವಣೆ ಮಾಡಿಕೊಂಡಿದ್ದೇನೆ ಎಂದರು ಹೇಳಿದರು
ಸಂಗೀತ ನಿರ್ದೇಶಕ ಆದಿ ಮಾತನಾಡಿ ಸ್ವತಂತ್ರವಾಗಿ ಸಂಗೀತ ನೀಡುತ್ತಿರುವ ಮೊದಲ ಚಿತ್ರವಿದು. ಕಳೆದ 2 ವಾರದಿಂದ ಈ ಪ್ರೊಮೊ ಗೆ ಬಿಜಿಎಂ ಮಾಡಿದ್ದೇನೆ. ಚಿತ್ರಕ್ಕಾಗಿ ವಿಶೇಷ ರೀತಿಯ ಸಾಂಗ್ ಕಂಪೋಸ್ ಮೂಲಕ ಹಾಡುಗಳು ಹೊರ ತರಲು ಶ್ರಮ ಪಡುತ್ತಿದ್ದೇವೆ ಎಂದರು.
ಗುರುರಾಜ ಎಂ.ದೇಸಾಯಿ ಕ್ರಿಯೇಟಿವ್ ಹೆಡ್ ಆಗಿದ್ದಾರೆ.

