ನವಂಬರ್ 14ಕ್ಕೆ ರಾಜ್ಯಾದ್ಯಂತ “ಲವ್ ಒಟಿಪಿ” ಚಿತ್ರ ತೆರೆಗೆ
“ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು” ಎಂಬ ಮಾತಿದೆ, ಈಗ ಈ ಮಾತು ಸಿನಿಮಾ ಮಂದಿಗೆ ಕೊಂಚ ಬದಲಾದಂತೆ ಕಾಣ್ತಿದ್ದು,ಸಿನಿಮಾ ಮಾಡಿ ನೋಡಿ. ಚಿತ್ರ ಬಿಡುಗಡೆ ಮಾಡಿ ಮಾಡಿ ನೋಡಿ ಅಂತಿದ್ದಾರೆ…
ಈ ಸಾಲಿಗೆ ನಟ ಅನೀಶ್ ತೇಜೇಶ್ಚರ್ ಅಭಿನಯದ “ಲವ್ ಓಟಿಪಿ” ಸಿನಿಮಾ ತಂಡ ಸೇರಿದೆ. ಈಗಾಗಲೇ ಟೀಸರ್..ಸಾಂಗ್ ಗಳ ಮೂಲಕ ಮನೆ ಮಾತಾಗಿರುವ ಲವ್ ಓಟಿಪಿ ಚಿತ್ರವಿಭಿನ್ನ ಪ್ರಚಾರದ ಮೂಲಕ ಸಿನಿ ಪ್ರೇಮಿಗಳ ಸೆಳೆಯುವ ಪ್ರಯತ್ನ ಮಾಡಿದೆ, ಚಿತ್ರ ಇದೇ ತಿಂಗಳ 14 ಕ್ಕೆ ತೆರೆಗೆ ಬರಲು ಸಜ್ಜಾಗಿದೆ
ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸುವ ಪತ್ರಕರ್ತರ ಜೊತೆ ಸ್ನೇಹಪೂರ್ವಕವಾಗಿ ಕ್ರಿಕೆಟ್ ಟೂರ್ನಿ ಆಡುವ ಮೂಲಕ ಗಮನ ಸೆಳೆದು ಈಗೂ ಸಿನಿಮಾ ಪ್ರಚಾರ ಮಾಡಬಹುದು ಎಂದು ತೋರಿಸಿದೆ. ಲವ್ ಒಟಿಪಿ ಸಿನಿಮಾ ತಂಡ ಡಿಜಿಟಲ್ ಮಾಧ್ಯಮದವರು,ಸಿನಿಮಾ ಪತ್ರಕರ್ತರು , ಯೂಟ್ಯೂಬರ್ ಜೊತೆ ಕ್ರಿಕೆಟ್ ಆಡುವ ಮೂಲಕ ಸಿನಿಮಾ ಪ್ರಚಾರ ಮಾಡಿದೆ
ಅನೀಸ್ ನಾಯಕತ್ವದ ಟೀಮ್ ಲವ್ ಓಟಿಪಿ.ನ್ಯೂಸ್ 18 ಕನ್ನಡದ ವರದಿಗಾರ ಸತೀಶ್ ಕನಕಪುರ ನಾಯಕತ್ವದ ಸ್ಟಾರ್ ರಿಪೋರ್ಟರ್ಸ್ ಪಿಅರ್ ಓ, ಪ್ರವೀಣ್ ಏಕಾಂತ್ ನೇತೃತ್ವದ ಡಿಜಿಟಲ್ ಒಟಿಪಿ, ಪಿಅರ್ ಓ ಹರೀಶ್ ಅರಸು ನಾಯಕತ್ವದ ಲವ್ ಹಂಟರ್ಸ್, ಹಾಗೂ ಮತ್ತೋರ್ವ ಸಿನಿಮಾ ಪತ್ರಕರ್ತ ಶ್ರೀಧರ್ ಶಿವಮೊಗ್ಗ ನೇತೃತ್ವದ ಲವ್ ಸ್ಕ್ವಾಡ್ ತಂಡಗಳು ಲವ್ ಒಟಿಪಿ ಕಪ್ ಗಾಗಿ ಹಣಾಹಣಿ ಮಡೆಸಿದ್ದವು. ಲವ್‍ಹಂಟರ್ಸ್ ತಂಡ ಸ್ಟಾರ್ ರಿಪೋರ್ಟರ್ಸ್ ಬಳಗಕ್ಕೆ 2 ರನ್‍ಗಳ ರೋಚಕ ಸೋಲುಣಿಸಿ ಲವ್ ಒಟಿಪಿ ಕಪ್ ಅನ್ನು ಮುಡಿಗೇರಿಸಿ ಕೊಂಡಿದೆ.
ಲವ್ ಒಟಿಪಿ ಚಿತ್ರದಲ್ಲಿ ಅನೀಶ್ ತೇಜೇಶ್ವರ್ ನಾಯಕನಾಗಿ ನಟಿಸುವ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ ವಿಜಯ್ ಎಂ ರೆಡ್ಡಿ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಅನೀಶ್ ತೇಜೇಶ್ವರ್, ಜಾಹ್ನವಿ ಕಲಕೇರಿ, ಆರೋಹಿ ನಾರಾಯಣ್, ರಾಜೀವ್ ಕನಕಾಲ, ಪ್ರಮೋದಿನಿ ಮುಂತಾದವರು ನಟಿಸಿದ್ದಾರೆ,

