ಸಸ್ಪೆನ್ಸ್, ಥ್ರಿಲ್ಲರ್ ಕಥೆಯೊಂದಿಗೆ “ಪಿಸ್ತೂಲ್ : ಹಿಡಿದ ಪ್ರಬೀಕ್ ಮೊಗವೀರ್
ಕನ್ನಡ ಚಿತ್ರರಂಗದಲ್ಲಿ ನಾಯಕ, ನಿರ್ಮಾಪಕ ಹಾಗು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಪ್ರಬೀಕ್ ಮೊಗವೀರ್, ಈ ಬಾರಿ ಸಸ್ಪೆನ್ಸ್, ಥ್ರಿಲ್ಲರ್ ಕಥೆಯನ್ನು ಪ್ರೇಕ್ಷಕರ ಮುಂದೆ ಇಡಲು ಸಜ್ಜಾಗಿದ್ದಾರೆ. ಅದುವೇ “ಪಿಸ್ತೂಲ್” ಚಿತ್ರದ ಮೂಲಕ
ಪ್ರಬೀಕ್ ಮೊಗವೀರ್ ನಿರ್ಮಿಸುತ್ತಿರುವ ಚಿತ್ರಕ್ಕೆ ವೇದ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ‘ಪಿಸ್ತೂಲ್’ ಸಿನಿಮಾದ ಸ್ಕ್ರಿಪ್ಟ್ ಮತ್ತು ಪ್ರೀ- ಪ್ರೊಡಕ್ಷನ್ಸ್ ಕೆಲಸ ಪೂರ್ಣಗೊಂಡಿದೆ. ಚಿತ್ರದ ಶೀರ್ಷಿಕೆಯನ್ನು ‘ನಟ ವಸಿಷ್ಠ ಎನ್. ಸಿಂಹ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ
ನಟ ವಸಿಷ್ಠ ಎನ್. ಸಿಂಹ ಮಾತನಾಡಿ ಚಿತ್ರದ ಹೆಸರು ಮತ್ತು ಪೋಸ್ಟರ್ ಎರಡೂ ಸಾಕಷ್ಟು ಕುತೂಹಲ ಮೂಡಿಸುವಂತಿದೆ. ಸಿನಿಮಾದಲ್ಲಿ ತಂಡ ಹೊಸಥರದ ವಿಷಯವನ್ನು ಪ್ರೇಕ್ಷಕರ ಮುಂದೆ ಹೇಳಲು ಹೊರಟಿದ್ದಾರೆ. ಕನ್ನಡದಲ್ಲಿ ಇಂಥ ಹೊಸ ಕಥಾಹಂದರದ ಸಿನಿಮಾಗಳು ನಿರಂತರವಾಗಿ ಬರುತ್ತಿರಬೇಕು ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹೇಳಿದ್ದಾರೆ
ಪ್ರಬೀಕ್ ಮೊಗವೀರ್ ಚಿತ್ರ ನಿರ್ಮಿಸುತ್ತಿರುವುದರ ಜೊತೆಗೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಹೀರೋ – ಹೀರೋಯಿನ್ ಯಾವುದೇ ಪಾತ್ರಗಳಿಲ್ಲ.ಕಥೆಯೇ ಪ್ರಧಾನ ಎನ್ನುವುದು ಚಿತ್ರತಂಡ ಮಾತು. ‘ಪಿಸ್ತೂಲ್’ನಲ್ಲಿ ಆರು ಬುಲೆಟ್‍ಗಳಿರುವಂತೆ, ‘ಪಿಸ್ತೂಲ್’ ಕಥೆಯಲ್ಲಿ ಆರು ಪಾತ್ರಗಳಿರುತ್ತವೆ.
ತಯಾರಾಗಿದ್ದಾರೆ.
‘ಪಿಸ್ತೂಲ್’ ಚಿತ್ರದ ಬಹುತೇಕ ಸ್ಕ್ರಿಪ್ಟ್ ಮತ್ತು ಪ್ರೀ- ಪ್ರೊಡಕ್ಷನ್ಸ್ ಕೆಲಸಗಳು ಪೂರ್ಣಗೊಂಡಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಇದೇ ವರ್ಷಾಂತ್ಯದೊಳಗೆ ‘ಪಿಸ್ತೂಲ್’ ಸಿನಿಮಾ ಸೆಟ್ಟೇರಲಿದ್ದು, ಮುಂದಿನ ವರ್ಷದ ಮಧ್ಯ ಭಾಗದಲ್ಲಿ ‘ಪಿಸ್ತೂಲ್’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

