After the success of the film “Max”, “Mark” will hit the screens on December 25th.

“ಮ್ಯಾಕ್ಸ್” ಚಿತ್ರದ ಯಶಸ್ಸಿನ ನಂತರ ಡಿಸೆಂಬರ್ 25ಕ್ಕೆ “ಮಾರ್ಕ್” ರಂಗ ಪ್ರವೇಶ - CineNewsKannada.com

“ಮ್ಯಾಕ್ಸ್” ಚಿತ್ರದ ಯಶಸ್ಸಿನ ನಂತರ ಡಿಸೆಂಬರ್ 25ಕ್ಕೆ “ಮಾರ್ಕ್” ರಂಗ ಪ್ರವೇಶ

‘ಮ್ಯಾಕ್ಸ್’ ಚಿತ್ರದಲ್ಲಿ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್ ಮೋಡಿ ಮಾಡಿತ್ತು. ಈಗ ಮತ್ತೆ `ಮಾರ್ಕ್’ ಸಿನಿಮಾದ ಮೂಲಕ ರಂಜಿಸಲು ಬರುತ್ತಿದ್ದಾರೆ. ಈ ಬಾರಿ ಈ ಜೋಡಿ ಮ್ಯಾಕ್ಸಿಮಮ್ ಮಾರ್ಕ್ ತೆಗೆಯಲು ಮುಂದಾಗಿದೆ,

ಮ್ಯಾಕ್ಸ್’ ರೀತಿಯೇ ಈ ಬಾರಿ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದುಮಾರ್ಕ್’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಗೆ ಚಿತ್ರ ಸಿದ್ದತೆ ನಡೆಸಿದೆ. ಚಿತ್ರೀಕರಣ ಪೂರ್ಣಗೊಳಿಸಿದ್ದು ತಂಡದೊಂದಿಗೆ ಕಿಚ್ಚ ಫೋಟೊಗೆ ಫೋಸ್ ನೀಡಿದ್ದಾರೆ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ನಟಿಸಿರುವ ‘ಮಾರ್ಕ್’ ಸಿನಿಮಾದ ಟೀಸರ್ ಈಗಾಗಲೇ ದಾಖಲೆ ಬರೆದಿದೆ. ಕಿಚ್ಚನ ಆಕ್ಷನ್ ಖದರ್ ನೋಡಿ ಥ್ರಿಲ್ಲರ್ ಆಗಿರುವ ಸುದೀಪಿಯನ್ಸ್ ಗೆ ಚಿತ್ರತಂಡ ಈಗ ಮತ್ತೊಂದು ಕ್ರೇಜಿ ಅಪ್ ಡೇಟ್ ಕೊಟ್ಟಿದೆ.

ಮಾರ್ಕ್ ಸಿನಿಮಾಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಕೊನೆ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ತೊಡಗಿಸಿಕೊಂಡಿದೆ.

‘ಮಾರ್ಕ್’ ಸಿನಿಮಾಗೆ ಶೇಖರ್ ಚಂದ್ರ ಛಾಯಾಗ್ರಹಣ,ಅಜನೀಶ್ ಬಿ. ಲೋಕನಾಥ್ ಸಂಗೀತವಿಎ ಈ ಸಿನಿಮಾದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರವನ್ನು ಸುದೀಪ್ ಮಾಡಿದ್ದಾರೆ.ಸತ್ಯಜ್ಯೋತಿ ಫಿಲ್ಮ್ಸ್' ಹಾಗೂಕಿಚ್ಚ ಕ್ರಿಯೇಷನ್ಸ್’ ಬ್ಯಾನರ್‍ಗಳು ಜತೆಯಾಗಿ `ಮಾರ್ಕ್’ ಚಿತ್ರ ನಿರ್ಮಿಸಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin