ನಾಗಶೇಖರ್ ನಟನೆಯ ‘ವಾರ್ತೆಗಳು ಓದುತ್ತಿರುವವರು ಶಂಕರ್ ನಾಗ್ ‘ ಚಿತ್ರ ಆರಂಭ - CineNewsKannada.com

ನಾಗಶೇಖರ್ ನಟನೆಯ ‘ವಾರ್ತೆಗಳು ಓದುತ್ತಿರುವವರು ಶಂಕರ್ ನಾಗ್ ‘ ಚಿತ್ರ ಆರಂಭ

ಮೈನಾ, ಮಾಸ್ತಿ ಗುಡಿ, ಸಂಜು ವೆಡ್ಸ್ ಗೀತಾದಂಥ ಚಿತ್ರಗಳ ನಿರ್ದೇಶಕ ನಾಗಶೇಖರ್ ಇದೀಗ ನಾಯಕನಾಗಿ ನಟಿಸುತ್ತಿದ್ದಾರೆ, ಅದುವೇ “ವಾರ್ತೆಗಳು ಓದುತ್ತಿರುವವರು ಶಂಕರ್‍ನಾಗ್” ಚಿತ್ರದ ಮೂಲಕ.

ನಾಗಶೇಖರ್ ಬಹಳ ದಿನಗಳ ನಂತರ ತೆರೆಮೇಲೆ ಬರುತ್ತಿದ್ದಾರೆ, ಹಾಸ್ಯ ಕಲಾವಿದನಾಗೇ ಚಿತ್ರರಂಗಕ್ಕೆ ಬಂದವರು.ಶೀರ್ಷಿಕೆಯ ಮೂಲಕವೇ ಹೊಸ ಕುತೂಹಲ ಮೂಡಿಸಿರುವ ಚಿತ್ರಕ್ಕೆ ಜಿಯಾ ಉಲ್ಲಾ ಖಾನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನವೆಂಬರ್ 11ರಂದು ನಾಗಶೇಖರ್ ಹುಟ್ಟುಹಬ್ಬ, ಅದೇ ದಿನ ವಾರ್ತೆಗಳು ಓದುತ್ತಿರುವವರು ಶಂಕರ್‍ನಾಗ್ ಚಿತ್ರದ ಮುಹೂರ್ತ ನೆರವೇರಿದೆ,

ಆರ್.ಆರ್. ನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಸರಳವಾಗಿ ನಡೆz ಕಾರ್ಯಕ್ರಮದಲ್ಲಿ ನಾಗಶೇಖರ್ ಅವರ ತಾಯಿ ಚಿತ್ರದ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು,

ವಿ.ಎನ್. ಕಿರಣ್(ವಾಸಣ್ಣ) ಅರ್ಪಿಸುತ್ತಿರುವ ಮಾಡುತ್ತಿರುವ ಚಿತ್ರಕ್ಕೆ ನಾಗರ, ಎ ರಾಮ್ ಚಿರು ಪ್ರೊಡಕ್ಷನ್ಸ್ ಹೌಸ್ ಮೂಲಕ ರಾಮ್ ಚಿರು ಬಂಡವಾಳ ಹೂಡುತ್ತಿದ್ದಾರೆ, ನವೆಂಬರ್ 15ರಿಂದ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

ನಾಯಕನಾಗಿ ನಟಿಸುವುದರೊಂದಿಗೆ ನಾಗಶೇಖರ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದು ಜತೆಗೆ ಸಂಗೀತ ನಿರ್ದೇಶಕನಾಗಿಯೂ ಕೆಲಸ ಮಾಡುತ್ತಿದ್ದಾರೆ, ಚಿತ್ರದ ಉಳಿದ ತಾಂತ್ರಿಕವರ್ಗ ಹಾಗೂ ಕಲಾವಿದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ನೀಡಲಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin