Versatile Dr. Leela Mohan has acted in P.V.R. films in a row.

ಬಹುಮುಖ ಪ್ರತಿಭೆ ಡಾ. ಲೀಲಾ ಮೋಹನ್ ಪಿ.ವಿ,ಆರ್ ಸಾಲು ಸಾಲು ಚಿತ್ರಗಳಲ್ಲಿ ನಟನೆ - CineNewsKannada.com

ಬಹುಮುಖ ಪ್ರತಿಭೆ ಡಾ. ಲೀಲಾ ಮೋಹನ್ ಪಿ.ವಿ,ಆರ್ ಸಾಲು ಸಾಲು ಚಿತ್ರಗಳಲ್ಲಿ ನಟನೆ

ವೈದ್ಯಕೀಯ ಕ್ಷೇತ್ರದ ಜೊತೆಗೆ ಕನ್ನಡ ಚಿತ್ರರಂಗದಲ್ಲೂ ನಟ,ಸಾಹಿತಿ ಹಾಗೂ ಕಲಾವಿದರಾಗಿ ಡಾ. ಲೀಲಾ ಮೋಹನ್ ಪಿ.ವಿ.ಆರ್. ಗುರುತಿಸಿಕೊಂಡಿದ್ದಾರೆ.

ಬಾಲ್ಯದಿಂದಲೇ ಅಭಿನಯ, ಬರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದ ಡಾ. ಲೀಲಾ ಮೋಹನ್ ಪಿ.ವಿ.ಆರ್. 2016ರಲ್ಲಿ ಗಿರಿರಾಜ. ಬಿ.ಎಂ ಅಭಿನಯ ಮತ್ತು ರಂಗ ಭೂಮಿ ತರಬೇತಿ ಪಡೆದ ನಂತರ ಕಿರು ಚಿತ್ರಗಳಾದ ಆಕ್ಸಿಡೆಂಟ್, ಓ ಎಸ್ ಟಿ, ಹೈವೇ , ಟ್ರಕ್ ಚಿತ್ರಗಳಲ್ಲಿ ಅನುಭವ ಪಡೆದು , 2018ರಿಂದ ಆಲ್ಬಮ್ ಹಾಡುಗಳಲ್ಲೂ ಕಾಣಿಸಿಕೊಂಡಿದ್ದಾರೆ.

ತದನಂತರ ಪೂರ್ಣ ಪ್ರಮಾಣದಲ್ಲಿ ಕನ್ಯಾ, ಗಡಿಯಾರ ಚಿತ್ರಗಳಲ್ಲಿ ಅಭಿನಯಿಸಿದ ನಂತರ ಈಗ “ನಾಯಿ ಇದೆ ಎಚ್ಚರಿಕೆ” ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ. ಚಿತ್ರ ನಿರ್ಮಿಸುವುದರ ಜೊತೆಗೆ ನಾಯಕನಾಗಿ ಕೂಡ ಅಭಿನಯಿಸಿದ್ದಾರೆ ಡಾ. ಲೀಲಾ ಮೋಹನ್. ಇದಲ್ಲದೆ ಸಾಲುಸಲಾಗಿ ಕೌರವ ವೆಂಕಟೇಶ್ ನಿರ್ದೇಶನದ ನೂತನ ಚಿತ್ರದ ಜೊತೆಗೆ ಉಗ್ರಾವತಾರ ಚಿತ್ರದಲ್ಲಿ ಸೈಕೋ ಪಾತ್ರ , ರೇ1 ನಲ್ಲಿ ಖಳನಾಯಕನಾಗಿ , ಪುಟಾಣಿ ಪಂಟ್ರೂ ಹಾಗೂ ತೆಲುಗುನಲ್ಲಿ ಕಲ್ಯಾಣ ಮಸ್ತು , ಕಾಲಾನಿಕಿ ಭೈರವಡು ಚಿತ್ರಗಳಲ್ಲಿ ಅಭಿನಯಿಸಿದ್ದು , ಸದ್ಯ ಕನ್ನಡದಲ್ಲಿ ರಾಕ್ಷಸ , ಬಾರ್ಬಿ , ದಯಂಡ್ ಚಿತ್ರಗಳು ಬಿಡುಗಡೆಗೆ ಹಂತದಲ್ಲಿದೆ.

ಡಾ. ಲೀಲಾ ಮೋಹನ್ ಆರೋಗ್ಯ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಧೂಮಪಾನ ಮತ್ತು ನಿಕೋಟಿನ್ ವ್ಯಸನದಿಂದ ಹೊರಬರುವುದು ಹೇಗೆ ಎಂಬುದನ್ನು ಪುಸ್ತಕ ಮೂಲಕ ಅವರ ತಂದಿದ್ದು, ಕ್ರೀಡೆ ಮತ್ತು ಮ್ಯಾರಥಾನ್ ಓಟದಲ್ಲಿ ದೀರ್ಘಕಾಲದ ಮ್ಯಾರಥಾನ್ ರನ್ನರ್ ಆಗಿರುವ ಅವರು ಕರ್ನಾಟಕ ಹಾಗೂ ಭಾರತದ ಅನೇಕ ಮ್ಯಾರಥಾನ್‍ಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ್ದಾರೆ.

ಹೃದಯ ಆರೋಗ್ಯ, ಫಿಟ್‍ನೆಸ್ ಮತ್ತು ಲೈಫ್‍ಸ್ಟೈಲ್ ಸುಧಾರಣೆಗೆ ಉತ್ತೇಜನ ನೀಡುವ ವ್ಯಕ್ತಿಯಾಗಿ ಪ್ರಸಿದ್ಧರು. ಇವರ ಹಲವು ಸಾಧನೆಗಳನ್ನು ಗಮನಿಸಿ ವೈದ್ಯಕೀಯ, ಸಂಸ್ಕೃತಿ, ಸಿನೆಮಾ, ಶಿಕ್ಷಣ, ಸಾಮಾಜಿಕ ಸೇವೆಗಳಲ್ಲಿ ನೀಡಿದ ಕೊಡುಗೆಗಾಗಿ 40ಕ್ಕೂ ಹೆಚ್ಚು ಪ್ರಶಸ್ತಿಗಳು ಪಡೆದಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin