Art ascetic Rajesh's grandson enters the world of color through the film "Mujugara"

ಕಲಾತಪಸ್ವಿ ರಾಜೇಶ್ ಮೊಮ್ಮಗ “ಮುಜುಗರ” ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶ - CineNewsKannada.com

ಕಲಾತಪಸ್ವಿ ರಾಜೇಶ್ ಮೊಮ್ಮಗ “ಮುಜುಗರ” ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಪ್ರವೇಶ

ಅಭಿನಯದ ಮೂಲಕವೇ ಗಮನ ಸೆಳೆದಿದ್ದು ಹಿರಿಯ ನಟ ಕಲಾತಪಸ್ವಿ ದಿವಂತ ರಾಜೇಶ್ ಮೊಮ್ಮಗ ಸಾಯಿನಂದ್ “ಮುಜುಗರ” ಚಿತ್ರದ ಮೂಲಕ ನಾಯಕನಾಗಿ ಚಂದನವನಕ್ಕೆ ಪ್ರವೇಶಿಸಿದ್ದ ತಾತನ ಹಾಗೆ ಚಿತ್ರರಂಗದಲ್ಲಿ ಅದೃಷ್ಠ ಕಂಡುಕೊಳ್ಳಲು ಮುಂದಾಗಿದ್ದಾರೆ

ಶಾಂತ ಶ್ರೀನಿವಾಸ್ ಡಿ ನಿರ್ಮಿಸುತ್ತಿರುವ ಚಿತ್ರವನ್ನು ತರುಣ್ ಎನ್ (ಜ್ಯೋತಿಪ್ರಿಯ) ನಿರ್ದೇಶಿಸುತ್ತಿದ್ದಾರೆ.ಚಿತ್ರದ ಮೊದಲ ಸನ್ನಿವೇಶಕ್ಕೆ ನಟ ಪ್ರಮೋದ್ ಶೆಟ್ಟಿ ಆರಂಭ ಫಲಕ ತೋರಿದರು. ನಿರ್ಮಾಪಕಿ ಶಾಂತ ಶ್ರೀನಿವಾಸ್ ಕ್ಯಾಮೆರಾ ಚಾಲನೆ ಮಾಡಿ ಶುಭ ಹಾರೈಸಿದರು

ನಿರ್ದೇಶಕ ತರುಣ್ ಎನ್ (ಜ್ಯೋತಿಪ್ರಿಯ) ಮಾತನಾಡಿ ಎರಡು ದಶಕದಿಂದ ನಾಗಾಭರಣ, ಅನಂತರಾಜು, ಅಮರ್ ಹಾಗೂ “ಕಂಠಿ” ಭರತ್ ಬಳಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಸ್ವತಂತ್ರ ನಿರ್ದೇಶಕನಾಗಿ ಮೊದಲ ಚಿತ್ರ. “ಮುಜುಗರ” ಕಾಫಿತೋಟದ ಸುತ್ತ ನಡೆಯುವ ಪ್ರೇಮ ಕಥೆ. ಹಿರಿಯ ನಟ ರಾಜೇಶ್ ಮೊಮ್ಮಗ ಸಾಯಿನಂದ್ ನಾಯಕನಾಗಿ, ನಿಮಿಷ್ಕ ಹಾಗೂ ತನು ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ ಎರಡನೇ ನಾಯಕನಾಗಿ ಸುಭಾಷ್ ಹಾಗೂ ವಿಲನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ ಎಂದರು

ಚಿತ್ರ ಡಿಸೆಂಬರ್ 15 ರಿಂದ ಸಕಲೇಶಪುರ, ಚಿಕ್ಕಮಗಳೂರು, ಹೊರನಾಡು, ಕಳಸ, ಮಡಿಕೇರಿ ಮುಂತಾದ ಕಡೆಯ ಚಿತ್ರೀಕರಣ ನಡೆಯಲಿದೆ. ಜೈ ಆನಂದ್ ಛಾಯಾಗ್ರಹಣ, ಶ್ರೀಧರ್ ವಿ ಸಂಭ್ರಮ್ ಸಂಗೀತ ನಿರ್ದೇಶನ ಹಾಗೂ ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ ಎಂದು ಮಾಹಿತಿ ಹಂಚಿಕೊಂಡರು

ನಿರ್ಮಾಪಕ ಶ್ರೀನಿವಾಸ್ ಮಾತನಾಡಿ ಈ ಮುಂಚೆ “ಎಲ್ಲಿ ಆಡೋದು ನಾವು ಎಲ್ಲಿ ಆಡೋದು” ಮಕ್ಕಳ ಚಿತ್ರ ನಿರ್ಮಾಣ ಮಾಡಿದ್ದೆವು. ಆ ಚಿತ್ರಕ್ಕೆ ರಾಜ್ಯಪ್ರಶಸ್ತಿ ಬಂದಿದೆ. ಎರಡನೇ ಚಿತ್ರ. ನಿರ್ದೇಶಕರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣ ಮಾಡುತ್ತಿದ್ದೇವೆ ಎಂದರು

ನಾಯಕ ಸಾಯಿನಂದ್ ಮಾತನಾಡಿ ನಟನಾಗಲು ನನ್ನ ತಾತ ರಾಜೇಶ್ ಅವರೆ ಸ್ಪೂರ್ತಿ. ಇಂದು ಅವರಿದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು. ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಶಾಲೆಯಲ್ಲಿ ಅಭಿನಯದ ಕೋರ್ಸ್ ಕಲಿತಿದ್ದೇನೆ. ನಾಯಕನಾಗಿ ಮೊದಲ ಚಿತ್ರ. ಪಾತ್ರ ಚೆನ್ನಾಗಿದೆ ಎಂದು ಹೇಳಿದರು

ನಾನು ಚಿತ್ರದಲ್ಲಿ ನಾನು ಎರಡನೇ ನಾಯಕ ಎಂದರು ಸುಭಾಷ್. ನಾಯಕಿಯರಾದ ನಿಮಿಷ್ಕ, ತನು ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು. ಚಿತ್ರದಲ್ಲಿ ಐದು ಹಾಡುಗಳಿರುವುದಾಗಿ ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್ ತಿಳಿಸಿದರು. ಛಾಯಾಗ್ರಹಣದ ಕುರಿತು ಜೈ ಆನಂದ್ ಮಾಹಿತಿ ನೀಡಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin