Review: Along with the devil's book, the film "GST" is a sure-fire money-maker

Review :ದೆವ್ವಗಳ ಕಿತಾಪತಿಯ ಜೊತೆಗೆ ಪಕ್ಕಾ ಪೈಸಾ ವಸೂಲ್ ಚಿತ್ರ “ಜಿಎಸ್‍ಟಿ” - CineNewsKannada.com

Review :ದೆವ್ವಗಳ ಕಿತಾಪತಿಯ ಜೊತೆಗೆ ಪಕ್ಕಾ ಪೈಸಾ ವಸೂಲ್ ಚಿತ್ರ “ಜಿಎಸ್‍ಟಿ”

ಚಿತ್ರ; ಜಿಎಸ್ ಟಿ
ನಿರ್ದೇಶನ : ಸೃಜನ್ ಲೋಕೇಶ್
ತಾರಾಗಣ: ಸೃಜನ್ ಲೋಕೇಶ್, ರಜನಿ ಭಾರಧ್ವಜ್, ಗಿರಿಜಾ ಲೋಕೇಶ್, ಸುಕೃತ್ ,ತಬಲ ನಾಣಿ, ವಿನೋದ್ ಗೊಬ್ಬರಗಾಲ, ನಿವೇದಿತಾ ಗೌಡ, ರವಿಶಂಕರ್ ಗೌಡ, ಶೋಭರಾಜ್ ಶರತ್ ಲೋಹಿತಾಶ್ವ, ಸಂಹಿತಾ ವಿನ್ಯಾ ಮತ್ತಿತರರು
ರೇಟಿಂಗ್ : **** 4 /5

ಮಜಾ ಟಾಕೀಸ್, ಸೃಜಾ ವಿಥ್ ಮಜಾ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಹತ್ತಿರವಾಗಿರುವ ನಟ ,ನಿರೂಪಕ ಸೃಜನ್ ಲೋಕೇಶ್ ಇದೀಗ ಒಂದು ಹೆಜ್ಜೆ ಮುಂದೆ ಇಟ್ಡಿದ್ದಾರೆ. ಕಿರುತೆರೆಯಿಂದ ಹಿರಿತೆರೆಯಲ್ಲಿ ಯಶಸ್ವಿನ ಬಾವುಟ ಹಾರಿಸಲು ಸಜ್ಜಾಗಿದ್ದಾರೆ. ಅದಕ್ಕಾಗಿ ನಗುವನ್ನೇ ತಮ್ಮ ಬಂಡವಾಳ ಮಾಡಿಕೊಂಡು ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಮಜಾಟಾಕೀಸ್‍ನ ಬಹುತೇಕ ಕಲಾವಿದರನ್ನೇ ತಮ್ಮ ಚೊಚ್ಚಲ ನಿರ್ದೇಶನದ ” ಜಿಎಸ್‍ಟಿ” ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಜೊತೆಗೆ ತಾಯಿ ಗಿರಿಜಾ ಲೋಕೇಶ್ ಹಾಗು ಪುತ್ರ ಸುಕೃತ್ ಕೂಡ ನಟಿಸಿದ್ದಾರೆ. ಈ ಮೂಲಕ ಕುಟುಂಬವೊಂದರ ಮೂರು ತಲೆಮಾರು ಒಂದೇ ಚಿತ್ರದಲ್ಲಿ ನಟಿಸಿರುವುದು ಕೂಡ ಹೆಗ್ಗಳಿಗೆ ಕನ್ನಡ ಚಿತ್ರರಂಗದ ಮಟ್ಟಿಗೆ ಅಪರೂಪವೇ ಸರಿ.

ಸೃಜನ್ ಲೋಕೇಶ್ ಈ ಬಾರಿ ಕಿರುತೆರೆಯಿಂದ ಹಿರಿತೆರೆಗೆ ಹೊಸ ರೂಪದಲ್ಲಿ ಬಂದಿರುವ ಹಿನ್ನೆಲೆಯಲ್ಲಿ ಐದು ಮತ್ತೊಂದು ದೆವ್ವದ ಬೆಂಬಲ ಪಡೆದಿದ್ದಾರೆ. ಆ ದೆವ್ವಗಳೋ ಜೀವನದಲ್ಲಿ ನೊಂದು ಬೆಂದು ಬಸವಳಿದ ಅಂತರ್ ಪಿಶಾಚಿಗಳು. ಅವುಗಳ ಬೆಂಬಲದಿಂದ ಚೊಚ್ಚಲ ನಿರ್ದೇಶನದಲ್ಲಿ ನಗುವಿನ ಬುಗ್ಗೆ ಹರಿಸಿದ್ದಾರೆ. ಅದು ಗೆಲುವಿನ ಬಗ್ಗೆಯಾಗಿ ಪರಿವರ್ತನೆ ಆದರೆ ಮತ್ತಷ್ಟು ಪ್ರಯತ್ನಕ್ಕೆ ಮುನ್ನುಡಿ ಬರೆಯಲಿದೆ.

ಜೀವನದಲ್ಲಿ ಲತ್ತೆ, ನತದೃಷ್ಟ ಎಂದು ಅಪ್ಪನಿಂದಲೇ ನಿಂದನೆಗೆ ಒಳಗಾದ ಲಕ್ಕಿ ( ಸೃಜನ್ ಲೋಕೇಶ್ ) ಸಾಯಲು ತೀರ್ಮಾನ ಮಾಡ್ತಾನೆ .ಆದರೆ ಅಂದುಕೊಂಡಿದ್ದೇ ಒಂದು ಆಗಿದ್ದೇ ಮತ್ತೊಂದು. ಸಾಯಲು ಹೊರಟವನಿಗೆ ಶಾಂತಮ್ಮ ( ಗಿರಿಜಾ ಲೋಕೇಶ್) ಪ್ರಭಾಕರ್ ( ತಬಲನಾಣಿ) ಯೋಗೇಶ್ ( ಸುಕೃತ್) ತಾನ್ಯಾ ( ನಿವೇದಿತಾ) ಹಾಗು ಹನುಮಂತು ( ವಿನೋದ್ ಗೊಬ್ಬರಗಾಲ) ದೆವ್ವಗಳ ಬೆಂಬಲ ಸಿಗುತ್ತದೆ. ತರಾವೇರಿ ಪ್ರಯತ್ನ ಮಾಡಿದರೂ ಸಾಯುವುದೇ ಇಲ್ಲ.

ಆರೆಂಜ್ ಮ್ಯಾರೇಜ್ ಆಗದೆ ಪ್ರೇಮ ವಿವಾಹಕ್ಕೆ ನಿಧಿ ( ರಜನಿ ಭಾರದ್ವಾಜ್) ಮನಸೋಲುತ್ತಾಳೆ, ಅವಳ ಮೇಲೆ ಪ್ರೀತಿ ಚಿಗುರೊಡೆಯುವಂತೆ ದೆವ್ವಗಳು ನಾನಾ ಕಿತಾಪತಿ ಮಾಡುತ್ತವೆ. ಆ ದೆವ್ವಗಳೋ ಒಂದೊಂದು ಸಮಸ್ಯೆ, ಈ ನಡುವೆ ಮತ್ತೊಂದು ದೆವ್ವ ರಮೇಶ್ (ಅರವಿಂದ ರಾವ್ ) ದಿಂದ ಬ್ಯಾಂಕ್ ದರೋಡೆಗೆ ಮುಂದಾಗುತ್ತಾರೆ. ದೆವ್ವಗಳ ಆಸೆ ಈಡೇರುತ್ತಾ ದರೋಡೆ ಮಡ್ತಾರಾ ..ಸಾಯಲು ಹೊರಟ ಲಕ್ಕಿ ಮುಂದೇನು ಎನ್ನುವುದು ಚಿತ್ರದ ಕಥನ ಕುತೂಹಲ.

ನಿರ್ದೇಶಕರಾಗಿ ಸೃಜನ್ ಲೋಕೇಶ್ ಮೊದಲ ಪ್ರಯತ್ನದಲ್ಲಿ ಸಿಕ್ಸರ್ ಸಿಡಿಸಿದ್ದಾರೆ. ನಟನಾಗಿಯೂ ಲೀಲಾಜಾಲವಾಗಿ ನಟಿಸಿದ್ದಾರೆ. ಜೊತೆಗೆ ಹಾಸ್ಯದ ರಸದೌತಣ ಉಣಬಡಿಸಿದ್ದಾರೆ. ಕಿರುತೆರೆಯಲ್ಲಿ ಗಳಿಸಿರುವ ಪ್ರೇಕ್ಷಕ ಜಿಎಸ್‍ಟಿ ಕೈ ಹಿಡಿಯಬೇಕಾಗಿದೆ.

ಚಿತ್ರದ ಮೊದಲರ್ದ ದೆವ್ವಗಳ ಜೊತೆ ಸಂಭಾಷಣೆ,ನೋವು ನಲಿವುಗಳ ಸುತ್ತಾ ಸಾಗಿದೆ, ದ್ವಿತೀಯಾರ್ದದಲ್ಲಿ ಚಿತ್ರ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುವಷ್ಟರ ಮಟ್ಟಿಗೆ ನಗಿಸುತ್ತದೆ. ಅದರಲ್ಲಿಯೂ ರವಿಶಂಕರ್ ಗೌಡ ಮತ್ತು ಶೋಭರಾಜ್ ಆಗಮನದಿಂದ ಚಿತ್ರ ಮತ್ತೊಂದು ಆಯಾಮ ಪಡೆದುಕೊಳ್ಳುತ್ತದೆ. ಇಬ್ಬರಿಗೂ ಇರುವ ಕಾಮಿಡಿ ಟೈಮಿಂಗ್ ಚಿತ್ರವನ್ನು ಬೇರೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ ಎಂದರೆ ತಪ್ಪಾಗಲಾರದು.

ಗಿರಿಜಾ ಲೋಕೇಶ್, ಸುಕೃತ್ ,ತಬಲ ನಾಣಿ, ವಿನೋದ್ ಗೊಬ್ಬರಗಾಲ, ನಿವೇದಿತಾ ಗೌಡ, ಶರತ್ ಲೋಹಿತಾಶ್ವ ಪಾತ್ರಗೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ ನಗುವಿನ ಜೊತೆಗೆ ಯುವಕರ ಮನಸ್ಸಿಗೆ ಕಿಚ್ಚು ಹಚ್ಚಲು ನಟಿ ಸಂಹಿತಾ ವಿನ್ಯಾ ಹೆಜ್ಜೆ ಹಾಕಿದ್ದಾರೆ. ಹುಡುಗರು ಚಿತ್ರದ ಪಂಕಜಾ ಹಾಡು ನೆನಪು ಮಾಡುವಂತಿದೆ.

ಇನ್ನು ಗಿರೀಶ್ ಶಿವಣ್ಣ, ಅರವಿಂದ್ ಅವರ ಪಾತ್ರಗಳು ಪ್ರೇಕ್ಷಕನ ನಗುವಿಗೆ ಇನ್ನಷ್ಟು ಪುಷ್ಠಿ ನೀಡಿವೆ. ಜಿಟಿಎಸ್ ಮೂಲಕ ನಿರ್ದೇಶಕ ಸೃಜನ್ ಲೋಕೇಶ್ ನಿರ್ದೇಶಕನಾಗಿ ಗಟ್ಟಿಯಾಗಿ ಚಿತ್ರರಂಗದಲ್ಲಿ ನೆಲೆ ನಿಲ್ಲುವ ಮುನ್ಸೂಚನೆ ನೀಡಿದ್ಧಾರೆ. ಜೊತೆಗೆ ರಾಜಶೇಖರ್ ಸಂಭಾಷಣೆ ಗಮನ ಸೆಳೆದಿದೆ. ಜಿಎಸ್‍ಟಿ ಪಕ್ಕಾ ಪೈಸಾ ವಸೂಲ್ ಚಿತ್ರ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin