Review: ಫ್ಲರ್ಟ್ ಯುವ ಜನಾಂಗಕ್ಕೆ ಕನ್ನಡಿ ಹಿಡಿದ ಚಿತ್ರ
ಚಿತ್ರ: ಫ್ಲರ್ಟ್
ನಿರ್ದೇಶನ: ಚಂದನ್ ಕುಮಾರ್
ತಾರಾಗಣ; ಚಂದನ್ ಕುಮಾರ್, ನಿಮಿಕಾ ರತ್ನಾಕರ್, ಅಕ್ಷಿತಾ ಬೋಪಯ್ಯ, ರಂಗಾಯಣರಘು, ಗಿರೀಶ್ ಶಿವಣ್ಣ,ಶೃತಿ ,ಸಾಧುಕೋಕಿಲಾ, ಅವಿನಾಶ್ , ಅರವಿಂದ್ ರಾವ್ ಮತ್ತಿತರರು
ರೇಟಿಂಗ್: **** 4 / 5
ನಾನು ಬದುಕಿರುವವರೆಗೆ ನಿನ್ನ ಅಮ್ಮನ ನೆನಪು ಬರದಂತೆ ನೋಡಿಕೊಳ್ಳುವೆ..ನನ್ನನ್ನು ಮದುವೆ ಆಗ್ತೀಯಾ
ಹೀಗಂತ ತಾನು ಪ್ರೀತಿಸಿದ ಹುಡುಗಿಗೆ ಹುಡುಗ ಭರವಸೆ ನೀಡ್ತಾನೆ.
ಆತನೋ 99 ಹುಡುಗಿರ ಜೊತೆ ಮೋಜು ಮಸ್ತಿ ಮಾಡಿ ನ್ಯಾಯಾಲಯದ ಕಟಕಟೆಗೆ ಬಂದು ನಿಂತವ. ಇಂತವನು ನಿಜಕ್ಕೂ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ತಾನಾ ಎನ್ನುವುದು ಈ ವಾರ ತೆರೆಗೆ ಬಂದಿರುವ “ಪ್ಲರ್ಟ್” ಚಿತ್ರದ ಕಥೆ.
ಪ್ರೀತಿ,ಪ್ರೇಮ ಹೊಡೆದಾಟ ಬಡಿದಾಟದ ಸಿನಿಮಾಗಳು ಬರುತ್ತಿರುವ ಕಾಲಘಟ್ಟದಲ್ಲಿನ ಹುಡುಗಿಯರ ಜೊತೆ ಚೆಲ್ಲಾಟವಾಡುವ ಹುಡುಗನೊಬ್ಬನ ಸುತ್ತ ಸಾಗುವ ಕಥೆಯ ಹೂರಣ ಇರುವ ಚಿತ್ರ “ ಫ್ಲರ್ಟ್”.
ನಟನಾಗಿ ಗುರುತಿಸಿಕೊಂಡಿರುವ ಚಂದನ್ ಕುಮಾರ್, ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಚಿತ್ರ ಫ್ಲರ್ಟ್, ಅದಕ್ಕಾಗಿ ಅವರು ಹುಡುಗಿಯರ ವಿಷಯ ಆಯ್ಕೆ ಮಾಡಿಕೊಂಡಿದ್ದಾರೆ.ತಾವು ಆಯ್ಕೆ ಮಾಡಿಕೊಂಡ ಕಥೆಗೆ ನ್ಯಾಯ ಒದಗಿಸಿದ್ದಾರೆ ಅದಕ್ಕೆ ಪೂರಕವಾಗಿ ಕಲಾವಿದರ ಬೆಂಬಲವೂ ಸಿಕ್ಕಿದೆ, ಹೀಗಾಗಿ ತಾವು ಅಂದುಕೊಂಡ ಕೆಲಸವನ್ನು ತೆರೆಯ ಮೇಲೆ ಕಟ್ಟಿಕೊಡುವಲ್ಲಿ ಸಫಲರಾಗಿದ್ದಾರೆ.
ಕೃಷ್ಣ-ಚಂದನ್ ಕುಮಾರ್ ವೃತ್ತಿಪರ ಜಿಮ್ ಟ್ರೈನರ್, ತಾನು ಕಂಡ ಹುಡುಗಿಯರನ್ನು ಮೋಡಿ ಮಾಡಿ ಬಲೆಗೆ ಹಾಕಿಕೊಳ್ಳುವುದೇ ಆತನ ಅಸಲಿ ಮುಖ, ಇಂತಹ ಹುಡುಗನ ಬಾಳಲ್ಲಿ ಸನಿಹ- ನಿಮಿಕಾ ರತ್ನಾಕರ್ ಎಂಟ್ರಿಯಾಗುತ್ತದೆ, ಈ ಸನಿಹ ಯಾರು. ಆಕೆಯನ್ನು ಈತ ತನ್ನ ಕಾಮದಾಹಕ್ಕೆ ಬಳಸಿಕೊಳ್ತಾನಾ..
ಈ ನಡುವೆ ಬಾಲ್ಯದ ಸ್ನೇಹಿತ ಬಾಲ-ಗಿರೀಶ್ ಶಿವಣ್ಣನನ್ನು ಮದುವೆಯಾಗಬೇಕೆಂದು ಬರುವ ಇದೇ ಸನಿಹಾ ಆತನ್ನು ನಿಜಕ್ಕೂ ಮದುವೆಯಾಗಲ ಒಪ್ಪಿಕೊಂಡವಳಾ, ಇಲ್ಲ ಆಕೆಯ ಅಸಲಿ ಮುಖ ಏನು, ಜಿಮ್ ಟ್ರೈನರ್ ಆಗಿರುವ ಕೃಷ್ಣ, ಕಂಪನಿಯೊಂದರಲ್ಲಿ ಕೆಲಸ ಮಾಡುವಾಗ ನಡೆದ ಘಟನೆಯಾದರೂ ಏನು ಎನ್ನುವುದನ್ನು ತಿಳಿಯಬೇಕಾದರೆ ಚಿತ್ರ ನೋಡಬೇಕು.
ನಿರ್ದೇಶಕ ಚಂದನ್ ಕುಮಾರ್, ನಾಯಕನಾಗಿಯೂ ನಟಿಸಿದ್ದಾರೆ ಸಿಕ್ಕ ಪಾತ್ರವನ್ನು ಲೀಲಾಜಾಲವಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ, ನಿರ್ದೇಶನದ ವಿಷಯಕ್ಕೆ ಬಂದರೆ ಅನಗತ್ಯವಾಗಿ ಚಿತ್ರದ ಸನ್ನಿವೇಶಗಳನ್ನು ಎಳೆದಿದ್ದಾರೆ. ಪುನರಾವರ್ತಿತ ಸನ್ನಿವೇಶ ಸೇರಿ ಇಪ್ಪತ್ತರಿಂದ ಮುವತ್ತು ನಿಮಿಷಕ್ಕೆ ಕತ್ತರಿ ಪ್ರಯೋಗ ಮಾಡಿದ್ದರೆ ಮತ್ತಷ್ಟು ಉತ್ತಮ ಚಿತ್ರವಾಗುತ್ತಿತ್ತು. ಹಾಗಂತ ಚಿತ್ರ ಪ್ರೇಕ್ಷಕನಿಗೆ ಮೋಸ ಮಾಡದು ಆದರೆ ಅವಧಿ ಜಾಸ್ತಿ ಅನ್ನಿಸುತ್ತದೆ.
ನಿಮಿಕಾ ರತ್ನಾಕರ್,ಅಕ್ಷಿತಾ ಬೋಪಯ್ಯ, ಗಿರೀಶ್ ಶಿವಣ್ಣ, ರಂಗಾಯಣ ರಘು, ಅವಿನಾಶ್, ಶೃತಿ, ಅರವಿಂದ್ ರಾವ್ ಮತ್ತಿತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

