Review: “Pathashala”, a social concern film based on real life

Review: ನೈಜ ನೆಲೆಗಟ್ಟಿನಲ್ಲಿ ತೆರೆಗೆ ಬಂದಿರುವ ಸಾಮಾಜಿಕ ಕಳಕಳಿಯ ಚಿತ್ರ “ಪಾಠಶಾಲಾ” - CineNewsKannada.com

Review: ನೈಜ ನೆಲೆಗಟ್ಟಿನಲ್ಲಿ ತೆರೆಗೆ ಬಂದಿರುವ ಸಾಮಾಜಿಕ ಕಳಕಳಿಯ ಚಿತ್ರ “ಪಾಠಶಾಲಾ”

ಚಿತ್ರ :ಪಾಠಶಾಲಾ
ನಿರ್ದೇಶನ : ಮಂಜುನಾಥ್ ಹೆದ್ದೂರು
ತಾರಾಗಣ: ಕಿರಣ್ ನಾಯಕ್, ಬಾಲಾಜಿ ಮನೋಹರ್, ನಟನ ಪ್ರಶಾಂತ್,ಸಂವೃದ್ದಿ ಕುಮಾರ್,ಗಜೇಂದ್ರ, ಮಾಸ್ಟರ್ ಆಯುಷ್, ಮಂಜುನಾಥ್ ಹೆದ್ದೂರು ಮತ್ತಿತರರು
ರೇಟಿಂಗ್ :*** 3/5

ಕಾಡು ಉಳಿದರೆ ನಾಡು ಉಳಿಯುತ್ತದೆ. ಸೂಕ್ತ ಸಮಯದಲ್ಲಿ ಮೆಳೆ ಬೆಳೆಯಾಗಲಿದೆ ಹೀಗಾಗಿ ಅರಣ್ಯ ಸಂಪತ್ತು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎನ್ನುವ ಸಾಮಾಜಿಕ ಕಾಳಜಿ ಮತ್ತು ಕಳಕಳಿ ಹೊಂದಿರುವ ಪಾಠಶಾಲಾ ಚಿತ್ರ ಈ ವಾರ ತೆರೆಗೆ ಬಂದಿದೆ.

ನಿರ್ದೇಶಕ ಮಂಜುನಾಥ್ ಹೆದ್ದೂರು, ಮಲೆನಾಡು ಭಾಗದಲ್ಲಿ ನಡೆದ ನೈಜ ಘಟನೆಯನ್ನು ಮುಂದಿಟ್ಟುಕೊಂಡು ಅದಕ್ಕೆ ಶಾಲಾ ಮಕ್ಕಳು, ಅರಣ್ಯ ಇಲಾಖೆ, ಊರಿನ ಗ್ರಾಮಸ್ಥರು, ಅರಣ್ಯದಲ್ಲಿ ಕಳ್ಳತನ, ಈ ನಡುವೆ ಮುದ್ದಾದ ಪ್ರೀತಿ, ಪ್ರೇಮ ಸೇರಿದಂತೆ ಮತ್ತುತರ ವಿಷಯಗಳನ್ನು ಮುಂದಿಟ್ಟುಕೊಂಡು ಮನೆ ಮಂದಿಯೆಲ್ಲಾ ನೋಡಬಹುದಾದ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ.

ಸಂಜೀವಣ್ಣ (ಕಿರಣ್ ನಾಯಕ್) ಮಲೆನಾಡು ಭಾಗದ ಹಳ್ಳಿಯೊಂದರಲ್ಲಿ ಇರುವಾತ, ಸಂಜೆಯಾದರೆ ಸಾಕು ಬೇಟೆಗೆ ಹೋಗಿ ಶಿಕಾರಿ ಮಾಡುವುದು ಆತನ ಕಾಯಕ.ನಿತ್ಯದ ಜೀವನ ಸಾಗುವ ಈತ ಒಂದು ದಿನ ಅರಣ್ಯಾಧಿಕಾರಿಯ ಕೈಗೆ ಸಿಕ್ಕಿ ಹಾಕಿಕೊಂಡು ಬಿಡುತ್ತಾನೆ, ಹಾಗೋ ಹೀಗೆ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಕೂಡ ಆಗ್ತಾನೆ.

ಈ ನಡುವೆ ಮಕ್ಕಳ ಆಟೋಟ, ತುಂಟತನ, ಈ ನಡುವೆ ಯುವ ಜೋಡಿಯ ಪ್ರೀತಿ ಪ್ರೇಮ ಸಾಗುತ್ತಿರುವ ನಡುವೆ ಕಳ್ಳಸಾಗಾಣೆಯ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಂಜೀವಣ್ಣ ಮತ್ತು ಊರಿನ ಹಲವು ಗ್ರಾಮಸ್ಥರು ತಲೆ ಮರೆಸಿಕೊಂಡು ದಟ್ಟಾರಣ್ಯದ ಮಧ್ಯೆ ಅಡಿಗಿ ಕುಳಿತುಕೊಳ್ತಾರೆ. ಈ ನಡುವೆ ಮತ್ತೊಬ್ಬ ಅರಣ್ಯಾಧಿಕಾರಿ ( ಬಾಲಾಜಿ ಮನೋಹರ್) ಪ್ರವೇಶ ಆಗುತ್ತವದೆ. ಗ್ರಾಮಸ್ಥರು ತಮ್ಮ ಮೇಲೆ ಬಂದ ಆರೋಪದಿಂದ ಪಾರಾಗುತ್ತಾರಾ. ಇಲ್ಲ ಮಕ್ಕಳ ಪಾತ್ರ ಏನು ಪಾಠಶಾಲೆಗೂ ಚಿತ್ರದ ಶೀರ್ಷಿಕೆಗೂ ಯಾವ ರೀತಿ ಸಂಬಂಧ..

ಪಾಠಶಾಲೆ ಎಂದರೆ ಮಕ್ಕಳಿಗೆ ಮಾತ್ರ ಸೀಮಿತಾವಾ ಅಥವಾ ಜೀವನದ ಪಾಠ ಶಾಲೆಯ ಎನ್ನುವುದನ್ನು ತಿಳಿದುಕೊಳ್ಳಲು ಚಿತ್ರ ನೋಡಬೇಕು. ಅಷ್ಟರ ಮಟ್ಟಿಗೆ ನೈಜತೆಯಲ್ಲಿ ನಿರ್ದೇಶಕ ಮಂಜುನಾಥ್ ಹೆದ್ದೂರು ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ

ಮಲೆನಾಡು ಭಾಗದ ಹಿನ್ನೆಲೆಯಲ್ಲಿ ಚಿತ್ರ ಮೂಡಿಬಂದಿರುವ ಹಿನ್ನೆಲೆಯಲ್ಲಿ ಅಲ್ಲಿನ ಭಾಷೆ, ಸೊಗಡು, ಕಲಾವಿದರನ್ನು ಚಿತ್ರದಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಗಿದೆ. ಮಲೆನಾಡು ಭಾಗದ ಜನರಿಗೆ ಚಿತ್ರ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ, ಜೊತೆಗೆ ಅವರ ಆಚಾರ ವಿಚಾರ, ಸಂಸ್ಕøತಿ, ಸೊಗಡನ್ನು ಕಟ್ಟಿಗೆ ಕಟ್ಟುವ ಹಾಗೆ ಚಿತ್ರಿಸಲಾಗಿದೆ.

ಬಹುತೇಕ ಮಲೆನಾಡಬಾಗದ ಕಲಾವಿದರೇ ಚಿತ್ರದಲ್ಲಿರುವರಿಂದ ಇದೊಂದು ನೆಲಮೂಲದ ಹಾಗು ನೈಜ ಕಾಳಜಿ ಮತ್ತು ಕಳಕಳಿಹೊಂದಿರುವ ಚಿತ್ರ. ಈ ರೀತಿಯ ಚಿತ್ರಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಾನಬೇಕು. ಹೆಚ್ಚು ಜನರಿಗೆ ತಲುಪಬೇಕು, ಆಗ ಮಾತ್ರ ಇನ್ನಷ್ಟು ಪ್ರಯತ್ನ ಮಾಡಲು ಸಾಧ್ಯ.

ಚಿತ್ರದಲ್ಲಿ ನಟಿಸಿರುವ ಕಿರಣ್ ನಾಯಕ್, ಬಾಲಾಜಿ ಮನೋಹರ್, ನಟನ ಪ್ರಶಾಂತ್,ಸಂವೃದ್ದಿ ಕುಮಾರ್,ಗಜೇಂದ್ರ, ಮಾಸ್ಟರ್ ಆಯುಷ್, ಮಂಜುನಾಥ್ ಹೆದ್ದೂರು ಸೇರಿದಂತೆ ಗ್ರಾಮೀಣ ಪ್ರತಿಭೆಗಳೇ ಹೆಚ್ಚಿಗೆ ಚಿತ್ರದಲ್ಲಿ ನಟಿಸಿದ್ದಾರೆ ಹೀಗಾಗಿ ಚಿತ್ರ ಗ್ರಾಮೀಣ ಭಾಗದ ಜನರಿಗೆ ಇಷ್ಟವಾಗುವುದರಲ್ಲಿ ಯಾವುದೇ ಸಂದೇಹ ಮತ್ತು ಸಂಶಯವಿಲ್ಲ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin