Everything is reserved for the film “Rise of Ashoka” – Actor Ninasam Satish

“ರೈಸ್ ಆಫ್ ಅಶೋಕ” ಚಿತ್ರಕ್ಕಾಗಿ ಸರ್ವಸ್ವ ಮೀಸಲು- ನಟ ನೀನಾಸಂ ಸತೀಶ್ - CineNewsKannada.com

“ರೈಸ್ ಆಫ್ ಅಶೋಕ” ಚಿತ್ರಕ್ಕಾಗಿ ಸರ್ವಸ್ವ ಮೀಸಲು- ನಟ ನೀನಾಸಂ ಸತೀಶ್

“ಮೂರು ವರ್ಷ ಹಗಲು ರಾತ್ರಿ ಶ್ರಮ ಹಾಕಿದ್ದೇವೆ. ಕಣ್ಣೀರು ನೊಂದಿಗೆ ಸಿನಿಮಾ ಪೂರ್ಣಗೊಳಿಸಿದ್ದೇವೆ. ಒಂದು ಸಿನಿಮಾಗೆ 50 ಲಕ್ಷ ರೂ. ತಗೊಂಡಿದ್ರೂ 3 ವರ್ಷದಲ್ಲಿ 6 ಸಿನಿಮಾ ಮಾಡಬಹುದಿತ್ತು. ನಮಗೆ “ಸರ್ವಸ್ವವೂ” “ರೈಸ್ ಆಫ್ ಅಶೋಕ” ಆಗಿತ್ತು..”

“ಅಯೋಗ್ಯ ಬ್ರಾಂಡ್ ಕ್ರಿಯೇಟ್ ಮಾಡಿದೆ. ಪ್ಯಾನ್ ಇಂಡಿಯಾ ಮಾಡೋ ಹುಚ್ಚ ಅಂತಾರೆ. ಕೆಜಿಎಫ್, ಕಾಂತಾರ ಮಾಡಬೇಕು ಅನ್ನುವ ಆಸೆ ನನಗಿದೆ. “ರೈಸ್ ಆಫ್ ಅಶೋಕ” ಚಿತ್ರಕ್ಕೆ ಒಂದು ರೂಪಾಯಿ ತಗೊಂಡಿಲ್ಲ. ಎಲ್ಲವೂ ಸಲೀಲು ಇನ್ನುಚಿತ್ರೀಕರಣ ಆರಂಭಿಸಬೇಕು ಅನ ಶೂಟಿಂಗ್ ಮಾಡಬೇಕು ಅನ್ನುವುದರೊಳಗೆ ನಿರ್ದೇಶಕ ವಿನೋದ್ ಆತ್ಮಹತ್ಯೆ ಮಾಡಿಕೊಂಡ್ರು. ಜವಾಬ್ದಾರಿ ಜಾಸ್ತಿ ಆಯ್ತು. ಇಷ್ಟೆಲ್ಲ ಮಾಡಿ ಈ ಸಿನಿಮಾ ಚಿತ್ರೀಕರಣ ಆದ ಮೇಲೆ ಅಣ್ಣಗೆ ಆಕ್ಸಿಡೆಂಟ್ ಆಯ್ತು. ಪಡಬಾರದ ಕಷ್ಟ ಅಷ್ಟಿಷ್ಟಲ್ಲ.

ಹೀಗಂತ “ರೈಸ್ ಆಫ್ ಅಶೋಕ” ಚಿತ್ರೀಕರಣದ ಸಮಯದಲ್ಲಿ ತಾವು ಎದುರಿಸುವ ಸಮಸ್ಯೆ ಮತ್ತು ಸವಾಲುಗಳ ಕುರಿತು ನಟ ನೀನಾಸಂ ಸತೀಶ್ ಬಾವುಕವಾಗಿ ಹಂಚಿಕೊಂಡರು,

ಅಭಿನಯ ಚತುರ ಸತೀಶ್ ನೀನಾಸಂ ಅವರ ಭತ್ತಳಿಕೆಯಿಂದ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ದಿ ರೈಸ್ ಆಫ್ ಅಶೋಕ. ಪ್ರೇಕ್ಷಕರ ವಲಯದಲ್ಲಿ ಕುತೂಹಲ ಗರಿಗೆದರುವಂತೆ ಮಾಡಿದೆ. ಮಾದೇವನ ಕುರಿತಾದ ಸ್ವತಃ ಸತೀಶ್ “ಏಳೋ ಏಳೋ ಮಹಾದೇವ ಗೀತೆ”ಗೆ ಕ್ಯಾಚಿಮ್ಯಾಚಿ ಪದ ಪೋಣಿಸಿ ಸಾಹಿತ್ಯ ಬರೆದಿದ್ದಾರೆ. ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಅಯೋಗ್ಯ ಲೆಕ್ಕ ಅಲ್ಲಾ ನನಗೆ ಮನೇಲಿ ಮಲಗಿದ್ದರು ಜನ ಆ ಸಿನಿಮಾ ನೋಡ್ತಾರೆ. ಸಿನಿಮಾವನ್ನೇ ಸರ್ವಸ್ವ ಎಂದು ಭಾವಿಸಿ ಎದುರಾದ ಎಲ್ಲಾ ಸಮಸ್ಯೆ ಸವಾಲುಗಳನ್ನು ಮೆಟ್ಟಿನಿಂತು ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದೇವೆ.ಅದರ ಹಿಂದೆ ಇಡೀ ತಂಡ ಇದೆ,ಎಲ್ಲರಿಗೂ ಅಬಾರಿ ಎಂದರು

ನಟಿ ಸಪ್ತಮಿ ಗೌಡ ಮಾತನಾಡಿ, ಸಿನಿಮಾ ತಂಡಕ್ಕೆ ಲಾಸ್ಟ್ ಆರ್ಟಿಸ್ಟ್ ಆಗಿ ಸೇರ್ಪಡೆಯಾಗಿದ್ದು. ಚಿತ್ರ ಭಾಗವಾಗಿದ್ದೇನೋ ಅಂದಿನಿಂದ ಇಂದಿನವರೆಗೂ ಯಾವುದೇ ಸಾಂಗ್, ಡೈಲಾಗ್ , ಸೀನ್, ಕಾಸ್ಟ್ಯೂಮ್ ಎಲ್ಲರ ಬಗ್ಗೆಯೂ ಚರ್ಚೆ ನಡೆಸುತ್ತಾರೆ. ನಮ್ಮ ಅಭಿಪ್ರಾಯ ಕೇಳುತ್ತಾರೆ. ಸತೀಶ್ ಸರ್ ತುಂಬಾ ಸಪೋರ್ಟ್ ಮಾಡಿದ್ದಾರೆ. ಹೂ ಮಾರುವ ಹುಡುಗಿ ಅಂಬಿಕಾ ಎಂಬ ಪಾತ್ರ ಮಾಡಿದ್ದೇನೆ. ಇಡೀ ತಂಡಕ್ಕೆ ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಎಲ್ಲರೂ ಅವರ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ ಎಂದರು.

ಶಿವನ ಕುರಿತಾದ ಈ ಹಾಡಿಗೆ ಕೈಲಾಶ್ ಕೇರ್ ಸಾಧ್ವಿನಿ ಕೊಪ್ಪ ಹಾಗೂ ಸಿದ್ದು ಧ್ವನಿಯಾಗಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಮಾದೇವ ಗೀತೆಯ ತೂಕ ಹೆಚ್ಚಿಸಿದೆ. ಬೀಸುವ ಕಲ್ಲು, ಗಾಳಿಯಲ್ಲಿಯೂ ಶಿವನ್ನು ವರ್ಣಿಸಿರುವ ಸತೀಶ್ ನೀನಾಸಂ, ಶಿವನ ಭಕ್ತಿ ಭಾವದಲ್ಲಿ ತೇಲುವಂತೆ ಮಾಡಿದ್ದಾರೆ.

70ರ ದಶಕದ ಚಿತ್ರ:

ದಿ ರೈಸ್ ಆಫ್ ಅಶೋಕ 70ರ ದಶಕದಲ್ಲಿ ನಡೆಯುವ ಸಿನಿಮಾ. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆಯೇ “ದಿ ರೈಸ್ ಆಫ್ ಅಶೋಕ”

ಚಿತ್ರದಲ್ಲಿ ಸತೀಶ್‍ಗೆ ಜೋಡಿಯಾಗಿ ಕಾಂತಾರ ಸಿನಿಮಾ ಖ್ಯಾತಿಯ ಸಪ್ತಮಿ ಗೌಡ ನಟಿಸಿದ್ದಾರೆ. ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ವಿಕ್ರಮ್ ವೇದ ಖ್ಯಾತಿಯ ಹರೀಶ್ ಪೆರಾಡಿ, ಜಗಪ್ಪ ತಾರಾಬಳಗದಲ್ಲಿದ್ದಾರೆ. ಇದು ಸತೀಶ್ ಅವರ ವೃತ್ತಿಜೀವನದಲ್ಲೇ ಬಿಗ್ ಬಜೆಟ್ ಚಿತ್ರವಾಗಿದ್ದು, ದೊಡ್ಡ ಯಶಸ್ಸು ತಂದುಕೊಡುವ ನಿರೀಕ್ಷೆ ಕೂಡ ಇದೆ.

ಬಹುಭಾಷೆಯಲ್ಲಿ ಚಿತ್ರ

ಸಿನಿಮಾ ಕನ್ನಡದ ಜೊತೆ ತೆಲುಗು ಹಾಗೂ ತಮಿಳು ಭಾಷೆಗಳಲ್ಲೂ ಬಿಡುಗಡೆಯಾಗಲಿದೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ದಿ ರೈಸ್ ಆಫ್ ಆಫ್ ಅಶೋಕನಿಗೆ ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಕ್ಯಾಮರಾ ಹಿಡಿದಿದ್ದು, ಮನು ಶೇಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿವರ್ಮಾ ಹಾಗೂ ವಿಕ್ರಮ್ ಮೋರ್ ಸಾಹಸ ನಿರ್ದೇಶನ ನಿರ್ವಹಿಸಿದ್ದರೆ, ಸಂತೋಷ್ ಶೇಖರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin