ನಿರೀಕ್ಷೆ ಹೆಚ್ಚಿಸಿದ “ಬಲರಾಮನ ದಿನಗಳು” :ಕುತೂಹಲ ಹೆಚ್ಚಳ
ಕನ್ನಡ ಚಿತ್ರರಂಗದ ಯಶಸ್ವಿ ಚಿತ್ರಗಳ ನಿರ್ದೇಶಕ ಕೆ.ಎಂ ಚೈತನ್ಯ ನಿರ್ದೇಶನದ “ ಬಲರಾಮನ ದಿನಗಳು” ಚಿತ್ರ ಆರಂಭದಿಂದಲೂ ನಿರೀಕ್ಷೆ ಹೆಚ್ಚು ಮಾಡಿದ್ದು 2026ರ ಬಹು ನಿರೀಕ್ಷಿತ ಚಿತ್ರ ಎನ್ನುವ ಹಿರಿಮೆಗೆ ಪಾತ್ರವಾಗಿದೆ,ಹೀಗಾಗಿ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚುವಂತೆ ಮಾಡಿದೆ.

ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಬಲರಾಮನ ದಿನಗಳು ಚಿತ್ರಕ್ಕೆ ಬಂಡವಾಳ ಹೂಡಿದ್ದು.80ರ ದಶಕದ ಕಥೆಯಾಗಿರೋಈ ಚಿತ್ರಕ್ಕೆ ವೇಣುರವರ ಛಾಯಾಗ್ರಹಣವಿದೆ. ವಿನೋದ್ ಪ್ರಭಾಕರ್ ನಾಯಕನಾಗಿ ಬಲರಾಮನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯಾಗಿ ಪ್ರಿಯಾ ಆನಂದ್ ಅಭಿನಯಿಸಿದ್ದಾರೆ.
ದಕ್ಷಿಣ ಭಾರತ ಚಿತ್ರರಂಗದ ತಮಿಳಿನ ಖ್ಯಾತ ಸಂಗೀತ ಸಂಯೋಜಕ ಸಂತೋಷ್ ನಾರಾಯಣ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಲಾಗಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಸೇರಿ ತಮಿಳಿನ ಖ್ಯಾತ ನಾಮರಿಗೆ ದೊಡ್ಡ ಹಿಟ್ ಗಳನ್ನ ಕೊಟ್ಟಿರೋ ಸಂತೋಷ್ ನಾರಾಯಣ್, 50ಚಿತ್ರಗಳ ನಂತರ 51ನೇ ಚಿತ್ರಕ್ಕೆ ಕನ್ನಡಕ್ಕೆ ಬಂದಿರೋದು ಸಂತಸ ತಂದಿದೆ

ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ತಮ್ಮ ಮೊದಲ ಕನ್ನಡ ಚಿತ್ರ ಬಲರಾಮನ ದಿನಗಳು ಸಿನಿಮಾಗೆ ವಿಶೇಷ ಸಂಗೀತ ಸಂಯೋಜಿಸಿ ಭರವಸೆ ನೀಡಿದ್ದಾರೆ. ಇದೀಗ ಆ ಕೆಲಸವನ್ನ ಮುಗಿಸಿದ್ದು, ಡಿಸೆಂಬರ್ ನಲ್ಲಿ ಮೊದಲ ಹಾಡಿನ ಬಿಡುಗಡೆಗೆ ಸಜ್ಜಾಗ್ತಿದೆ
ಆ ದಿನಗಳು ಚಿತ್ರದ ಪಾತ್ರಗಳು ಇಲ್ಲೂ ಮುಂದುವರೆದಿದ್ದು, ಅತುಲ್ ಕುಲಕರ್ಣಿ, ಶರತ್ ಲೋಹಿತಾಶ್ವ ,ಆಶೀಶ್ ವಿದ್ಯಾರ್ಥಿ ಹಾಗೂ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಸೇರಿ ಹಲವು ಪ್ರತಿಭಾನ್ವಿತ ಕಲಾದರ ದಂಡು ಈ ಚಿತ್ರದಲ್ಲಿದೆ.

ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಲ್ಲಿ ತೊಡಗಿಸಿಕೊಂಡಿರೋ ಬಲರಾಮನ ದಿನಗಳು ಚಿತ್ರತಂಡ ಡಿಸೆಂಬರ್ ನಲ್ಲಿ ಚಿತ್ರದ ಮೊದಲ ಹಾಡನ್ನ ಬಿಡುಗಡೆ ಮಾಡೋ ಸನ್ನಾಹದಲ್ಲಿದ್ದು, ಅಲ್ಲಿಂದಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲು ಮುಂದಾಗಿದ್ದು ಬಲರಾಮನ ದಿನಗಳು ಫೆಬ್ರುವರಿ ತಿಂಗಳಲ್ಲಿ ಪ್ರೇಕ್ಷಕರೆದುರಿಗೆ ಬರುವುದು ಖಚಿತವಾಗಿದೆ

