Share Movie Review: ಅನಾಥ ಹುಡುಗರ ಸುತ್ತ ನಡೆಯುವ ಆಕ್ಷನ್ ಚಿತ್ರ “ಶೇರ್”
ಚಿತ್ರ : ಶೇರ್
ನಿರ್ದೇಶಕ : ಪ್ರಸಿದ್ದ್
ತಾರಾಗಣ: ಕಿರಣ್ ರಾಜ್, ಕ್ರಿಸ್ (ಗಿಲ್ಲಿ) ಸುರೇಖ, ತನಿಶಾ ಕುಪ್ಪಂಡ, ಯಶ್ ಶೆಟ್ಟಿ, ಶೋಭರಾಜ್, ಬಲರಾಜವಾಡಿ, ವೀಣಾ ಸುಂದರ್, ಮತ್ತಿತರರು
ರೇಟಿಂಗ್ : *** 3/5
ಅನಾಥ ಹುಡುಗರ ಸುತ್ತ ನಡೆಯುವ ಮಾಸ್ ಮತ್ತು ಆಕ್ಷನ್ ಕಥಾ ಹಂದರ ಒಳಗೊಂಡ ಚಿತ್ರ ಶೇರ್. ಈ ವಾರ ತೆರೆಗೆ ಬಂದಿದೆ. ಚಿತ್ರದ ಕಥಾವಸ್ತು ಗಮನ ಸೆಳೆದಿದೆ.
ಮಾರುಕಟ್ಟೆಯಲ್ಲಿ ನಡೆಯುವ ವ್ಯಾಪಾರ, ವಹಿವಾಟು, ಅಲ್ಲಿನ ಪುಡಿ ರೌಡಿಗಳ ಅಟ್ಟಹಾಸ, ಬದುಕು, ಬವಣೆ, ಪ್ರೀತಿ,ಸ್ನೇಹ,ಕೊಲೆ, ಸುಲಿಗೆ ದ್ವೇಷ ದರ್ಪ ಸೇರಿದಂತೆ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ನಿರ್ದೇಶಕ ಪ್ರಸಿದ್ದ್ ಭಜರ್ ದಸ್ತ್ ಆಕ್ಷನ್ ಚಿತ್ರವನ್ನು ಜನರ ಮುಂದಿಟ್ಟಿದ್ದಾರೆ.
ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ನಟ ಕಿರಣ್ ರಾಜ್ ಅವರನ್ನು ಶೇರ್ ಚಿತ್ರದ ಮೂಲ ಆಕ್ಷನ್ ಹೀರೋ ಆಗಿ ಚಂದನವನಕ್ಕೆ ನಿರ್ದೇಶಕರು ಪರಿಚಯ ಮಾಡಿದ್ದಾರೆ. ಮಾಸ್ ಹಿರೋ ಆಗಿ ಬೆಳೆಯುವ ಎಲ್ಲಾ ಲಕ್ಷಣಗಳನ್ನು ಕಿರಣ್ ರಾಜ್ ತೋರಿಸಿದ್ದಾರೆ.
ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಶಿವು (ಕಿರಣ್ ರಾಜ್) ಮತ್ತು ಆತನ ಸ್ನೇಹಿತರು. ಅದೇ ಜಾಗದಲ್ಲಿ ಪುಡಿರೌಡಿ ಗ್ಯಾಂಗ್ ಮುನ್ನೆಡೆಸುವ ಗಿಲ್ಲಿ (ಕ್ರಿಸ್) ಕೂಲಿ ಕೆಲಸ ಮಾಡಿಕೊಂಡು ಕಾಣದ ವ್ಯಕ್ತಿ ಹೇಳಿದ ಕೆಲಸ ಮಾಡಿಕೊಂಡು ಹೋಗುತ್ತಾನೆ. ಇತ್ತ ಶಿವು ಜನರ ಕಷ್ಟ ಸ್ಪಂದಿಸುವ ಗುಣ ಉಳ್ಳವ, ಮಾರುಕಟ್ಟೆಗೆ ಬರುವ ಭುವನ * ಸುರೇಖ) ಜನರ ನೋವುಗಳಿಗೆ ಸ್ಪಂದಿಸುವ ಶಿವು ಕಂಡು ಮನಸೋಲುತ್ತಾಳೆ.
ಈ ನಡುವೆ ಕೊಲೆ,ಅಪಘಾತ ಸೇರಿದಂತೆ ಇನ್ನಿತರೆ ಗಿಲ್ಲಿಯ ಕೆಲಸ ಪೊಲೀಸರಿಗೂ ತಲೆ ನೋವಾಗುತ್ತದೆ. ಆಗ ಅವರನ್ನು ಸದೆಬಡಿಯಲು ಇನ್ಸ್ ಪೆಕ್ಟರ್ ತನಿಶಾ ಕುಪ್ಪಂಡ ಮುಂದಾಗುತ್ತಾರೆ .ಅದರಲ್ಲಿ ಅವರು ಯಶಸ್ಸು ಗಳಿಸುತ್ತಾರಾ, ಇಲ್ಲ ಮುಂದೇನು. ಕಾಣದ ವ್ಯಕ್ತಿ ಮಾಡಿಸುವ ಕೆಲಸ ಆದರೂ ಏನು, ಭುವನ ನೋಡಲು ಅಮಾಯಕಿಯಂತೆ ಕಂಡರೂ ಆಕೆ ಯಾರು, ಉದ್ದೇಶ ಏನು ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಚೆನ್ನ.
ನಿರ್ದೇಶಕ ಪ್ರಸಿದ್ದ್ ಕುತೂಹಲಕಾರಿ ಕಥೆಯನ್ನು ಮುಂದಿಟ್ಟುಕೊಂಡು ಚಿತ್ರವನ್ನು ಜನರ ಮುಂದೆ ತಂದಿದ್ದಾರೆ. ಜೊತೆಗೆ ಮಂಗಳ ಮುಖಿಯ ಮೂಲಕ ಕಾಣದ ಕೈ ಮೂಲಕ ಕೆಲಸ ಮಾಡಿಸು ದಂಧೆಯನ್ನು ಅನಾವರಣ ಮಾಡಿದ್ದಾರೆ.
ನಾಯಕಿ ಕಿರಣ್ ರಾಜ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ, ಇನ್ನು ಹೊಸ ಪ್ರತಿಬೆ ಗಿಲ್ಲಿ ಕನ್ನಡ ಚಿತ್ರರಂಗದಲ್ಲಿ ಉತ್ತಮ ಕಲಾವಿದ ನಾಗುವ ಭರವಸೆ ಮೂಡಿಸಿದ್ದಾರೆ, ಸುರೇಖ, ತನಿಖಾ ಕುಪ್ಪಂಡ, ಯಶ್ ಶೆಟ್ಟಿ,ಬಲರಾಜವಾಡಿ, ವೀಣಾ ಸುಂದರ್ ಸೇರಿದಂರೆ ಮತ್ತಿತರು ಸಿಕ್ಕ ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

