Lo Naveena Movie Review: ನೆಲ ಮೂಲದ ಭಾಷೆ, ಸೊಗಡಿನ ಅನಾವರಣ “ಲೋ .. ನವೀನ”
ಗ್ರಾಮೀಣ ಸೊಗಡು, ಭಾಷೆ, ಅಲ್ಲಿನ ನೆಲ, ಜಲ, ಗಾಲಿ ಸೇರಿದಂತೆ ಸುಂದರ ಪರಿಸರವನ್ನು ಕಟ್ಟಿಕೊಡುವ ಸಿನಿಮಾಗಳು ಆಗೊಮ್ಮೆ ಹೀಗೊಮ್ಮೆ ತೆರೆಗೆ ಬರುತ್ತಿವೆ, ಅಷ್ಟೇ ಅಲ್ಲ, ನೆಲ ಮೂಲದ ಸೊಗಡನ್ನು ಅನಾವರಣ ಮಾಡುವ ಮೂಲಕ ಜನರ ಮನ ಗೆಲ್ಲುವ ಪ್ರಯತ್ನ ನಡೆಯುತ್ತಿದೆ, ಅಂತಹ ಮತ್ತೊಂದು ಪ್ರಯತ್ನ “ಲೋ ನವೀನ”.
ಇತ್ತೀಚಿನ ಕನ್ನಡ ಚಿತ್ರರಂಗದಲ್ಲಿ ಗೆದ್ದೆತ್ತಿನ ಬಾಲ ಹಿಡಿಯಲಾಗುತ್ತಿದೆ, ಒಂದು ಜಾನರಿನ ಸಿನಿಮಾಗಳು ಯಶಸ್ವಿಯಾದರೆ ಅದರ ಹಿಂದೆ ಜೋತು ಬಿದ್ದು ಹೋಗಲಾಗುತ್ತಿದೆ, ಹಾಗೆ ಹೋದವರೆ ಚಿತ್ರಗಳು ಅಷ್ಟೇ ವೇಗದಲ್ಲಿ ಚಿತ್ರಮಂದಿರದಲ್ಲಿ ಖಾಲಿಯಾಗಿದ್ದನ್ನೂ ಜನ ನೋಡಿದ್ದಾರೆ. ಇಂತಹುದರ ನಡುವೆ ಲೋ.. ನವೀನ ವಿಭಿನ್ನವಾಗಿ ಕಾಣುತ್ತದೆ.
ಗಾಯಕನಾಗಿ ಗಮನ ಸೆಳೆದಿರುವ ನವೀನ್ ಸಜ್ಜು ನಾಯಕನಾಗಿ ಕಾಣಿಸಿಕೊಂಡಿರುವ ಸಿನಿಮಾ ಇದು.ಹೀಗಾಗಿ ಹಳ್ಳಿಯ ಪರಿಸರವನ್ನು ಚಿತ್ರದ ಮೂಲಕ ಮತ್ತೊಮ್ಮೆ ಕಟ್ಟಿಕೊಡಲಾಗಿದೆ. ಹಳ್ಳಿಯ ಬೇರುಗಳನ್ನು ಮರೆತ ಮಂದಿಗೆ, ನಗರೀಕರಣದಿಂದ ಉದ್ಯೋಗ ಹರಿಸಿ ನಗರ ಪಟ್ಟಣ ಸೇರಿದ ಮಂದಿ ತಮ್ಮ ಹಳ್ಳಿಯನ್ನು ನೆನಪು ಮಾಡಿಕೊಡುವ ಚಿತ್ರ ಇದು
ಅದರಲ್ಲಿಯೂ ವಿದೇಶಗಳಲ್ಲಿ ಇದ್ದವರಿಗೆ ಅವರವರ ಹಳ್ಳಿಗಳನ್ನು ಕಣ್ಣ ಮುಂದೆ ಕಟ್ಟಿಕೊಡುವ ಸಿನಿಮಾ ಎಂದರೆ ತಪ್ಪಾಗಲಾರದು, ನಿರ್ಮಾಪಕಿ ಕೀರ್ತಿ ಸ್ವಾಮಿ ಅವರು ಅಮೇರಿಕಾ ವಾಸಿಯಾಗಿರುವ ಹಿನ್ನೆಲೆಯಲ್ಲಿ ತಮ್ಮ ಊರಿನ ಚಿತ್ರವನ್ನು ದೂರದ ಅಮೇರಿಕಾದ ಮಂದಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.ಅದರಲ್ಲಿ ಅವರು ಯಶಸ್ವಿ ಕೂಡ ಆಗಿದ್ದಾರೆ.
ನವೀನ ( ನವೀನ್ ಸಜ್ಜು) ಉಂಡಾಡಿ ಗುಂಡ, ತಾನಾಯಿತು ತನ್ನ ಸ್ನೇಹಿತರಾಯಿತು ಎಂದು ಅವರೊಡನೆ ಕಾಲ ಕಳೆಯುವುದೇ ಆತನ ಕಾಯಕ. ಸೋದರ ಮಾವನ ಮಗಳು ಆಶಾ ( ವರ್ಷ ಗಿರಿಧರ್) ಕಂಡರೆ ಎಲ್ಲಿಲ್ಲದ ಪ್ರೀತಿ, ಹುಡುಗಿಗೆ ಮದುವೆ ಮಾಡಲು ಅಪ್ಪ-ಅಮ್ಮ ಹುಡುರನ್ನು ನೋಡುತ್ತಾರೆ, ಅದು ಆಕೆಗೆ ಇಷ್ಟವಿಲ್ಲ, ಮದುವೆ ಇಷ್ಟವಿಲ್ಲ ನನ್ನನ್ನು ಕರೆದುಕೊಂಡು ಹೋಗು ಎಂದು ದುಂಬಾಲು ಬೀಳ್ತಾಳೆ. ನವೀನನೋ ಆಕೆ ಪ್ರೀತಿಸುತ್ತಾಳೆ ಎಂದು ಮದುವೆಗೆ ಎಲ್ಲಾ ಸಿದ್ದತೆ ಮಾಡಿಕೊಂಡು ಸ್ನೇಹಿತರ ಸಹಕಾರದಿಂದ ಮನೆ ಬಿಟ್ಟು ಓಡಿಹೋಗಲು ಮುಂದಾಗ್ತಾರೆ..
ಅಷ್ಟರಲ್ಲಿ ಎಡವಟ್ಟಾಗುತ್ತದೆ.. ಊರು ಬಿಟ್ಟು ಪಟ್ಟಣ ಸೇರುವ ನವೀನ, ಡಿಲವರಿ ಬಾಯ್ ಆಗಿ, ಬಾರ್ ಸಪ್ಲೇಯರ್ ಆಗಿ ಕೆಲಸಕ್ಕೆ ಸೇರಿಕೊಳ್ತಾನೆ, ಯಾರನ್ನು ನೋಡಬಾರದೆಂಡು ಊರು ಬಿಟ್ಟು ಬಂದಿರುತ್ತಾನೇ ಅವರೆ ನವೀನನ ಕೆಲಸ ಮಾಡುವ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಮುಂದೇನಾಗುತ್ತದೆ,
ನವೀನ, ಸೋದರ ಮಾವನ ಮಗಳು ಆಶಾಳನ್ನು ಮದುವೆ ಆಗ್ತಾನಾ, ಇಲ್ಲ ಆಕೆ ಏನು ಮಾಡ್ತಾಳೆ ಎನ್ನುವ ಕುತೂಹಲ ಕಾರಿ ಸಂಗತಿಯನ್ನು ಚಿತ್ರ ಒಳಗೊಂಡಿದೆ,
ಮುದ್ದಾದ ಪ್ರೇಮಕತೆಯ ಜೊತೆಗೆ ಸ್ನೇಹಿತರ ಕಿತಾಪತಿ ತರಲೆ ತುಂಟಾಟದಿಂದ ಚಿತ್ರದ ಮೊದಲರ್ಧ ಸಾಗುವುದೇ ಗೊತ್ತಾಗುತ್ತಿಲ್ಲ ದ್ವಿತೀಯಾರ್ದದಲ್ಲಿ ಒಂದಷ್ಟು ತಿರುವುಗಳು ಇರುವುದರಿಂದ ಪ್ರೇಕ್ಷಕನ ತಲೆಗೆ ಹುಳ ಬಿಟ್ಟಿದ್ದಾರೆ. ಮೊದಲರ್ಧ ಸಾಗಿದಂತೆ ದ್ವಿತೀಯಾರ್ಧವೂ ಚಿತ್ರ ಸಾಗಿದ್ದರೂ ಅತ್ತುತ್ತಮ ಚಿತ್ರವಾಗುತ್ತಿತ್ತ, ಹಾಗಂತ ಚಿತ್ರವನ್ನು ಕಡೆಗಣಿಸುವಂತಿಲ್ಲ, ಪಕ್ಕಾ ಮನರಂಜನೆಯ ರಸದೌತಣ.
ನಾಯಕ ನವೀನ್ ಸಜ್ಜು ಹಾವುದೇ ಬಿಲ್ಡಡ್ ಇಲ್ಲದೆ ಸಹಜವಾಗಿ ಅಭಿನಯಿಸಿದ್ದಾರೆ, ಚಿತ್ರ ಅಲ್ಲಲ್ಲಿ ರಾಜಾಹುಲಿ, ಕಿರಾತಕ ಚಿತ್ರಗಳನ್ನು ನೆನಪು ಮಾಡುತ್ತದೆ. ನಾಯಕಿ ವರ್ಷ ಗಿರಿಧರ್ ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಅದ್ಬುತ ಪ್ರತಿಭೆ, ಉಳಿದಂತೆ ಸ್ನೇಹಿತರ ಪಾತ್ರದಲ್ಲಿ ನಟಿಸಿರುವ ಹುಡುಗರಿಗೂ ಚಿತ್ರರಂಗದಲ್ಲಿ ಒಳ್ಳೆಯ ಭವಿಷ್ಯವಿದೆ.
ಹಾಡು, ಗ್ರಾಮೀಣ ಪರಿಸರ ಜನರನ್ನು ತಮ್ಮ ಹಳ್ಳಿಗೆ ಕರೆದೊಯ್ಯುವಂತೆ ಮಾಡಿದ್ದಾರೆ ನಿರ್ದೇಶಕ ಧನುಂದಾರಿ ಪವನ್. ಈ ಮೂಲಕ ಕನ್ನಡಕ್ಕೆ ಸಧಬಿರುಚಿಯ ಚಿತ್ರ ನೀಡಿದ್ದಾರೆ. ಅಪೂರ್ವಶ್ರೀ, ಪ್ರಕಾಶ್ ತುಮಿನಾಡ್ ಸೇರಿದಂತೆ ಇನ್ನಿತರೆ ಕಲಾವಿದರು ಗಮನ ಸೆಳೆದಿದ್ದಾರೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

