Another new hero enters Kannada through “Gharga”

“ಘಾರ್ಗ” ಮೂಲಕ ಕನ್ನಡಕ್ಕೆ ಮತ್ತೊಬ್ಬ ನವ ನಾಯಕನ ಪ್ರವೇಶ - CineNewsKannada.com

“ಘಾರ್ಗ” ಮೂಲಕ ಕನ್ನಡಕ್ಕೆ ಮತ್ತೊಬ್ಬ ನವ ನಾಯಕನ ಪ್ರವೇಶ

ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕರು ಆಗಾಗ ಪ್ರವೇಶ ಮಾಡುತ್ತಿದ್ದಾರೆ, ಇದೀಗ ಮತ್ತೊಬ್ಬ ನವ ನಾಯಕನ ಪ್ರವೇಶವಾಗಿದೆ. ಅದುವೇ ಅರುಣ್ ರಾಮ್ ಪ್ರಸಾದ್. ಹಿರಿಯ ನಿರ್ಮಾಪಕ,ಅಶ್ವಿನಿ ಆಡಿಯೋ ಕಂಪನಿ ಮಾಲಿಕ ಅಶ್ವಿನಿ ರಾಮ್ ಪ್ರಸಾದ್ ಪುತ್ರ.

ಹಿರಿಯ ನಟ ಶಿವರಾಜ್‍ಕುಮಾರ್ ಅಭಿನಯದ ಜೋಗಿ, ಪ್ರೇಮ್ ನಟನೆ, ನಿರ್ದೇಶನದ ಪ್ರೀತಿ ಏಕೆ ಭೂಮಿ ಮೇಲಿದೆ ಹೀಗೆ ಯಶಸ್ವಿ ಚಿತ್ರಗಳನ್ನೇ ನಿರ್ಮಿಸಿದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್‍ಪ್ರಸಾದ್‍ರನ್ನು ನಟನೆಯ ಘಾರ್ಗ ಚಿತ್ರದ ‘ನೀನು ನನಗೆ’ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಇದೊಂದು ಅಡ್ವೆಂಚರಸ್ ಡ್ರಾಮಾ ಕಥಾನಕವಾಗಿದ್ದು, ಚಿತ್ರದಲ್ಲಿ ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ. ಶಶಿಧರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಫಾರ್ಗಾ ಊರಿನ ಹೆಸರು. ನಾಯಕಿಯಾಗಿ ರೆಹಾನ ಕಾಣಿಸಿಕೊಂಡಿದ್ದಾರೆ.

ನಿರ್ಮಾಪಕ ರಾಮ್‍ಪ್ರಸಾದ್ ಮಾತನಾಡಿ ಚಿತ್ರರಂಗದಲ್ಲಿ 40 ವರ್ಷ ಆಡಿಯೋ ಕಂಪನಿ ಮಾಲೀಕ, ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ, ಈಗ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇನೆ. 4 ವರ್ಷಗಳ ಹಿಂದೆಯೇ ಶುರು ಮಾಡಿದ್ದೆವು, ಹಲವಾರು ಕಾರಣಗಳಿಂದ ತಡವಾಯಿತು,ವಿಭಿನ್ನ ಜಾನರ್ ಚಿತ್ರ, ನಾಯಕ ಇಲ್ಲಿ 3 ಗೆಟಪ್‍ಗಳಲ್ಲಿ ಕಾಣಿಸಿಕೊಳ್ಳುತ್ತಾನೆ ಎಂದರು

ಚಿಕ್ಕಮಗಳೂರಿನಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡುವಾಗ ಸೆಟ್ ಸುಟ್ಟು ಸ್ವಲ್ಪ ತೊಂದರೆಯಾಯಿತು, ನಿರ್ದೇಶಕ ಶಶಿಧರ್ ತುಂಬಾ ಚೆನ್ನಾಗಿ ಕಥೆ, ಚಿತ್ರಕಥೆ ಮಾಡಿದ್ದಾರೆ, ಚಿತ್ರವೀಗ ಬಿಡುಗಡೆಗೆ ಸಿದ್ದವಿದ್ದು, ಜನವರಿ ವೇಳೆಗೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಎನ್. ಕುಮಾರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು

ನಿರ್ದೇಶಕ ಶಶಿಧರ್ ಮಾತನಾಡಿ ಕೋವಿಡ್ ಸೇರಿ ಹಲವಾರು ಕಾರಣಗಳಿಂದ ಮುಂದೆ ಹೋಗಬೇಕಾಯ್ತು, ಅಡ್ವೆಂಚರಸ್ ಡ್ರಾಮಾದಲ್ಲಿ ಫಿಕ್ಷನಲ್ ಕಥೆಯಿದೆ, ಹಾರರ್, ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿವೆ, ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಿದ್ದೇವೆ, ಎಂದು ಹೇಳಿದರು,

ನಾಯಕ ಅರುಣ್ ರಾಮ್‍ಪ್ರಸಾದ್ ಮಾತನಾಡಿ ನಟನೆಗೆ ಬೇಕಾದ ಎಲ್ಲ ತಯಾರಿಯನ್ನು ಮಾಡಿಕೊಂಡೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ನನಗೆ ಇಡೀ ಸಿನಿಮಾ ಒಂದು ರೀತಿ ಚಾಲೆಂಜಿಂಗ್ ಆಗಿತ್ತು, ತೂಕವನ್ನು ಕಡಿಮೆ, ಹೆಚ್ಚು ಮಾಡಿಕೊಳ್ಳಬೇಕಿತ್ತು, ಪಾತ್ರಕ್ಕೆ ರೈಟರ್, ಅಂಡರ್‍ವರ್ಡ್ಲ್ ಹೀಗೆ ಹಲವಾರು ಶೇಡ್ಸ್ ಇದೆ, ಇದೊಂದು ಹಾರರ್, ಕ್ರೈಮ್ ಥ್ರಿಲ್ಲರ್ ಸಬ್ಜೆಕ್ಟ್ ಆಗಿದೆ ಎಂದರು.

ವಿತರಕ ಎನ್.ಕುಮಾರ್ ಮಾತನಾಡಿ ಹೊಸ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin