ಅಪ್ಪ-ಮಕ್ಕಳ ಬಾಂಧವ್ಯದ ಕಥನ “ಆಲ್ಫಾ #ಮೆನ್ ಲವ್ ವೈಲೆನ್ಸ್”
ಮಾಲೂರಿನ ಹೇಮಂತ್ ಕುಮಾರ್ “ಆಲ್ಫಾ #ಮೆನ್ ಲವ್ ವೈಲೆನ್ಸ್” ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಆನಂದ್ ಕುಮಾರ್ ನಿರ್ಮಿಸಿರುವ ಚಿತ್ರವನ್ನು ” ಗೀತಾ” ಹಾಗೂ “ಗುರುದೇವ ಹೊಯ್ಸಳ” ಚಿತ್ರಗಳ ನಿರ್ದೇಶಕ ವಿಜಯ್ ನಿರ್ದೇಶಿಸಿದ್ದಾರೆ. ಟೀಸರ್ ಬಿಡುಗಡೆ ಬಿಡುಗಡೆಯಾಗಿದೆ

ನಿರ್ದೇಶಕ ವಿಜಯ್ ಮಾತನಾಡಿ ಮಾರ್ಚ್ ನಲ್ಲಿ ಚಿತ್ರ ಪ್ರಾರಂಭವಾಗಿ ಈಗ ಮುಕ್ತಾಯ ಹಂತದಲ್ಲಿದೆ. ಫೆಬ್ರವರಿ ವೇಳೆಗೆ ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ಆಕ್ಷನ್ ಥ್ರಿಲ್ಲರ್ ಚಿತ್ರ ಮಾತ್ರವಲ್ಲ. ಸೆಂಟಿಮೆಂಟ್ ಸೇರಿದಂತೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ. ಇದು ಮೂರು ಜನ ಅಪ್ಪಂದಿರ ಹಾಗೂ ಮೂರು ಜನ ಮಕ್ಕಳ ಸುತ್ತ ನಡೆಯುವ ಕಥೆ. ಅಪ್ಪನ ತಂಟೆಗೆ ಯಾರಾದರೂ ಬಂದರೆ, ಮಕ್ಕಳ “ಪ್ರತಿಕಾರ” ಹೇಗಿರುತ್ತದೆ ಎಂದು ತಿಳಿಸುವ ಕಥೆಯೂ ಹೌದು ಎಂದರು
ಮೊದಲ ಬಾರಿಗೆ ಹೇಮಂತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕೇರಳ ಮೂಲದ ಗೋಪಿಕಾ ಸುರೇಶ್ ಹಾಗೂ ಆಯನಾ ಚಿತ್ರದ ನಾಯಕಿಯರು. “ಬಿಗ್ ಬಾಸ್” ಖ್ಯಾತಿಯ ಕಾರ್ತಿಕ್ ಮಹೇಶ್ ಕೂಡ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ. ಅವಿನಾಶ್, ಅಚ್ಯುತಕುಮಾರ್, ಮಾನಸಿ ಸುಧೀರ್, ರಮೇಶ್ ಇಂದಿರಾ, ಬಾಲು ನಾಗೇಂದ್ರ, ವಿನಯ್ ಬಿದ್ದಪ್ಪ, ಮಹಾಂತೇಶ್, ರಾಘು ಶಿವಮೊಗ್ಗ ಮುಂತಾದ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ಜೆ.ಅನೂಪ್ ಸೀಳಿನ್ ಸಂಗೀತ ಕಾರ್ತಿಕ್ ಛಾಯಾಗ್ರಹಣ ಚಿತ್ರಕ್ಕಿದೆ ಎಂದರು

ನಾಯಕ ಹೇಮಂತ್ ಕುಮಾರ್ ಮಾತನಾಡಿ ನಾಯಕನಾಗಬೇಕೆಂಬುದು ಬಹಳ ದಿನಗಳ ಕನಸು. ಪೂರ್ವ ತಯಾರಿ ಇಲ್ಲದೆ ನಟಿಸುವುದು ಬೇಡ ಅಂದುಕೊಂಡು ನಾಯಕನಾಗಲೂ ಬೇಕಾದ ಎಲ್ಲಾ ತರಬೇತಿ ಪಡೆದು ಚಿತ್ರದಲ್ಲಿ ನಟಿಸಿದ್ದೇನೆ. ತಂದೆ ಆನಂದ್ ಕುಮಾರ್ ಚಿತ್ರದ ನಿರ್ಮಾಪಕರು. ಫೆಬ್ರವರಿ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು
ನಟ ಕಾರ್ತಿಕ್ ಮಹೇಶ್ ಮಾತನಾಡಿ ಚಿತ್ರದಲ್ಲಿ ಈವರೆಗೂ ಮಾಡಿರದ ವಿಶೇಷ ಹಾಗೂ ವಿಭಿನ್ನ ಪಾತ್ರ ಮಾಡಿದ್ದೇನೆ. ಒಂದೊಳ್ಳೆ ತಂಡದ ಜೊತೆಗೆ ಕೆಲಸ ಮಾಡಿದ್ದು ಖುಷಿಯಾಗಿದೆ ಎಂದು ತಿಳಿಸಿದರು.
ನಾಯಕಿ ಆಯನಾ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವುದಾಗಿ ಹೇಳಿದರೆ ಮತ್ತೊಬ್ಬ ನಾಯಕಿ ಗೋಪಿಕ ಸುರೇಶ್. ನನ್ನದು ನಾಯಕನ ಪ್ರೇಯಸಿಯ ಪಾತ್ರ ಎಂದರು

ಚಿತ್ರದಲ್ಲಿ ನಟಿಸಿರುವ ಬಾಲು ನಾಗೇಂದ್ರ, ರಾಘು ಶಿವಮೊಗ್ಗ, ಮಹಾಂತೇಶ್, ವಿನಯ್ ಬಿದ್ದಪ್ಪ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಹಾಡುಗಳ ಬಗ್ಗೆ ಅನೂಪ್ ಸೀಳಿನ್, ಸಂಭಾಷಣೆ ಕುರಿತು ಮಾಸ್ತಿ ಮಾಹಿತಿ ನೀಡಿದರು. ಛಾಯಾಗ್ರಾಹಕ ಕಾರ್ತಿಕ್ , ಕಲಾ ನಿರ್ದೇಶಕ ಅಮರ್ ಹಾಗೂ ನಿರ್ಮಾಣ ನಿರ್ವಾಹಕ ಚಂಪಕಧಾಮ ಬಾಬು ಮುಂತಾದವರಿದ್ದರು.

