ಕಾಮಿಡಿ ನಟ ಗಿಲ್ಲಿ ಅಭಿನಯದ “ಸರ್ಕಾರಿ ಶಾಲೆ-ಎಚ್ 8” ಚಿತ್ರದ ಪೋಸ್ಟರ್ ಬಿಡುಗಡೆ
ಕಾಮಿಡಿಯ ಮೂಲಕವೇ ಗಮನ ಸೆಳೆದಿರುವ ಗಿಲ್ಲಿ ನಟ ಈಗ ಬಿಗ್ ಬಾಸ್‍ನಲ್ಲಿದ್ದಾರೆ, ಅವರು ನಟಿಸಿರುವ “ಸರ್ಕಾರಿ ಶಾಲೆ-ಎಚ್ 8” ಚಿತ್ರದ ಪೆÇೀಸ್ಟರ್ ಬಿಡುಗಡೆ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಶೀರ್ಷಿಕೆಯಲ್ಲೇ ಕುತೂಹಲ ಹುಟ್ಟು ಹಾಕಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವೀಗ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಚಿತ್ರಕ್ಕೆ ಗುಣ ಹರಿಯಬ್ಬೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ತೇಜಸ್ವಿನಿ ಎಸ್. ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರದ ನೂತನ ಪೋಸ್ಟರ್ ಅನ್ನು ಗಿಲ್ಲಿ ನಟನ ಊರಾದ ಮಳವಳ್ಳಿ ತಾಲೂಕಿನ ದಡದಪುರದಲ್ಲಿರುವ ಗಿಲ್ಲಿ ನಟ ಓದಿದ ಸರ್ಕಾರಿ ಶಾಲೆಯಲ್ಲಿ ಆತನ ತಂದೆ, ತಾಯಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ
ಆರಂಭದಲ್ಲಿ ಕುತೂಹಲ ಕೆರಳಿಸುತ್ತ ಸಾಗುವ ಚಿತ್ರದ ಕಥೆ ಒಂದು ವಿಗ್ರಹದ ಮೇಲೆ ನಿಂತಿರುತ್ತೆ . ಚಿತ್ರದ ಕಥೆ 4 ಕಡೆ ಸಾಗುತ್ತದೆ. ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ. ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ಸ್ ಹಾಗೂ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. 2026ರ ಫೆಬ್ರವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.

ವಿಜೇತ್ ಮಂಜಯ್ಯ ಸಂಗೀತ ಸಂಯೋಜನೆಯ ಚಿತ್ರದಲ್ಲಿ 3 ಹಾಡುಗಳಿದ್ದು, ಹಾಸ್ಯನಟ ಶರಣ್ ಹಾಗೂ ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್ ಮೂರ್ತಿ ಅವರ ಕ್ಯಾಮೆರಾ ವರ್ಕ್, ರವಿತೇಜ ಸಿ.ಹೆಚ್. ಅವರ ಸಂಕಲನ ಈ ಚಿತ್ರಕ್ಕಿದೆ.
ಚಿತ್ರದಲ್ಲಿ ಗಿಲ್ಲಿ ನಟ, ಗುಣ ಹರಿಯಬ್ಬೆ, ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿದ್ದು, ಉಳಿದಂತೆ ರಾಘವೇಂದ್ರ ರಾವ್, ಕುಮಾರ್, ಸುಚೇಂದ್ರ ಪ್ರಸಾದ್ , ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿಪುಡಿ, ಜೋತಿರಾಜ್, ನಮ್ರತಾ ನಟಿಸಿದ್ದಾರೆ.


