“ಪತ್ತೇದಾರಿ” ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಗಣ್ಯರು
ಮೊಹಮ್ಮದ್ ಅತೀಕ್ ನಿರ್ಮಾಣ ಮಾಡುತ್ತಿರುವ, ಶ್ರೀನಿವಾಸ್ ಜಯರಾಮ್ ರಚನೆ ಮತ್ತು ನಿರ್ದೇಶನದ ಹಾಗೂ ಕಿಝಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸುತ್ತಿರುವ “ಪತ್ತೇದಾರಿ” ಚಿತ್ರದ ಪೆÇೀಸ್ಟರ್ ಬಿಡುಗಡೆಯಾಗಿದೆ

ಕಲಾವಿದರಾದ ಮಯೂರ್ ಪಟೇಲ್, “ಶಿಷ್ಯ” ದೀಪಕ್, ಕಾಕ್ರೋಜ್ ಸುಧೀ, ಚೆಲುವರಾಜ್, ಅರವಿಂದ್, ಗಿರೀಶ್ ಜತ್ತಿ, ನಟಿ “ಭೀಮ’ ಖ್ಯಾತಿಯ ಪ್ರಿಯ, ” ಕೆ.ಜಿ.ಎಫ್” ರೆಡ್ಡಿ, ವಿಕ್ಟರಿ ವಾಸು, ನಿರ್ದೇಶಕ ಸಹನಮೂರ್ತಿ ಸೇರಿದಂತೆ ಅನೇಕ ಗಣ್ಯರು ಪೆÇೀಸ್ಟರ್ ಅನಾವರಣ ಮಾಡಿ ಹಾರೈಸಿದರು.
ನಿರ್ದೇಶಕ ಶ್ರೀನಿವಾಸ್ ಜಯರಾಮ್ ಮಾತನಾಡಿ “ಗಜಪಡೆ” ಚಿತ್ರದ ನಂತರ ನಿರ್ದೇಶಿಸುತ್ತಿರುವ ಎರಡನೇ ಚಿತ್ರ “ಪತ್ತೇದಾರಿ”. ಶೀರ್ಷೀಕೆಯೇ ತಿಳಿಸುವಂತೆ ಇದೊಂದು ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಕ್ರೈಮ್ ಥ್ರಿಲ್ಲರ್ ಚಿತ್ರಗಳು ಸಾಕಷ್ಟು ಬಂದಿದೆಯಾದರೂ, ಚಿತ್ರಕಥೆ ಬೇರೆ ರೀತಿಯಲ್ಲಿರುತ್ತದೆ. ಸಾಕಷ್ಟು ಈ ರೀತಿಯ ಸಿನಿಮಾಗಳನ್ನು ನೋಡಿ, ಆ ಸ್ಪೂರ್ತಿಯಿಂದ ಈ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದೇನೆ. ಇನ್ನೂ ಕಿಝಾರ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಎಂದರು
ಕಿಝಾರ್ ಜೊತೆಗೆ ಗಿರಿ, ರೂಪ ಹಾಗೂ ಸಿದ್ದೇಶ್ ಪ್ರಮುಖಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಮುಂದಿನ ತಿಂಗಳು ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರಿನಲ್ಲೇ ಹೆಚ್ಚಿನ ಚಿತ್ರೀಕರಣ ನಡೆಯಲಿದೆ ಎಂದು ಹೇಳಿದ್ದಾರೆ

ನಾಯಕ ಕಿಝಾರ್ ಮಾತನಾಡಿ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ಪಾತ್ರ ಕೂಡ ಚೆನ್ನಾಗಿದೆ. ಯಾವುದೇ ನಟನಾ ಶಾಲೆಯಲ್ಲಿ ಕಲಿತಿಲ್ಲ. ರಾಜಕುಮಾರ್, ವಿಷ್ಣುವರ್ಧನ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್ ಮುಂತಾದ ಕನ್ನಡ ನಟರ ಚಿತ್ರಗಳನ್ನು ನೋಡಿ ನಟನೆ ಕಲಿತಿದ್ದೇನೆ. ಅವರೆ ನನಗೆ ಸ್ಪೂರ್ತಿ ಎಂದರು
.
ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿರುವ ನಟ ಸಿದ್ದೇಶ್ ಮಾತನಾಡಿ, ನಿರ್ದೇಶಕರು ಒಂದೊಳ್ಳೆ ಕಥೆ ಬರೆದಿದ್ದಾರೆ. ಎ.ಕೆ. ಪ್ರೊಡಕ್ಷನ್ಸ್ ಅದ್ದೂರಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು.
ಚಿತ್ರದ ಶೀರ್ಷಿಕೆಯೇ ತಿಳಿಸುವಂತೆ ಇದೊಂದು ಕ್ರೈಮ್ ಥ್ರಿಲ್ಲರ್ ಕಥೆ. ಕಥೆ ಹಾಗೂ ನನ್ನ ಪಾತ್ರ ಎರಡು ಚೆನ್ನಾಗಿದೆ ಎಂದು ನಟಿ ರೂಪ ಹೇಳಿದರು.
ಈ ಹಿಂದೆ ನಿರ್ದೇಶಕರು ಹಾಗೂ ನಾಯಕರ ಜೊತೆಗೆ ಒಂದು ಚಿತ್ರದಲ್ಲಿ ಅಭಿನಯಿಸಿದ್ದೆ. ಈ ಚಿತ್ರದಲ್ಲೂ ನಟಿಸುತ್ತಿದ್ದೇನೆ ಎಂದು ನಟ ಕಾಕ್ರೋಜ್ ಸುಧೀ ತಿಳಿಸಿದರು.


