ಸಂಗೀತ ಲೋಕದಲ್ಲಿ ಐವತ್ತು ಸಂವತ್ಸರ ಪೂರ್ಣಗೊಳಿಸಿದ ಗಾನಕೋಗಿಲೆ ಸಂಗೀತ ಕಟ್ಟಿ ಕಲಕರ್ಣಿ
ಅಮೇರಿಕ ಅಮೇರಿಕಾದ ಚಿತ್ರದ “ನೂರು ಜನ್ಮಕು,, ನೂರಾರು ಜನ್ಮಕೂ,. ನಾಗಮಂಡಲದ “ಕಂಬದ ಮ್ಯಾಲಿನ ಗೊಂಬೆಯೇ..” ಒಡಹುಟ್ಟಿದವರು ಸಿನಿಮಾದ “ನಾನು ನಾನು ನೀನು..”, ಮಂಡ್ಯದ ಗಂಡು ಚಿತ್ರದ “ಮಂಡ್ಯದ ಗಂಡು”,, ಕಲ್ಯಾಣ ಮಂಪಟದ “ಈ ಭೂಮಿ ತಾಯಾಣೆ..” ಇದೀಗ ಹುಲಿಬೀರ ಚಿತ್ರದ “ಬಿರಬಿಸಿಲನ್ಯಾಗ ಹುಟ್ಟಿ ಬಂದ ಹುಲಿಬೀರ..” ಹೀಗೆ ವಿಭಿನ್ನ ಹಾಡುಗಳಿಗೆ ಧ್ವನಿಯಾದರು ಹಿರಿಯ ಗಾಯಕಿ ಗಾನಕೋಗಿಲೆ ಸಂಗೀತಕಟ್ಟಿ ಕುಲಕರ್ಣಿ..

ಪ್ರಖ್ಯಾತ ಹಿಂದೂಸ್ತಾನಿ ಮತ್ತು ಹಿನ್ನೆಲೆ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಸಂಗೀತ ಲೋಕದಲ್ಲಿ 50 ವರ್ಷಗಳ ಅದ್ಭುತ ಪಯಣ ಪೂರ್ಣಗೊಳಿಸಿದ್ದಾರೆ. ತಮ್ಮ 4ನೇ ವಯಸ್ಸಿನಲ್ಲಿಯೇ ಮೊದಲ ಬಾರಿಗೆ ಸಾರ್ವಜನಿಕ ಪ್ರದರ್ಶನ ನೀಡುವ ಮೂಲಕ ಸಂಗೀತ ರಂಗಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳ ನಿರಂತರವಾಗಿ ಸಂಗೀತ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ
ಸಿನಿಮಾ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಭಾವಗೀತೆ, ಭಕ್ತಿಗೀತೆ, ಜಾನಪದ ಮತ್ತು ಚಲನಚಿತ್ರ ಗೀತೆಗಳನ್ನು ಒಳಗೊಂಡಂತೆ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ತಂದೆಯಿಂದ ಆರಂಭಿಕ ಸಂಗೀತದ ಪಾಠ ಕಲಿತ ಸಂಗೀತ ಕಟ್ಟಿ ಕುಲಕರ್ಣಿ ಅವರು ಶ್ರೀ ಶೇಷಗಿರಿ ದಂಡಾಪುರ, ಪಂಡಿತ್ ಚಂದ್ರಶೇಖರ ಪುರಾಣಿಕಮಠ ಹಾಗೂ ಪದ್ಮಭೂಷಣ ಪಂಡಿತ್ ಬಸವರಾಜ ರಾಜಗುರು ಅವರ ಬಳಿ ಉನ್ನತ ತರಬೇತಿ ಪಡೆದಿದ್ದಾರೆ. ಭಾವಗೀತೆ, ಚಿತ್ರಗೀತೆ ಮತ್ತು ಭಕ್ತಿಗೀತೆಗಳ ಮೂಲಕ ನಾಡಿನಾದ್ಯಂತ ಮನೆಮಾತಾಗಿದ್ದಾರೆ.

‘ಅಮೆರಿಕಾ ಅಮೆರಿಕಾ’, ‘ನಾಗಮಂಡಲ’ ಸೇರಿದಂತೆ ಹಲವು ಜನಪ್ರಿಯ ಚಲನಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ
ಸಂಗೀತ ನಿರ್ದೇಶಕರಾದ ಹಂಸಲೇಖ, ಸಿ. ಅಶ್ವತ್ಥ್, ಎಂ. ಎಂ. ಕೀರವಾಣಿ ಮುಂತಾದ ಪ್ರಮುಖ ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿ ಹಿರಿಮೆ ಹೊಂದಿದ್ದಾರೆ, ಸುದೀರ್ಘ ಕಲಾ ಸೇವೆ ಗುರುತಿಸಿ ರಾಜ್ಯ ಸರ್ಕಾರ 2006 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ
ಅಮೇರಿಕಾ ಅಮೇರಿಕಾ ಚಿತ್ರದ ನೂರು ಜನ್ಮಕು ನೂರು ಜನ್ಮಕೂ ಹಾಡು ಸಂಗೀತ ಕಟ್ಟಿ ಕುಲಕರ್ಣಿ ಅವರ ವೃತ್ತಿಜೀವನದ ಅತ್ಯಂತ ದೊಡ್ಡ ಮೈಲಿಗಲ್ಲಿನ ಹಾಡು. ಗಾಯಕ ರಾಜೇಶ್ ಕೃಷ್ಣನ್ ಜತೆಗೂಡಿ ಹಾಡಿದ ಪ್ರೀತಿಯ ಆಳವನ್ನು ಬಿಂಬಿಸುವ ಮಧುರ ಗೀತೆಗೆ ಇಂದಿಗೂ ಅಪಾರ ಅಭಿಮಾನಿಗಳಿದ್ದಾರೆ. ಜೊತೆಗೆ ನಾಗಮಂಡಲ ಚಿತ್ರದ ಕಂಬದ ಮ್ಯಾಲಿನ ಗೊಂಬೆಯೇ ಹಾಡು ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಜಾನಪದ ಶೈಲಿಯ ಹಾಡು ಅತ್ಯಂತ ಜನಪ್ರಿಯವಾಗಿದೆ.

ಡಾ. ರಾಜ್‍ಕುಮಾರ್ ಅಭಿನಯದ “ಒಡಹುಟ್ಟಿದವರು” ಚಿತ್ರದ ನಾನು ನಾನು ನೀನು ಹಾಡನ್ನು ಚಿತ್ರದಲ್ಲಿ ಡಾ ಬಾಲಸುಬ್ರಮಣ್ಯಂ ಅವರೊಂದಿಗೆ ಹಾಡಿದ ಯುಗಳ ಗೀತೆ, ಅಂಬರೀಷ್ ಅಭಿನಯದ ಮಂಡ್ಯದ ಗಂಡು ಚಿತ್ರದ ಮಂಡ್ಯದ ಗಂಡು ಚಿತ್ರದ ಈ ಮಾಸ್ ಮತ್ತು ಜೋಶ್ ಇರುವ ಹಾಡಿಗೆ ಬಾಲಸುಬ್ರಮಣ್ಯ ಜೊತೆ ಧ್ವನಿಯಾಗಿದ್ದಾರೆ. ಕಲ್ಯಾಣ ಮಂಟಪ ಚಿತ್ರದ ‘ಈ ಭೂಮಿ ತಾಯಾಣೆ ಹಾಡನ್ನು ರಾಘವೇಂದ್ರ ರಾಜ್‍ಕುಮಾರ್ ಜೊತೆಗೂಡಿ ಹಾಡಿದ ಅತ್ಯಂತ ಭಾವನಾತ್ಮಕ ಗೀತೆಗೆ ಸ್ವರಸಂಯೋಜನೆ ನೀಡಿದ್ದಾರೆ
ಇದರ ಜೊತೆಗೆ ಹಿರಿಯ ಗಾಯಕ ಸಂಗೀತ ಸಂಯೋಜಕ ಸಿ ಅಶ್ವತ್ಥ್ ಮತ್ತು ಇತರ ಸಂಗೀತ ಸಂಯೋಜನೆಯಲ್ಲಿ ನಿರ್ದೇಶನದಲ್ಲಿ ಇವರು ಹಾಡಿರುವ ಭಾವಗೀತೆಗಳು ಕನ್ನಡ ಸುಗಮ ಸಂಗೀತ ರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಮುಗಿಲ ಮಾರಿಗೆ ಮುಗಿಲ ಮಾರಿಗೆ, ವರಕವಿ ದ.ರಾ. ಬೇಂದ್ರೆ ಅವರ ಸಾಹಿತ್ಯ ಮತ್ತು ಸಿ. ಅಶ್ವತ್ಥ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಅತ್ಯಂತ ಅದ್ಭುತ ವಿರಹ ಗೀತೆ. ಈ ಹಸಿರು ಸಿರಿಯಲ್ಲಿ.. ಪ್ರಕೃತಿಯ ಸೌಂದರ್ಯವನ್ನು ವರ್ಣಿಸುವ ಈ ಗೀತೆ ಪ್ರಕೃತಿ ಪ್ರೇಮಿಗಳ ನೆಚ್ಚಿನ ಹಾಡಾಗಿದೆ.

ಘಮ ಘಮ… ದ.ರಾ. ಬೇಂದ್ರೆ ಅವರ ಕವಿತೆಗೆ ಜೀವ ತುಂಬಿದ ಮತ್ತೊಂದು ಸೂಪರ್ ಹಿಟ್ ಭಾವಗೀತೆ. ಓ ಬೆಳಕೇ ಓ ಬೆಳಕೇ… ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರ ಸಾಹಿತ್ಯದ, ಅತ್ಯಂತ ಮಧುರ ಗೀತೆ. ಬೃಂದಾವನದಲ್ಲಿ ಆಡುತಿಹನು: ಶ್ರೀಕೃಷ್ಣನ ಲೀಲೆಗಳನ್ನು ವರ್ಣಿಸುವ ಅತ್ಯಂತ ಆಹ್ಲಾದಕರ ಗೀತೆಗೆ ಸಂಗೀತ ಕಟ್ಟಿ ಧ್ವನಿಯಾಗಿದ್ದಾರೆ
ಇಂದು ಶುಕ್ರವಾರ ಶುಭ ಶುಕ್ರವಾರ,, ಲಕ್ಷ್ಮೀ ದೇವಿಯ ಆರಾಧನೆಗೆ ಪ್ರತಿ ಮನೆಯಲ್ಲೂ ಇಂದಿಗೂ ಮೊಳಗುವ ಅತ್ಯಂತ ಪ್ರಸಿದ್ಧ ಭಕ್ತಿಗೀತೆ. ಶ್ರಾವಣ ಸಂಪತ್ತು… ವರಮಹಾಲಕ್ಷ್ಮಿ ಪೂಜೆಯ ಸಂದರ್ಭದಲ್ಲಿ ಹಳೇ ಮೈಸೂರು ಭಾಗದಲ್ಲಿ ಹಾಗೂ ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗಿರುವ ಹಾಡು. ಸದ್ಗುರು ಸಾಕಿದ ಒಡಲು.. ಸಂತ ಶಿಶುನಾಳ ಶರೀಫರ ತತ್ವಪದವನ್ನು ಅತ್ಯಂತ ಭಾವಪೂರ್ಣವಾಗಿ ಹಾಡಿದ್ದಾರೆ. ಐಗಿರಿ ನಂದಿನಿ ಮತ್ತು ಸರ್ವಮಂಗಳ ಮಾಂಗಲ್ಯೇ. ಇವರ ಧ್ವನಿಯಲ್ಲಿ ಮೂಡಿಬಂದ ದುರ್ಗಾ ದೇವಿಯ ಸ್ತೋತ್ರಗಳು ಭಕ್ತರ ಮನ ಗೆದ್ದಿವೆ.

ಸಂಗೀತ ಲೋಕದಲ್ಲಿ ಐವತ್ತು ವರ್ಷ ಪೂರ್ಣಗೊಳಿಸಿರುವ ಸಂಗೀತ ಕಟ್ಟಿ ಕುಲಕರ್ಣಿ ಅವರು ಹಾಡುಗಾರಿಕೆಯಲ್ಲಿ 50 ವರ್ಷ ಪೂರ್ಣಗೊಳಿಸಿದ್ಧಾರೆ.
ಮಲ್ಲಿಕಾರ್ಜುನ ಮುತ್ತಲಗೇರಿ ನಿರ್ದೇಶನದ ವೀರ್ ಸಮರ್ಥ ಸಂಗೀತ ನಿರ್ದೇಶನದಲ್ಲಿ “ಹುಲಿಬೀರ” ಚಿತ್ರದಲ್ಲಿ ನಾಯಕ ಕುರಿತು ಹಾಡಿರುವ “ಬಿರಬಿಸಿಲನ್ಯಾಗ ಹುಟ್ಟಿ ಬಂದ ಹುಲಿಬೀರ..” ಹಾಡು ಅವರ ಹಾಡುಗಾರಿಕೆಯ ಮತ್ತೊಂದು ಜನಪ್ರಿಯ ಹಾಡುಗಳ ಪಟ್ಟಿಗೆ ಸೇರಿಕೊಳ್ಳಲಿದೆ,

ಈ ವೇಳೆ ಮಾತನಾಡಿದ ಸಂಗೀತ ಕಟ್ಟಿ ಕುಲಕರ್ಣಿ ಸಿನಿಮಾ ಕನಸು ಕಾಣಲು ಎಲ್ಲರಿಗೂ ಸ್ವಾತಂತ್ರ್ಯ ಇದೆ. ಪ್ರತಿಭೆಗಳು ಅವಕಾಶಕ್ಕಾಗಿ ಹಾತೊರೆಯುತ್ತಾರೆ, ಹಗಲು ಕಂಡ ಕನಸು ನನಸಾಗುವ ಪ್ರಕ್ರಿಯೆ ಮುಖ್ಯ, ಆ ಜರ್ನಿಯೇ ದೊಡ್ಡದು. ನಾಲ್ಕನೇ ವಯಸ್ಸಿಗೆ ಹಾಡುಗಾರಿಗೆ ಆರಂಭಿಸಿ ಇದೀಗ ಗಾನಲೋಕದಲ್ಲಿ 50 ವರ್ಷ ಪೂರ್ಣಗೊಳಿಸಿದ್ದೇನೆ, ಮೊದಲ ಬಾರಿಗೆ ಸಿನಿಮಾಗಾಗಿ 1991ರಲ್ಲಿ ಹಾಡಿದ್ದೆ, ಆರಂಭದಿಂದಲೂ ಲಹರಿ ಆಡಿಯೋ ಕಂಪನಿ ಪ್ರೋತ್ಸಾಹಿಸುತ್ತಾ ಬರಿತ್ತಿದೆ
ಯಾವುದೇ ಕ್ಷೇತ್ರದಲ್ಲಿ ಹುಚ್ಚಿಲ್ಲದೆ ಆಗುವುದಿಲ್ಲ,ಅದರಲ್ಲಿಯೂ ಸಿನಿಮಾ ಎನ್ನುವುದು ಸುಂದರ ಕ್ಷಣ. ಗುರುಕುಲ, ಗದುಗಿನ ಪರಂಪರೆಯಲ್ಲಿ ಬೆಳದ ನನ್ನನ್ನು ಇಲ್ಲಿಯೇ ಬಾ ಮಗಳೆ ಎಂದು ಬರಮಾಡಿಕೊಂಡು ಗೌರವ ನೀಡಿದೆ ಎಂದು ತಮ್ಮ ಐವತ್ತು ವರ್ಷಗಳ ಗಾಯನ ಲೋಕವನ್ನು ಮೆಲುಕು ಹಾಕಿದರು.,

