ಉತ್ತರ ಕರ್ನಾಟಕ ಹುಡುಗ ಕಥೆಯ “ಹುಲಿಬೀರ” ಚಿತ್ರದ ಹಾಡುಗಳು ಬಿಡುಗಡೆ
ರೂರಲ್ ಸ್ಟಾರ್ ಅಂಜನ್ ನಾಯಕನಾಗಿ ಕಾಣಿಸಿಕೊಂಡಿರುವ ಮದರಂಗಿಮಲ್ಲಿಕಾರ್ಜುನ್ ಆಕ್ಷನ್ ಕಟ್ ಹೇಳಿರುವ “ಹುಲಿಬೀರ” ಚಿತ್ರದ ಐದು ಹಾಡುಗಳು ಬಿಡುಗಡೆಯಾಗಿದ್ದು ಒಂದಕ್ಕಿಂತ ಒಂದು ಹಾಡುಗಳು ಗಮನ ಸೆಳೆದಿವೆ

“ಜಿಗರಿ ದೋಸ್ತ” ಹಾಡನ್ನು ಮಾಳು ನಿಪ್ಪನಾಳ್ ಮತ್ತು ಶಿವಾನಿ ಶಿವದಾಸ್‍ಸ್ವಾಮಿ ಹಾಡಿದ್ದು ಶಿವು ಬೆರಗಿ ಹಾಡಿಗೆ ಗೀತ ರಚನೆ ಮಾಡಿದ್ದಾರೆ.
“ಬಿರಬಿಸಿಲನ್ಯಾಗ ಹುಟ್ಟಿ ಬಂದಹುಲಿಬೀರ” ನಾಗಿ ಹಾಡನ್ನು ಹಿರಿಯ ಗಾಯಕಿ ಸಂಗೀತ ಕಟ್ಟಿ ಹಾಡಿದ್ದಾರೆ. ಕೊಟ್ಟನಾಗ ಜರತಾರಿ ಸೀರೆ.. ಕೈಯಾಗ ಇಟ್ಟನಾಗ ಬಂಗಾರದ ಬಳೆ ಚಿತ್ರದ ಹಾಡಿನಲ್ಲಿ ಅಂಜನ್ ಹಾಗು ಚೈತ್ರ ಮಠದ ಕಾಣಿಸಿಕೊಂಡಿದ್ದು ಹಾಡು ಗಮನ ಸೆಳೆದಿದೆ
ಬಂದಾನ ನೋಡ ಚೆಂದುಳ್ಳ ಚೆಲುವ ಮನಸ್ಸನ್ನು ಗೆದಿಯಾಕ ಹಾಗು ಕುತೂಹಲ ಹೆಚ್ಚಿಸಿದೆ, ಜೊತೆಗೆ ಪರಪಂಚ ದುಂಡು.. ದುಂಡು ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದು ಒಂದೊಂದು ಹಾಡು ಕೂಡ ಗಮನ ಸೆಳೆದಿದೆ, ಚಿತ್ರಕ್ಕೆ ವೀರ ಸಮರ್ಥ್ ಸಂಗೀತ ನೀಡಿದ್ದು ಧರ್ಮ ವಿಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ
ಚಿತ್ರಕ್ಕೆ ದವಲ ಸಾಹೇಬ್ ಸಾಹೇಬ್ ಹುಣಣಶೀ ಮರದ, ,ಸುಜತಾ ಗಿರೀಶ್, ಅಶೋಕ್ ತುರುವೇಕೆರೆ ಬಂಡವಾಳ ಹಾಕಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಚಿತ್ರ ಜುಲೈ 24 ರಂದು ತೆರೆಗೆ ಬರಲು ಸಜ್ಜಾಗಿದೆ

ನಾಯಕ ಅಂಜನ್ ಮಾತನಾಡಿ ಹುಟ್ಟಿ ಬೆಳೆದ ಹುಲಿಬೀರನಾಗಿ, ಹಾಡನ್ನು ನನಗೇ ಬರೆದಂತಿದೆ, ಪ್ರತಿ ಮನೆಯಲ್ಲಿ ಹುಡುಗ ಮನೆಗೆ ಮಾರಿ ಪರರಿಗೆ ಉಪಕಾರಿ ಎನ್ನುವಂತೆ ಇದೆ. ಹಳ್ಳಿಯಲ್ಲಿ ಓದದ ಹುಡುಗ, ಇಡೀಗ ಹುಡುಗ ಇಡೀ ಹಳ್ಳಿಗೆ ಹೇಗೆ ಬೇಕಾಗುತ್ತಾನೆ ಎನ್ನುವ ಕಥೆ ಹೊಂದಿದೆ. ಒಂದಷ್ಟು ಜನರಿಗೆ ಸಿನಿಮಾ ತೋರಿಸಿದಾಗ ಕ್ಲೈಮ್ಯಾಕ್ಸ್ ನೋಡುವಾಗ ಎಲ್ಲರ ಕಣ್ಣಲ್ಲೂ ನೀರುಬಂತು. ನನ್ನ ತಾಯಿ ಪಾತ್ರವನ್ನು ಸುನಂದಮ್ಮ ಮಾಡಿದ್ದಾರೆ. ಮಲ್ಲು ಬಾಗಲಕೋಟೆ, ಮಾವನ ಪಾತ್ರ ಮಾಡಿದ್ದಾರೆ ಎಂದರು.
ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ ಈ ಕಾನ್ಸೆಪ್ಟ್ ಐದಾರು ವರ್ಷಗಳ ಹಿಂದೆಯೇ ಹುಟ್ಟಿದ್ದು. ಜುಲೈ 24ಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಹಳ್ಳಿಯ ಮುಗ್ದ ಹುಡುಗನ ಕಥೆ. ನನ್ನ ಊರಲ್ಲಿ ನೋಡಿದ್ದು, ನಮ್ಮೆಲ್ಲರ ಜೀವನದಲ್ಲಿ ನಡೆವ ಘಟನೆಗಳೇ ಈ ಚಿತ್ರ. ಹಳ್ಳಿಯ ಹುಡುಗನೊಬ್ಬ ತನ್ನೂರನ್ನು ಉದ್ದಾರ ಮಾಡುವ ಕಥೆಯಿದು ಎಂದರು.
ವಿದ್ಯಾವಂತ ಯುವಕ, ಯುವತಿಯರೆಲ್ಲ ಕೆಲಸ ಅಂತ ಸಿಟಿಗೆ ಹೋದರೆ ಆ ಹಳ್ಳಿಗಳನ್ನು ಬೆಳೆಸೋರು ಯಾರು, ಈ ಸಮಸ್ಯೆಯನ್ನು ಬೀರ ಹೇಗೆ ಬಗೆಹರಿಸುತ್ತಾನೆ. ಅವರೆಲ್ಲ ಮತ್ತೆ ಹೇಗೆ ಹಳ್ಳಿಗೆ ಮರಳುವಂತೆ ಮಾಡಿ, ಹಳ್ಳಿಯನ್ನು ಉದ್ದರಿಸುತ್ತಾನೆ, ಹುಲಿಬೀರ ಎನಿಸಿಕೊಳ್ಳುವ ಕಥೆಯನ್ನು ಚಿತ್ರ ಒಳಗೊಂಡಿದೆ ಎಂದು ಹೇಳಿದರು
ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿ ಚಿತ್ರದಲ್ಲಿ ಜಾನಪದ ಶೈಲಿಯ, ಮಣ್ಣಿನ ಸೊಗಡಿನ ನಾಲ್ಕು ಹಾಡು ಹಾಗೂ 2 ಬಿಟ್ ಗಳಿವೆ, ನಿರ್ದೇಶಕರು, ಶಿವು ಬೆರ್ಗಿ, ನಾಗೇಂದ್ರ ಪ್ರಸಾದ್ ಹಾಡು ಬರೆದಿದ್ದಾರೆ. ಹುಟ್ಟಿಬಂದೆ ಹುಲಿಬೀರನಾಗಿ ಸಂಗೀತಾ ಕಟ್ಟಿ ಹಾಡಿದ್ದಾರೆ. ಒಂದೂರಲ್ಲಿ ನಡೆಯುವ ಕಥೆ,ಅಂಜನ್ ಪಾತ್ರ ನೋಡಿ ಅತ್ತಿದ್ದೇನೆ ಎಂದರು.

ನಿರ್ಮಾಪಕ ದಾವಲ ಸಾಹೇಬ ಹುಣಶೀಮರದ ಮಾತನಾಡಿ ಚಿತ್ರವೀಗ ರಿಲೀಸ್ ಹಂತಕ್ಕೆ ಬಂದಿದೆ. ವೇಲು ಅವರು ನಮಗೆ ತುಂಬಾ ಸಪೆÇೀರ್ಟ್ ಮಾಡಿದರು. ನಮ್ಮ ಚಿತ್ರ ಗೆದ್ದಷ್ಟೇ ಖುಷಿಯಾಗಿದೆ. ಉತ್ತರ ಕರ್ನಾಟಕದ ಸೊಗಡನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.
ಮತ್ತೊಬ್ಬ ನಿರ್ಮಾಪಕ ಅಶೋಕ್ ತುರುವೇಕೆರೆ ಮಾತನಾಡಿ ಸಿನಿಮಾ ಈ ಮಟ್ಟಕ್ಕೆ ಬರಲು ಗಿರೀಶ್ ಕಾರಣ. ನಾನು ಉತ್ತರ ಕರ್ನಾಟಕದವನಲ್ಲ, ದಾವಲ್ ಸಾಹೇಬರು ಕಥೆ ಹೇಳಿ ಸಾಥ್ ಕೊಡಿ ಅಂದರು. ಇವತ್ತು ಹಾಡುಗಳನ್ನು ನಿಮ್ನ ಮುಂದೆ ಇಟ್ಟಿದ್ದೇವೆ ಎಂದರು.
ಸುಜಾತ ಗಿರೀಶ್ ಮಾತನಾಡಿ ನಾವು ಉತ್ತರ ಕರ್ನಾಟಕದವರು, ಎಲ್ಲರೂ ನಮ್ಮಕಡೆ ಬರಬೇಕು. ಅಲ್ಲಿನ ಸೊಗಡನ್ನು ಸವಿಯಬೇಕು. ನಮ್ಮ ಚಿತ್ರ ಎಲ್ಲಾ ಭಾಷೆಗಳಲ್ಲಿ ಆಗಬೇಕು ಎಂಬಾಸೆ ಇದೆ ಎಂದರು.

ನಾಯಕಿ ವನು ಪಾಟೀಲ ಮಾತನಾಡಿ ಯೂಟೂಬ್ ಮಾಡ್ತ ಇದ್ದೆ. ಚಿತ್ರದಲ್ಲಿ ನಟಿಸಲು ನಿರ್ದೇಶಕರೇ ಕಾರಣ ಎಂದರು
ಗುರುರಾಜ್, ಸಂತೋಷ್ , ಸಿದ್ದು ಮೂಲಿಮನು, ಅಕ್ಷಿತ್ ಶಶಿಕುಮಾರ್ , ವಿಕ್ರಮ್ ಶ್ರೀಧರ್ ಸೇರಿದಂತೆ ಮತ್ತಿತರು ಚಿತ್ರಕ್ಕೆ ಶುಭ ಹಾರೈಸಿದರು


