ಲೈಲಾಳ ಕನಸು ಬೆನ್ನತ್ತಿದ್ದ ನಟಿ ಚೈತ್ರಾ ಆಚಾರ್ : ಎಂಡಿ ಪಲ್ಲವಿ ಸಾಥ್
ತಾಯಿ- ಮಗಳ ಸಂಬಂದ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡಿರುವ ” ಲೈಲಾಸ್ ಸ್ವೀಟ್ ಡ್ರೀಮ್ ” ಚಿತ್ರದಲ್ಲಿ ನಟಿ ಚೈತ್ರಾ ಆಚಾರ್ ಕನಸು ಬೆನ್ನತ್ತಿದ್ದು ಗಾಯಕಿ ಎಂಡಿ ಪಲ್ಲವಿ ಹಲವು ವರ್ಷಗಳ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಯುವಪ್ರತಿಭೆ ಶಕ್ತಿಪ್ರಸಾದ್ ಚಿತ್ರದ ಮೂಲಕ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದು ಜಯರಾಮ್ ದೇವಸಮುದ್ರ ಹೊಸ ಹುಡುಗರ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಹಿರಿಯ ನಟ ಅವಿನಾಶ್ ಕೂಡ ಚಿತ್ರದಲ್ಲಿದ್ದಾರೆ
ಎಲ್ ಎಸ್ ಡಿ -ಬಲೈಲಾಸ್ ಸ್ವೀಟ್ ಡ್ರೀಮ್ ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು ಯುವ ಪ್ರತಿಭೆಗಳ ಸಾಮರ್ಥ್ಯ ಅನಾವರಣಗೊಂಡಿದೆ
ನಿರ್ದೇಶಕ ಶಕ್ತಿ ಪ್ರಸಾದ್ ಮಾಹಿತಿ ನೀಡಿ ಸ್ನೇಹಿತರ ಜೊತೆಗೂಡಿ ಅನೇಕ ಕಿರುಚಿತ್ರ ನಿರ್ಮಾಣ ಮಾಡಿದ್ದೇವೆ.”ಲೈಲಾಸ್ ಸ್ವೀಟ್ ಡ್ರೀಮ್” ಮೊದಲ ಚಿತ್ರ ವಿಭಿನ್ನ ಕಥಾಹಂದರ ಹೊಂದಿದೆ. ತಾಯಿ – ಮಗಳ ಬಾಂಧವ್ಯದ ಚಿತ್ರವೂ ಇದೆ. ಚೈತ್ರಾ ಜೆ ಆಚಾರ್ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದು, ತಾಯಿ ಪಾತ್ರದಲ್ಲಿ ಎಂ.ಡಿ.ಪಲ್ಲವಿ ನಟಿಸುತ್ತಿದ್ದಾರೆ. ದಿವಾಳಿ ಆಗಿರುವ ಉದ್ಯಮಿ ಪಾತ್ರದಲ್ಲಿ ಹಿರಿಯನಟ ಅವಿನಾಶ್ ಕಾಣಿಸಿಕೊಳ್ಳುತ್ತಿದ್ದಾರೆ ಎಂದರು.
ಮಿಥುನ್ ಮುಕುಂದನ್ ಸಂಗೀತ ನಿರ್ದೇಶನ, ರಿತೇಶ್ ಛಾಯಾಗ್ರಹಣ ಹಾಗೂ ಬಲರಾಮ್ ಸಂಕಲನವಿರುವ ಚಿತ್ರಕ್ಕೆ ಈಗಾಗಲೇ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಜನವರಿ 15 ರಿಂದ ಎರಡನೇ ಹಂತದ ಚಿತ್ರೀಕರಣ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ ನಿದ್ರಾದೇವಿ ನೆಕ್ಸ್ಟ್ ಡೋರ್” ಬಳಿಕ ಶ್ರೀಮುರಳಿ ಅಭಿನಯದ “ಉಗ್ರಾಯಧಮ್” ಹಾಗೂ “ನೀ ನಂಗೆ ಅಲ್ವಾ” ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಹೊಸಪ್ರತಿಭೆಗಳಿಗೆ ಅವಕಾಶ ಮಾಡಿಕೊಡಬೇಕೆಂಬುದು ಉದ್ದೇಶ. ಹಾಗಾಗಿ ಯುವ ಪ್ರತಿಭೆ ಶಕ್ತಿಪ್ರಸಾದ್ ಹೇಳಿದ ಎಲ್ ಎಸ್ ಡಿ ಕಥೆ ನಿರ್ಮಾಣ ಮಾಡುತ್ತಿದ್ದೇವೆ ಎಲ್ಲರ ಸಹಕಾರವಿರಲಿ ಎಂದರು.
ನಟಿ ಚೈತ್ರಾ ಜೆ ಆಚಾರ್ ಮಾತನಾಡಿ ಶಕ್ತಿಪ್ರಸಾದ್ ಸುಮಾರು ಒಂದುವರೆ ವರ್ಷಗಳ ಹಿಂದೆ ಕಥೆ ಹೇಳಿದರು ಜೊತೆಗೆ ಬೇರೆ ಭಾಷೆಗಳ ನಿರ್ಮಾಪಕರ ಬಳಿ ಕಥೆ ಹೇಳಿದ್ದಾರೆ. ಅವರೆಲ್ಲರೂ ಕಥೆ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಕನ್ನಡದಲ್ಲೇ ಈ ಚಿತ್ರ ಮಾಡಬೇಕೆಂಬ ಉದ್ದೇಶದಿಂದ ಅವರು ಬೇರೆ ಭಾಷೆಗಳಲ್ಲಿ ಈ ಚಿತ್ರ ಮಾಡಲಿಲ್ಲ. ನಿರ್ಮಾಪಕ ಜಯರಾಮ್ ದೇವಸಮುದ್ರ ಅವರು ಕನ್ನಡದಲ್ಲಿ ನಿರ್ಮಾಣಕ್ಕೆ ಮುಂದಾದರು. ಈವರೆಗೂ ಮಾಡಿರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದು ಹೇಳಿದರು.

ಗಾಯಕಿ ಎಂ.ಡಿ ಪಲ್ಲವಿ ಮಾತನಾಡಿ ಕೆಲವು ವರ್ಷಗಳ ನಂತರ ಮತ್ತೆ ಸಿನಿಮಾದಲ್ಲಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಚೈತ್ರಾ ಜೆ ಆಚಾರ್ ಮೂಲಕ ನನಗೆ ಈ ವಿಷಯ ತಿಳಿಯಿತ್ತು. ಶಕ್ತಿಪ್ರಸಾದ್ ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಚೈತ್ರಾ ಜೆ ಆಚಾರ್ ಅಮ್ಮನ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ ಎಂದರು.
ಹಿರಿಯ ನಟ ಅವಿನಾಶ್ ಮಾತನಾಡಿ ಸಾಕಷ್ಟು ಸಿನಿಮಾ ತಂಡಗಳ ಜೊತೆಗೆ ಕೆಲಸ ಮಾಡಿದ್ದೇನೆ. ಆದರೆ ಈ ತಂಡದ ಜೊತೆಗೆ ಕೆಲಸ ಮಾಡಿರುವುದು ಬಹಳ ಖುಷಿಯಾಗಿದೆ. ನನ್ನದು ಈ ಚಿತ್ರದಲ್ಲಿ ಬ್ಯುಸಿನೆಸ್ ಮ್ಯಾನ್ ಪಾತ್ರ ಎಂದು ಹೇಳಿದರು.
ಸಂಗೀತ ನಿರ್ದೇಶನದ ಕುರಿತು ಮಿಥುನ್ ಮುಕುಂದನ್ ಹಾಗೂ ಛಾಯಾಗ್ರಹಣದ ಬಗ್ಗೆ ರಿತೇಶ್ ಮಾತನಾಡಿದರು..


