“ಜನನಾಯಕನ್’” ಆಡಿಯೋ ಬಿಡುಗಡೆ: ದಾಖಲೆ ಬರೆದ ದಳಪತಿ ವಿಜಯ್ ಚಿತ್ರ
ಮಲೇಷ್ಯಾದಲ್ಲಿ ‘ಜನನಾಯಕನ್’ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.. ಈ ಮೂಲಕ ಅಧಿಕೃತವಾಗಿ ‘ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್’ಗೆ ಸೇರ್ಪಡೆಯಾಗಿದೆ

ನಟ ದಳಪತಿ ವಿಜಯ್ ತಾಯಿ ನೀಡಿದ ವಿಶೇಷ ಪ್ರದರ್ಶನ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು. ವಿಜಯ್ ವೇದಿಕೆಯ ಮೇಲೆ ಓಡಿಹೋಗಿ ತಂದೆಯನಗನು ಆಲಂಗಿಸಿಕೊಂಡ ಕ್ಷಣ ಇಡೀ ಚಪ್ಪಾಳೆ ಮತ್ತು ಹರ್ಷೋದ್ಗಾರಗಳನ್ನು ಮೊಳಗಿಸಿತು
ನಿರ್ದೇಶಕ ಹೆಚ್. ವಿನೋತ್ ಮಾತನಾಡಿ, ನೂರಕ್ಕೆ ನೂರರಷ್ಟು ದಳಪತಿ ವಿಜಯ್ ಸಿನಿಮಾ ಹಾಗೂ ಅಸಿದ್ಧಾಂತ ಮತ್ತು ಅಭಿಮಾನಿಗಳೊಂದಿಗಿನ ಬಾಂಧವ್ಯದ ಆಚರಣೆಯಾಗಿದೆ ಎಂದು ಖಚಿತಪಡಿಸಿದರು.
ಈ ವೇಳೆ ನಿರ್ದೇಶಕರಾದ ಅಟ್ಲಿ, ಲೋಕೇಶ್ ಕನಕರಾಜ್ ,ನೆಲ್ಸನ್ ದಿಲೀಪ್ಕುಮಾರ್ ,ವಿಜಯ್ ಚಿತ್ರ ಯಶಶ್ವಿಯಾಗಲಿ ಎಂದು ಹಾರೈಸಿದರು.
.
ನಟ ಪ್ರಭುದೇವ ,ವಿಜಯ್ ಜೊತೆಗೂಡಿ ಐಕಾನಿಕ್ ‘ಪೋಕ್ಕಿರಿ’ ಸ್ಟೆಪ್ ಹಾಕಿ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ‘ಯಾರು ಪೆಟ್ರ ಮಗನೋ’ ಹಾಡಿನ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ದಗೊಳಸಿದರು.
ನಟ ದಳಪತಿ ವಿಜಯ್ ಮಾತನಾಡಿ ಇದು ಚಿತ್ರ ಜೀವನದ ತಮ್ಮ ಕೊನೆಯ ಸಿನಿಮಾ ಎಂದು ಮತ್ತೊಮ್ಮೆ ಪುನರುಚ್ಚರಿಸಿ. ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದರು.
ಹಿರಿಯ ನಟ ನಾಸರ್ , ವಿಜಯ್ ಸಿನಿಮಾ ರಂಗದಲ್ಲಿ ಮುಂದುವರಿಯಬೇಕೆಂದು ಮನವಿ ಮಾಡಿದರು. ತೆಲುಗು ನಟ ಸುನಿಲ್ ತಮ್ಮ 25 ವರ್ಷಗಳ ವೃತ್ತಿಜೀವನದಲ್ಲಿ ಇಷ್ಟು ದೊಡ್ಡ ಜನಸಾಗರವನ್ನು ಎಂದೂ ನೋಡಿಲ್ಲವೆಂದು ಆಶ್ಚರ್ಯ ವ್ಯಕ್ತಪಡಿಸಿದರು.
ನಟಿ ಮಮಿತಾ ಬೈಜು ಕೂಡ ವಿಜಯ್ ಅವರಿಗಾಗಿ ವಿಶೇಷ ನೃತ್ಯ ಪ್ರದರ್ಶನ ನೀಡಿದರು.’ಜನನಾಯಕನ್’ ಚಿತ್ರ ಜನವರಿ 9 ರಂದು ಪೊಂಗಲ್ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದ್ದು, ಐತಿಹಾಸಿಕ ಆಡಿಯೋ ಲಾಂಚ್ ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

